AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಲಕರಿಗೆ ಗುಡ್ ​ನ್ಯೂಸ್: ಸರ್ಕಾರದಿಂದ ನೀಡುವ ಆಟೋ, ಕ್ಯಾಬ್‌ಗಳಿಗೆ ಇನ್ಮುಂದೆ ಕೆಂಪು-ಹಳದಿ ಬಣ್ಣ ಕಡ್ಡಾಯ

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಆಟೋ, ಕ್ಯಾಬ್ ಮತ್ತು ಗೂಡ್ಸ್ ವಾಹನಗಳಿಗೆ ಹೊಸ ನಿಯಮ ಜಾರಿಗೊಳಿಸಿದೆ. ವಿವಿಧ ಸರ್ಕಾರಿ ಯೋಜನೆಗಳಡಿ ನೀಡುವ ವಾಹನಗಳಿಗೆ ಹಳದಿ-ಕೆಂಪು ಬಣ್ಣ ಮತ್ತು ರಾಜ್ಯ ಲಾಂಛನವನ್ನು ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕರಿಗೆ ವಾಹನಗಳನ್ನು ಸುಲಭವಾಗಿ ಗುರುತಿಸಲು ಹಾಗೂ ಕನ್ನಡದ ಕಂಪು ಪಸರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಚಾಲಕರು ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ್ದಾರೆ.

ಚಾಲಕರಿಗೆ ಗುಡ್ ​ನ್ಯೂಸ್: ಸರ್ಕಾರದಿಂದ ನೀಡುವ ಆಟೋ, ಕ್ಯಾಬ್‌ಗಳಿಗೆ ಇನ್ಮುಂದೆ ಕೆಂಪು-ಹಳದಿ ಬಣ್ಣ ಕಡ್ಡಾಯ
ರಾಜ್ಯ ಸರ್ಕಾರ
ಕಿರಣ್​ ಸೂರ್ಯ
| Edited By: |

Updated on: Nov 09, 2026 | 9:25 PM

Share

ಮುಖ್ಯಾಂಶಗಳು

  • ಆಟೋ, ಕ್ಯಾಬ್, ಗೂಡ್ಸ್ ಚಾಲಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್
  • ಸರ್ಕಾರದಿಂದ ನೀಡುವ ವಾಹನಗಳಿಗೆ ಹಳದಿ-ಕೆಂಪು ಬಣ್ಣ ಕಡ್ಡಾಯ
  • ಚಾಲಕ ಸಂಘಟನೆಗಳು ಸಂತಸ

ಬೆಂಗಳೂರು, ನವೆಂಬರ್​​ 09: ಕನ್ನಡ ರಾಜ್ಯೋತ್ಸವ ಹಿನ್ನೆಲೆ ರಾಜ್ಯ ಸರ್ಕಾರ ಆಟೋ, ಕ್ಯಾಬ್, ಗೂಡ್ಸ್ ಚಾಲಕರಿಗೆ ಗುಡ್ ನ್ಯೂಸ್​ವೊಂದನ್ನು ನೀಡಿದೆ. ಸರ್ಕಾರದ ಹಲವು ಯೋಜನೆಗಳ ಅಡಿಯಲ್ಲಿ ನೀಡುವ ವಾಹನಗಳಿಗೆ ಹಳದಿ-ಕೆಂಪು ಬಣ್ಣ ಕಡ್ಡಾಯ ‌ಮಾಡಿ ಆದೇಶ ಹೊರಡಿಸಲಾಗಿದೆ. ಇದಕ್ಕೆ ಆಟೋ ಮತ್ತು ಕ್ಯಾಬ್ ಚಾಲಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಆಟೋ, ಕ್ಯಾಬ್​ಗಳಿಗೆ ಸಂಪೂರ್ಣ ಹಳದಿ, ಕೆಂಪು ಬಣ್ಣ ಪೇಂಟಿಂಗ್

ಕನ್ನಡ ರಾಜ್ಯೋತ್ಸವದ ಹಿನ್ನೆಲೆ ರಾಜ್ಯ ಸರ್ಕಾರದಿಂದ ರಾಜ್ಯದ ಕ್ಯಾಬ್, ಆಟೋ ಚಾಲಕರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಇನ್ಮುಂದೆ ರಾಜ್ಯ ಸರ್ಕಾರದಿಂದ ನೀಡುವ ಎಲ್ಲಾ ಮಾದರಿಯ ಆಟೋ, ಕ್ಯಾಬ್​ಗಳಿಗೆ ಸಂಪೂರ್ಣ ಹಳದಿ, ಕೆಂಪು ಬಣ್ಣವನ್ನು ಪೇಂಟಿಂಗ್ ಮಾಡಿಕೊಳ್ಳಲು ಅವಕಾಶ ನೀಡಿದೆ. ಹಲವು ವರ್ಷಗಳಿಂದ ಆಟೋ, ಕ್ಯಾಬ್ ಚಾಲಕರು ಹಳದಿ, ಕೆಂಪು ಪೇಂಟಿಂಗ್ ಮಾಡಿಕೊಳ್ಳಲು ಅವಕಾಶ ಕೇಳಿದ್ದರು.

ಇದನ್ನೂ ಓದಿ: ಬೆಂಗಳೂರು ಆಸ್ತಿ ಮಾಲೀಕರಿಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್: ಖಾಲಿ ಜಾಗಕ್ಕೆ ಕಾಂಪೌಂಡ್ ಹಾಕಿ, ಇಲ್ಲದಿದ್ದರೆ ನೋಟಿಸ್

ರಾಜ್ಯ ಸರ್ಕಾರದ ಹಲವು ಯೋಜನೆಗಳ ಅಡಿಯಲ್ಲಿ ಉಚಿತವಾಗಿ ಮತ್ತು ಸಬ್ಸಿಡಿ ಆಧಾರದಲ್ಲಿ ಆಟೋ, ಕ್ಯಾಬ್ ಗಳನ್ನು ಪ್ರತಿವರ್ಷ ನೀಡುತ್ತಿದೆ. ಸಾರಥಿ ಸ್ವಾವಲಂಬಿ ಯೋಜನೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ವ ಸಂಖ್ಯಾಂತರ ನಿಗಮ ಮಂಡಳಿ, ದೇವರಾಜು ಅರಸು ನಿಗಮ ಮಂಡಳಿ, ಒಕ್ಕಲಿಗ ಅಭಿವೃದ್ಧಿ ನಿಗಮ ಮಂಡಳಿ ಅಡಿಯಲ್ಲಿ ಫಲಾನುಭವಿಗಳಿಗೆ ಆಟೋ, ಕ್ಯಾಬ್, ಗೂಡ್ಸ್ ಆಟೋ, ತಳ್ಳೊ ಗಾಡಿಗಳನ್ನು ನೀಡಲಾಗುತ್ತದೆ.

ಹಳದಿ-ಕೆಂಪು ಬಣ್ಣದ ಜೊತೆಗೆ ರಾಜ್ಯ ಲಾಂಛನ ಕಡ್ಡಾಯ

ಇನ್ನು ಕರ್ನಾಟಕ ಸರ್ಕಾರದ ಯೋಜನೆಗಳಡಿ ನೀಡುವ ವಾಹನಗಳಿಗೆ ಹಳದಿ-ಕೆಂಪು ಬಣ್ಣದ ಜೊತೆಗೆ ರಾಜ್ಯ ಲಾಂಛನವನ್ನು ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕವಾಗಿ ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು, ನಿಗಮ ಮಂಡಳಿಗಳು ಮತ್ತು ಪ್ರಾಧಿಕಾರಗಳು ಈ ನಿಯಮವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಸಚಿವ ಸಂಪುಟ ಅನುಮೋದಿಸಿರುವ ವಿನ್ಯಾಸಗಳಂತೆ, ಆಯಾ ಇಲಾಖೆಗಳು ಸರಿಯಾಗಿ ಸರ್ಕಾರಿ ಬ್ರಾಂಡಿಂಗ್‌ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಹಿಸಲಾಗಿದೆ.

LIVE TV

ಇದು ಆಟೋ ಚಾಲಕರಿಗೆ ಹೆಮ್ಮೆಯ ವಿಚಾರ ಎಂದ ಆಟೋ ಚಾಲಕಿ

ಈ ನಿರ್ಧಾರದಿಂದಾಗಿ ಸರ್ಕಾರದ ವಿವಿಧ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ಸೌಲಭ್ಯ ಪಡೆದ ವಾಹನಗಳು ಮತ್ತು ಉಪಕರಣಗಳನ್ನು ಸಾರ್ವಜನಿಕವಾಗಿ ಸುಲಭವಾಗಿ ಗುರುತಿಸಲು ಅನುಕೂಲವಾಗಲಿದೆ. ಈ ಬಗ್ಗೆ ‌ಮಾತನಾಡಿದ ಆಟೋ ಚಾಲಕಿ ನಾಗರತ್ನ, ‘ಇದು ಆಟೋ ಚಾಲಕರಿಗೆ ಹೆಮ್ಮೆಯ ವಿಚಾರ. ಬೆಂಗಳೂರಲ್ಲಿ ಕನ್ನಡ ಕಳೆದು ಹೋಗ್ತಿದ್ದು, ಇದರಿಂದ ಕನ್ನಡದ ಬಗ್ಗೆ ಒಂದಷ್ಟು ಜಾಗೃತಿಯಾಗಲಿದೆ’ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮುಂದುವರೆದ ರಸ್ತೆ ಗುಂಡಿಗಳ ಕಾಟ: ಖುದ್ದು ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು

ಒಟ್ಟಿನಲ್ಲಿ ರಾಜ್ಯ ಸರ್ಕಾರದ ಹಲವು ಪ್ರಾಧಿಕಾರಗಳ ಅಡಿಯಲ್ಲಿ ಸಾವಿರಾರು ಕಾರು, ಆಟೋ, ಗೂಡ್ಸ್ ವಾಹನಗಳನ್ನು ಖರೀದಿಸಲು ಸಬ್ಸಿಡಿ ನೀಡ್ತಿದ್ದು, ಇನ್ಮುಂದೆ ಈ ಎಲ್ಲಾ ವಾಹನಗಳ ಮೇಲೂ ಕನ್ನಡದ ಕಂಪು ರಾರಾಜಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ನಿರ್ದೇಶಕನ ಮೇಲೆ ಕಾನೂನು ಕ್ರಮ ಕೈಗೋಳ್ಳುತ್ತೇವೆ: ಪ್ರಿಯಾಂಕಾ ಎಚ್ಚರಿಕೆ
ನಿರ್ದೇಶಕನ ಮೇಲೆ ಕಾನೂನು ಕ್ರಮ ಕೈಗೋಳ್ಳುತ್ತೇವೆ: ಪ್ರಿಯಾಂಕಾ ಎಚ್ಚರಿಕೆ
ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ
ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ
ಚೌಡೇಶ್ವರಿ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ
ಚೌಡೇಶ್ವರಿ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ
ರಸ್ತೆ ಗುಂಡಿಗಳ ಕಾಟ: ಖುದ್ದು ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು
ರಸ್ತೆ ಗುಂಡಿಗಳ ಕಾಟ: ಖುದ್ದು ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ