AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ 7 ಜನರ ಹತ್ಯೆ ಕೇಸ್:​ ಏಳು ಮೃತದೇಹಗಳು ಪತ್ತೆ; ಇಂದುಶೇಖರ್‌ನ ಸಂಚಿನ ಮತ್ತಷ್ಟು ಸುಳಿವು ಬಯಲು

ಬೆಂಗಳೂರಿನಲ್ಲಿ ನಡೆದಿರುವ ಸರಣಿ ಹತ್ಯೆ ಕೇಸ್​​ಗೆ ಸಂಬಂಧಿಸಿದಂತೆ ಕೊನೆಗೂ 7 ಮೃತದೇಹಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅಷ್ಟೇ ಅಲ್ಲದೆ ಆರೋಪಿ ಇಂದುಶೇಖರ್‌ನ ಸಂಚಿನ ಮತ್ತಷ್ಟು ಸುಳಿವು ಕೂಡ ಬಯಲಾಗಿದೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, 200ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಖಾಕಿ ಪಡೆ ಪರಿಶೀಲಿಸಿದ್ದಾರೆ.

ಬೆಂಗಳೂರಲ್ಲಿ 7 ಜನರ ಹತ್ಯೆ ಕೇಸ್:​ ಏಳು ಮೃತದೇಹಗಳು ಪತ್ತೆ; ಇಂದುಶೇಖರ್‌ನ ಸಂಚಿನ ಮತ್ತಷ್ಟು ಸುಳಿವು ಬಯಲು
7 ಜನರ ಕೊಲೆ ಪ್ರಕರಣ
ಪ್ರದೀಪ್​ ಚಿಕ್ಕಾಟಿ
| Edited By: |

Updated on: Nov 09, 2026 | 7:42 PM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಜನರ ಕೊಲೆ ಪ್ರಕರಣ
  • ಕೊನೆಗೂ 7 ಮೃತದೇಹಗಳು ಪತ್ತೆ
  • ಕೃತ್ಯ ನಡೆಸಲು ಏರಿಯಾದ ಸುತ್ತಮುತ್ತ ವಸ್ತುಗಳನ್ನು ಖರೀದಿಸಿದ್ದ ಶೇಖರ್​

ಬೆಂಗಳೂರು, ನವೆಂಬರ್​​ 09: ಬೆಂಗಳೂರನ್ನೇ ನಡುಗಿಸಿದ್ದ ಏಳು ಕೊಲೆಗಳ ಪ್ರಕರಣದಲ್ಲಿ, ಕೊನೆಗೂ ಎಲ್ಲಾ ಏಳು ಮೃತದೇಹಗಳನ್ನ ಪೊಲೀಸರು ಪತ್ತೆಹಚ್ಚಿದ್ದಾರೆ. ಇದರ ಬೆನ್ನಲ್ಲೇ ಆರೋಪಿ ಇಂದುಶೇಖರ್‌ನ, ಸಂಚಿನ ಮತ್ತಷ್ಟು ಸುಳಿವುಗಳು ಪೊಲೀಸರಿಗೆ ಸಿಕ್ಕಿವೆ. ಆರೋಪಿಯ ಚಲನವಲನಗಳನ್ನ ಪತ್ತೆಹಚ್ಚಲು ಪೊಲೀಸರು 200ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದಾರೆ.

ಏಳು ಮೃತದೇಹಗಳು: ಮೂರು ಬೆಟ್ಟಗುಡ್ಡಗಳು

7 ಮಂದಿಯನ್ನ ಕೊಂದು ಮುಗಿಸಿದ್ದ ಇಂದುಶೇಖರ್‌, ಒಂದೊಂದು ಶವವನ್ನ ಒಂದೊಂದು ದಿಕ್ಕಿಗೆ ಎಸೆದಿದ್ದ. ನಂದಿಬೆಟ್ಟದಲ್ಲಿ ಪುನೀತ್, ತಮಿಳುನಾಡಿನ ಏರ್ಕಾಡ್‌ನಲ್ಲಿ ಸುನೀತಾ, ರೂಪವತಿ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶಿವಕುಮಾರ್, ದಿವ್ಯಾ. ಇದೀಗ ಶಿರಾಡಿಘಾಟ್‌ನಲ್ಲಿ ಶಂಕರ್ ಮತ್ತು ನಳಿನಿ. ಹೀಗೆ ಬೇರೆ ಬೇರೆ ಕಡೆ ಎಸೆದಿದ್ದ ಏಳು ಮೃತದೇಹಗಳನ್ನ ಕೊನೆಗೂ ಪೊಲೀಸರು ಪತ್ತೆಹಚ್ಚಿದ್ದಾರೆ.

ಇದನ್ನೂ ಓದಿ: 7 ಜನರ ಹತ್ಯೆ ಕೇಸ್​​: ಈವರೆಗೆ ಐವರ ಮೃತದೇಹ ಪತ್ತೆ; ಉಳಿದ 2 ಶವಗಳಿಗಾಗಿ ಮುಂದುವರಿದ ಶೋಧ

ಇನ್ನು ಹಾಸನ ಜಿಲ್ಲೆಯ ಶಿರಾಡಿಘಾಟ್‌ನಲ್ಲಿ ಶಂಕರ್ ಹಾಗೂ ನಳಿನಿಯ ಮೃತದೇಹಗಳನ್ನ ಸಕಲೇಶಪುರ ಪೊಲೀಸರು ಪತ್ತೆಹಚ್ಚಿದ್ದಾರೆ. ಇಂದುಶೇಖರ್ ನೀಡಿದ್ದ ಮಾಹಿತಿ ಆಧರಿಸಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಇನ್ನು ಭಾನುವಾರ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲೂ, ಎರಡು ಮೃತದೇಹಗಳು ಪತ್ತೆಯಾಗಿದ್ದವು. ಶಿವಕುಮಾರ್ ಹಾಗೂ ಆತನ ಪತ್ನಿ ದಿವ್ಯಾಳ ಮೃತದೇಹಗಳನ್ನ, ಇಂದುಶೇಖರ್ ಬೆಟ್ಟದ ಮುಖ್ಯರಸ್ತೆ ಪಕ್ಕದ ಕಂದಕಕ್ಕೆ ಎಸೆದಿದ್ದ. ಇದಕ್ಕಾಗಿ ಜನರು ಓಡಾಡುವ ಪ್ರದೇಶದಲ್ಲೇ, ವ್ಯೂ ಪಾಯಿಂಟ್ ಸಮೀಪದ ಜಾಗವನ್ನ ಮೊದಲೇ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಕಾರಿನಲ್ಲಿ ಮೃತದೇಹಗಳನ್ನ ಸಾಗಿಸಿ, ರಸ್ತೆ ಪಕ್ಕದ ಕಂದಕಕ್ಕೆ ಎಸೆದು ಅಲ್ಲಿಂದ ಹೊರಟಿದ್ದ.

ಹಲವು ವಸ್ತುಗಳನ್ನ ಮೊದಲೇ ಖರೀದಿಸಿದ್ದ ಇಂದುಶೇಖರ್ 

ಇನ್ನು ಮತ್ತೊಂದು ಮಹತ್ವದ ಸಂಗತಿ ಬೆಳಕಿಗೆ ಬಂದಿದೆ. ಮೃತದೇಹಗಳನ್ನ ಚೀಲಗಳಲ್ಲಿ ತುಂಬಲು ಗೋಣಿಚೀಲ, ಪ್ಲಾಸ್ಟಿಕ್ ಹಾಗೂ ಟೇಪ್ ಬಳಸಿದ್ದ. ಮನೆಯೊಳಗಿನ ರಕ್ತದ ಕಲೆಗಳನ್ನ ತೊಳೆಯಲು ಕೆಮಿಕಲ್ ಉಪಯೋಗಿಸಿದ್ದ. ಹೀಗೆ ಹಲವು ವಸ್ತುಗಳನ್ನ ಇಂದುಶೇಖರ್ ಮೊದಲೇ ಖರೀದಿಸಿದ್ದ. ತನ್ನ ಮನೆ ಸುತ್ತಮುತ್ತಲಿನ ಅಂಗಡಿಗಳಲ್ಲೇ ಕೆಲವು ವಸ್ತುಗಳನ್ನ ಖರೀದಿಸಿದ್ದ. ಅಲ್ಲಿ ಸಿಗದ ವಸ್ತುಗಳಿಗಾಗಿ ಬೇರೆ ಪ್ರದೇಶಗಳಿಗೂ ಹೋಗಿದ್ದ ಅನ್ನೋದು ಗೊತ್ತಾಗಿದೆ.

LIVE TV

ಸಿಸಿಟಿವಿ ಪರಿಶೀಲನೆ ವೇಳೆ ತಾಂತ್ರಿಕ ಸಮಸ್ಯೆ: ಬ್ಯಾಕ್‌ಅಪ್ ಡಿಲೀಟ್

ಇಂದುಶೇಖರ್‌ನ ಚಲನವಲನಗಳನ್ನ ಪತ್ತೆಹಚ್ಚಲು, ಪೊಲೀಸರು ಸಿಸಿಟಿವಿ ಫೂಟೇಜ್‌ಗಳ ಮೊರೆ ಹೋಗಿದ್ದಾರೆ. ಅಕ್ಟೋಬರ್ 14ರಿಂದ ನವೆಂಬರ್ 3ರವರೆಗಿನ ದೃಶ್ಯಗಳನ್ನ ಪರಿಶೀಲಿಸಲಾಗುತ್ತಿದೆ. ಮನೆ ಸುತ್ತಮುತ್ತಲಿನ ಪ್ರದೇಶ, ಅಂಗಡಿಗಳು, ಪ್ರಮುಖ ಜಂಕ್ಷನ್‌ಗಳು, ಟೋಲ್‌ಗೇಟ್‌ಗಳು ಹೀಗೆ 200ಕ್ಕೂ ಹೆಚ್ಚು ಸಿಸಿಟಿವಿಗಳನ್ನ ತನಿಖಾ ತಂಡ ಪರಿಶೀಲಿಸಿದೆ. ಆದರೆ ಸಿಸಿಟಿವಿ ಪರಿಶೀಲನೆ ವೇಳೆ ಪೊಲೀಸರಿಗೆ ತಾಂತ್ರಿಕ ಸಮಸ್ಯೆಯೂ ಎದುರಾಗಿದೆ. ಹಲವು ಕ್ಯಾಮೆರಾಗಳಲ್ಲಿ ಹಳೆಯ ದೃಶ್ಯಗಳ ಬ್ಯಾಕ್‌ಅಪ್ ಡಿಲೀಟ್ ಆಗಿದೆ. ವಿಶೇಷವಾಗಿ ಅಕ್ಟೋಬರ್ 24ಕ್ಕೂ ಹಿಂದಿನ ಫೂಟೇಜ್‌ಗಳು ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ಆರೋಪಿ ಓಡಾಡಿದ್ದ ಬೇರೆ ಬೇರೆ ರಸ್ತೆಗಳು, ಜಂಕ್ಷನ್‌ಗಳು ಹಾಗೂ ಟೋಲ್‌ಗೇಟ್‌ಗಳ ಕ್ಯಾಮೆರಾಗಳನ್ನ ಪರಿಶೀಲಿಸಿ ಸಾಕ್ಷ್ಯ ಸಂಗ್ರಹಿಸುವ ಕೆಲಸ ಮುಂದುವರಿದಿದೆ.

ಮೂವರ ಅಂತ್ಯಸಂಸ್ಕಾರ

ಒಂದೆಡೆ ಪೊಲೀಸರ ತನಿಖೆ ಮುಂದುವರಿದಿದ್ರೆ, ಮತ್ತೊಂದೆಡೆ ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸುನೀತಾ, ಆಕೆಯ ತಾಯಿ ರೂಪವತಿ ಹಾಗೂ ಬಾಲಕ ಪುನೀತ್ ಅಂತ್ಯಸಂಸ್ಕಾರವನ್ನ ಕುಟುಂಬಸ್ಥರು ನೆರವೇರಿಸಿದ್ದಾರೆ. ಬೆಂಗಳೂರಿನ ಶ್ರೀರಾಮಪುರದಲ್ಲಿ ಮೂವರ ಅಂತಿಮ ವಿಧಿವಿಧಾನ ನಡೆದಿದೆ.

ಇದನ್ನೂ ಓದಿ: 7 ಜನರ ಹತ್ಯೆ ಪ್ರಕರಣ: ಆರೋಪಿ ಇಂದುಶೇಖರ್ ಸಹೋದರನೂ ಬೆಂಗಳೂರಲ್ಲಿ ಡಬಲ್​​ ಮರ್ಡರ್​​ ಮಾಡಿ ಸೃಷ್ಟಿಸಿದ್ದ ಸಂಚಲನ!

ಇಪ್ಪತ್ತು ದಿನಗಳ ಅವಧಿಯಲ್ಲಿ ಏಳು ಮಂದಿಯ ಕೊಲೆ ಮಾಡಿ ಒಬ್ಬೊಬ್ಬರ ಮೃತದೇಹವನ್ನ ಒಂದೊಂದು ಪ್ರದೇಶಕ್ಕೆ ಸಾಗಿಸಿ ಎಸೆದಿದ್ದ ಭೀಕರ ಪ್ರಕರಣದಲ್ಲಿ, ಈಗ ಎಲ್ಲಾ ಏಳು ಮೃತದೇಹಗಳು ಪತ್ತೆಯಾಗಿವೆ. ಏಳು ಮಂದಿಯನ್ನ ಕಳೆದುಕೊಂಡ ಕುಟುಂಬಕ್ಕೆ ಈಗ ಉಳಿದಿರೋದು ಕಣ್ಣೀರು ಮತ್ತು ನೆನಪುಗಳು ಮಾತ್ರ. ಪೊಲೀಸರ ತನಿಖೆ ಬಳಿಕ, ಈ ಹತ್ಯೆಯ ಸಂಪೂರ್ಣ ಸಂಚು ಬಯಲಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಪ್ರದೀಪ್​ ಚಿಕ್ಕಾಟಿ
ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ
ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ
ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಆಸ್ಪತ್ರೆ
ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಆಸ್ಪತ್ರೆ
ಸ್ಟಿಂಗ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಸ್ಟಿಂಗ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್