AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳಿಗೆ ಅಂತರ್ಜಾತಿ ಮದುವೆ ಮಾಡಿಸಿದ ಜ್ಯೋತಿಷಿಯ ಪ್ರಾಣವೇ ತೆಗೆದ ತಂದೆ: ಖಾರದ ಪುಡಿ ಎರಚಿ ಮಾಡಿದ್ದೇನು?

ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಮಾನಕಾಪುರದಲ್ಲಿ ಜ್ಯೋತಿಷಿ ಮಂದಾರ್ ರಾಂಡೆ ಕೊಲೆ ನಡೆದಿದೆ. ತನ್ನ ಮಗಳ ಅಂತರಜಾತಿ ಪ್ರೇಮ ವಿವಾಹಕ್ಕೆ ಜ್ಯೋತಿಷಿ ನೆರವಾಗಿದ್ದಾರೆ ಎಂಬ ಆಕ್ರೋಶದಿಂದ ದೀಪಕ್ ಮುಕ್ಕಮ್ ಎಂಬ ತಂದೆ ಈ ಕೃತ್ಯ ಎಸಗಿದ್ದಾನೆ. ಅಪರಿಚಿತ ಫೋನ್ ಕರೆ ಮೂಲಕ ಮಾನಕಾಪುರಕ್ಕೆ ಕರೆಸಿ, ಖಾರದ ಪುಡಿ ಎರಚಿ, ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಗಳಿಗೆ ಅಂತರ್ಜಾತಿ ಮದುವೆ ಮಾಡಿಸಿದ ಜ್ಯೋತಿಷಿಯ ಪ್ರಾಣವೇ ತೆಗೆದ ತಂದೆ: ಖಾರದ ಪುಡಿ ಎರಚಿ ಮಾಡಿದ್ದೇನು?
ಮಂದಾರ್ ರಾಂಡೆ ಹಾಗೂ ದೀಪಕ್ ಮುಕ್ಕಮ್Image Credit source: Tv9 kannada
ಸಹದೇವ್​ ಮಾನೆ
| Edited By: |

Updated on: Nov 09, 2026 | 5:21 PM

Share

ಚಿಕ್ಕೋಡಿ, ನ.9: ತನ್ನ ಮಗಳಿಗೆ ಬೇರೆ ಜಾತಿಯ ಯುವಕನೊಂದಿಗೆ ಮಧ್ಯಸ್ಥಿಕೆ ವಹಿಸಿ ಪ್ರೇಮ ವಿವಾಹ ಮಾಡಿಸಿದ್ದಾನೆ ಎಂಬ ಆಕ್ರೋಶದಿಂದ ತಂದೆಯೊಬ್ಬ ಜ್ಯೋತಿಷಿಯನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾನಕಾಪುರದಲ್ಲಿ ನಡೆದಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಚಲಕರಂಜಿ ಪಟ್ಟಣದ ನಿವಾಸಿ ಮಂದಾರ್ ರಾಂಡೆ (35) ಕೊಲೆಯಾದ ದುರ್ದೈವಿ ಜ್ಯೋತಿಷಿ. ಕೊಲೆ ಕೃತ್ಯ ಎಸಗಿದ ಮಹಾರಾಷ್ಟ್ರದ ಶಿರಡವಾಡ ಗ್ರಾಮದ ನಿವಾಸಿ ದೀಪಕ್ ಮುಕ್ಕಮ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಆರೋಪಿ ದೀಪಕ್ ಮುಕ್ಕಮ್ ಅವರ ಮಗಳು ಅನುಜಾ, ಓಂಕಾರ್ ಖೋತ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಧು-ವರರ ನಡುವೆ ಮಧ್ಯಸ್ಥಿಕೆ ವಹಿಸಿ, ಅವರ ಪ್ರೇಮ ವಿವಾಹ ನೆರವೇರಿಸಲು ಜ್ಯೋತಿಷಿ ಮಂದಾರ್ ರಾಂಡೆ ಸಹಾಯ ಮಾಡಿದ್ದರು. ತನ್ನ ಮಗಳು ಬೇರೆ ಜಾತಿಯ ಯುವಕನನ್ನು ಮದುವೆಯಾಗಲು ಜ್ಯೋತಿಷಿ ಮಂದಾರ್ ರಾಂಡೆಯೇ ಮುಖ್ಯ ಕಾರಣ ಎಂದು ಕೋಪಗೊಂಡಿದ್ದ ದೀಪಕ್, ಜ್ಯೋತಿಷಿಯನ್ನು ಮುಗಿಸಿಹಾಕಲು ಕಾಯುತ್ತಿದ್ದನು.

ಕಳೆದ ಅಕ್ಟೋಬರ್ 31 ರಂದು ಆರೋಪಿ ದೀಪಕ್, ಬೇರೊಂದು ಅಪರಿಚಿತ ಫೋನ್ ನಂಬರ್‌ನಿಂದ ಜ್ಯೋತಿಷಿ ಮಂದಾರ್ ರಾಂಡೆಗೆ ಕರೆ ಮಾಡಿದ್ದನು. ಇನ್ನೊಂದು ಮದುವೆ ಮಧ್ಯಸ್ಥಿಕೆ ವಹಿಸುವ ವಿಚಾರವಿದೆ ಎಂದು ನಂಬಿಸಿ ಕರ್ನಾಟಕ ಗಡಿ ಭಾಗದ ಮಾನಕಾಪುರಕ್ಕೆ ಕರೆಸಿಕೊಂಡಿದ್ದನು. ಮಾನಕಾಪುರ ತಲುಪುತ್ತಿದ್ದಂತೆ ಜ್ಯೋತಿಷಿ ಮಂದಾರ್ ರಾಂಡೆ ಅವರ ಕಣ್ಣಿಗೆ ಏಕಾಏಕಿ ಖಾರದ ಪುಡಿ ಎರಚಿ, ಕುಡಗೋಲಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ. ಕೃತ್ಯ ಎಸಗಿದ ಬಳಿಕ ಶವವನ್ನು ಅಲ್ಲೇ ಬಿಟ್ಟು ಆರೋಪಿ ದೀಪಕ್ ತನ್ನ ಸ್ವಗ್ರಾಮಕ್ಕೆ ಪರಾರಿಯಾಗಿದ್ದನು.

ಇದನ್ನೂ ಓದಿ: ಹಣ ಪಡೆದು ಗಲಾಟೆ ಮಾಡಿದೆ ಎಂದಿದ್ದ ವೀಡಿಯೋಗೆ ಬಿಗ್ ಟ್ವಿಸ್ಟ್ : ನಾಗೇಂದ್ರ ಬೆಂಬಲಿಗರು ಹೆದರಿಸಿ ವೀಡಿಯೋ ಮಾಡಿದ್ರು ಎಂದು ಬಿಜೆಪಿ ಕಾರ್ಯಕರ್ತ

ಮಾನಕಾಪುರದಲ್ಲಿ ಅಪರಿಚಿತ ಶವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಸದಲಗಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು. ಮೃತರ ಮಾಹಿತಿ ಸಂಗ್ರಹಿಸಿ, ಅವರ ಮೊಬೈಲ್ ಫೋನ್ ಕಾಲ್ ಹಿಸ್ಟರಿ ಪರಿಶೀಲನೆ ನಡೆಸಿದಾಗ ಅಕ್ಟೋಬರ್ 31ರಂದು ದೀಪಕ್ ಕರೆ ಮಾಡಿರುವುದು ಮತ್ತು ಆತನ ಹಿನ್ನೆಲೆ ಬೆಳಕಿಗೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸದಲಗಾ ಠಾಣೆ ಪೊಲೀಸರು ಆರೋಪಿ ದೀಪಕ್ ಮುಕ್ಕಮ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಹದೇವ್​ ಮಾನೆ
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ
ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ
ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಆಸ್ಪತ್ರೆ
ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಆಸ್ಪತ್ರೆ
ಸ್ಟಿಂಗ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಸ್ಟಿಂಗ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಛಲವಾದಿ ಮನೆಗೆ ಚಾಕು, ಚೂರಿ ಪಾರ್ಸೆಲ್; ಇತ್ತ ಜೋರಾಯ್ತು ಪೋಸ್ಟರ್ ವಾರ್!
ಛಲವಾದಿ ಮನೆಗೆ ಚಾಕು, ಚೂರಿ ಪಾರ್ಸೆಲ್; ಇತ್ತ ಜೋರಾಯ್ತು ಪೋಸ್ಟರ್ ವಾರ್!
ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು
ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು