AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ಜನರ ಹತ್ಯೆ ಪ್ರಕರಣ: ಕೊಲೆಯಾಗಿದ್ದ ಎಲ್ಲರ ಮೃತದೇಹಗಳೂ ಪತ್ತೆ; ಮತ್ತಷ್ಟು ಚುರುಕುಗೊಂಡ ತನಿಖೆ

ಬೆಂಗಳೂರಿನ 7 ಜನರ ಹತ್ಯಾಕಾಂಡದಲ್ಲಿ ಕೊನೆಯ ಇಬ್ಬರ ಶವಗಳು ಶಿರಾಡಿ ಘಾಟ್‌ನಲ್ಲಿ ಪತ್ತೆಯಾಗುವುದರೊಂದಿಗೆ ಎಲ್ಲ ಮೃತದೇಹಗಳ ಶೋಧ ಅಂತ್ಯಗೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿ 1, ಸೇಲಂನಲ್ಲಿ 2, ಚಾಮುಂಡಿ ಬೆಟ್ಟದಲ್ಲಿ 2 ಮೃತದೇಹಗಳನ್ನು ಈ ಹಿಂದೆ ಪತ್ತೆಮಾಡಲಾಗಿತ್ತು. ಇನ್ನು ಕೃತ್ಯ ನಡೆಸಲು ಅಗತ್ಯ ವಸ್ತುಗಳನ್ನು ಏರಿಯಾದ ಸುತ್ತಮುತ್ತಲೇ ಆರೋಪಿ ಶೇಖರ್​ ಖರೀದಿಸಿದ್ದ ಎಂಬುದು ಕೂಡ ತನಿಖೆ ವೇಳೆ ಗೊತ್ತಾಗಿದೆ.

7 ಜನರ ಹತ್ಯೆ ಪ್ರಕರಣ: ಕೊಲೆಯಾಗಿದ್ದ ಎಲ್ಲರ ಮೃತದೇಹಗಳೂ ಪತ್ತೆ; ಮತ್ತಷ್ಟು ಚುರುಕುಗೊಂಡ ತನಿಖೆ
ಕೊಲೆಯಾಗಿದ್ದ ಎಲ್ಲರ ಮೃತದೇಹಗಳೂ ಪತ್ತೆ
ಪ್ರದೀಪ್​ ಚಿಕ್ಕಾಟಿ
| Edited By: |

Updated on: Nov 09, 2026 | 8:48 AM

Share

ಬೆಂಗಳೂರು, ನವೆಂಬರ್​​ 09: ಒಂದೇ ಕುಟುಂಬದ 7 ಜನರ ಹತ್ಯೆ ಪ್ರಕರಣ ಸಂಬಂಧ ಕೊಲೆಯಾಗಿದ್ದ ಎಲ್ಲರ ಶವಗಳೂ ಪತ್ತೆಯಾಗಿವೆ. 7 ವರ್ಷದ ಬಾಲಕ ಪುನೀತ್ ಮೃತದೇಹವು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿ, ಸೇಲಂನಲ್ಲಿ ಸುನೀತಾ ಹಾಗೂ ರೂಪವತಿ ಶವಗಳು ಮತ್ತು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶಿವಕುಮಾರ್ ಮತ್ತು ದಿವ್ಯಾ ದಂಪತಿ ಮೃತದೇಹಗಳು ಪತ್ತೆಯಾಗಿದ್ದವು. ಉಳಿದಂತೆ ಶಂಕರ್ ಮತ್ತು ನಳಿನಿ ಶವಗಳನ್ನು ಕೂಡ ಈಗ ಶಿರಾಡಿ ಘಾಟ್​​ನಲ್ಲಿ ಸಕಲೇಶಪುರ ಪೊಲೀಸರು ಪತ್ತೆ ಮಾಡಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಾಗಿ ಹುಡುಕಾಟ

ಇನ್ನು ಕೃತ್ಯ ನಡೆಸಲು ಅಗತ್ಯ ವಸ್ತುಗಳನ್ನು ಏರಿಯಾದ ಸುತ್ತಮುತ್ತಲೇ ಆರೋಪಿ ಶೇಖರ್​ ಖರೀದಿಸಿದ್ದ. ಮೃತದೇಹಗಳ‌ನ್ನು ಪ್ಯಾಕಿಂಗ್ ಮಾಡಲು ಬೇಕಿದ್ದ ಸಾಮಗ್ರಿಗಳು, ರಕ್ತ ಕ್ಲೀನ್ ಮಾಡಲು ಕೆಮಿಕಲ್ ಸೇರಿ ಇತರ ವಸ್ತುಗಳ ಖರೀದಿ ನಡೆಸಿದ್ದ. ಅಲ್ಲಿ ಸಿಗದೆ ಇರುವ ವಸ್ತುಗಳನ್ನ ಯಶವಂತಪುರ, RMCಯಾರ್ಡ್​ನ ಅಂಗಡಿಗಳಿಗೆ ತೆರಳಿ ಸಂಗ್ರಹಿಸಿದ್ದ. ಆತ ಯಾವೆಲ್ಲ ವಸ್ತುಗಳನ್ನ ಖರೀದಿಸಿದ್ದ ಎಂಬ ಬಗ್ಗೆ ತನಿಖೆಗೆ ಅಂಗಡಿಗಳಿಗೆ ಹೋಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು​​ ವಶಕ್ಕೆ ಪಡೆದಿದ್ದಾರೆ. ಅಂಗಡಿಗಳ ಮಾಲೀಕರು, ಸಿಬ್ಬಂದಿಯಿಂದ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಇನ್ನು ಕೊಲೆ ನಡೆದ ಏರಿಯಾದಲ್ಲಿ ಕೆಲ ಸಿಸಿಟಿವಿ ಫೂಟೇಜ್ ಸಿಗದ ಕಾರಣ, ಅವುಗಳ ಸಂಗ್ರಯದ ಯತ್ನವೂ ನಡೆಯುತ್ತಿದೆ.

ಇದನ್ನೂ ಓದಿ: 7 ಜನರ ಹತ್ಯೆ ಪ್ರಕರಣ: ಆರೋಪಿ ಇಂದುಶೇಖರ್ ಸಹೋದರನೂ ಬೆಂಗಳೂರಲ್ಲಿ ಡಬಲ್​​ ಮರ್ಡರ್​​ ಮಾಡಿ ಸೃಷ್ಟಿಸಿದ್ದ ಸಂಚಲನ!

ಇಂದು ಶಿವಕುಮಾರ್ ಹಾಗೂ ದಿವ್ಯಾ ಮೃತದೇಹ ಮರಣೋತ್ತರ ಪರೀಕ್ಷೆ

ನಿನ್ನೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಪತ್ತೆಯಾಗಿದ್ದ ಶಿವಕುಮಾರ್ ಹಾಗೂ ದಿವ್ಯಾ ಮೃತದೇಹ ಮರಣೋತ್ತರ ಪರೀಕ್ಷೆ ಇಂದು ಮೈಸೂರು ಮೆಡಿಕಲ್​​ ಕಾಲೇಜಿನ ಶವಾಗಾರದಲ್ಲಿ ನಡೆಯಲಿದೆ. ಆರೋಪಿ ಶೇಖರ್​​ ಮತ್ತು ಮೃತರ ಸಂಬಂಧಿಕರ ಸಮ್ಮುಖದಲ್ಲಿ ನಿನ್ನೆ ಮಹಜರು ಕಾರ್ಯ ನಡೆಸಲಾಗಿತ್ತು. ಮುಖ್ಯರಸ್ತೆಯಲ್ಲಿ ವಾಹನ ನಿಲ್ಲಿಸಿ ಪಕ್ಕದ ಕಂದಕಕ್ಕೆ ಆರೋಪಿ ಮೃತದೇಹ ಎಸೆದಿದ್ದ ಎಂಬುದು ಕೂಡ ಗೊತ್ತಾಗಿತ್ತು. ಹಂತಕ ಶೇಖರ್​​​ ನೀಡಿದ ಮಾಹಿತಿಯಂತೆ ಹುಡುಕಾಟ ನಡೆಸಿದ್ದ ಪೊಲೀಸರು ಶವಗಳನ್ನು ಪತ್ತೆ ಮಾಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರದೀಪ್​ ಚಿಕ್ಕಾಟಿ
ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More
ಇಂದು ಈ ರಾಶಿಯವರು ಹಿತಶತ್ರುಗಳ ಬಗ್ಗೆ ಜಾಗೃತೆವಹಿಸಿ
ಇಂದು ಈ ರಾಶಿಯವರು ಹಿತಶತ್ರುಗಳ ಬಗ್ಗೆ ಜಾಗೃತೆವಹಿಸಿ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್​ಗೆ ಡಿಕೆಶಿ ಕೌಂಟರ್
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್​ಗೆ ಡಿಕೆಶಿ ಕೌಂಟರ್
ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್