Lata Mangeshkar: ಲತಾ ಮಂಗೇಶ್ಕರ್ ಆರೋಗ್ಯ ಹೇಗಿದೆ? ವೈದ್ಯರು ನೀಡಿದ ಮಾಹಿತಿ ಇಲ್ಲಿದೆ

Lata Mangeshkar Health Update: ಗಾಯಕಿ ಲತಾ ಮಂಗೇಶ್ಕರ್ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದ ಕುರಿತು ವೈದ್ಯರು ಇದೀಗ ಮಾಹಿತಿ ಬಿಡುಗಡೆ ಮಾಡಿದ್ದಾರೆ.

Lata Mangeshkar: ಲತಾ ಮಂಗೇಶ್ಕರ್ ಆರೋಗ್ಯ ಹೇಗಿದೆ? ವೈದ್ಯರು ನೀಡಿದ ಮಾಹಿತಿ ಇಲ್ಲಿದೆ
ಲತಾ ಮಂಗೇಶ್ಕರ್
Edited By:

Updated on: Jan 17, 2022 | 10:09 PM

ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರು ಕೊರೊನಾ (Corona) ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಸ್ತುತ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ. 92 ವರ್ಷದ ಅವರಿಗೆ ನ್ಯುಮೋನಿಯಾ ಕೂಡ ದೃಢಪಟ್ಟಿತ್ತು. ಕೊವಿಡ್ ಪಾಸಿಟಿವ್ ಆಗಿದ್ದ ಅವರ ಮನೆಯ ಸಿಬ್ಬಂದಿಯೋರ್ವರಿಂದ ಲತಾ ಅವರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಲತಾ ಅವರು ಆಸ್ಪತ್ರೆಗೆ ದಾಖಲಾದ ನಂತರ ಇಡೀ ದೇಶವೇ ಅವರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸುತ್ತಿದೆ. ಇದೀಗ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಆರೋಗ್ಯದ ಕುರಿತು ಮಾಹಿತಿ ನೀಡಿದ್ದಾರೆ. ‘‘ಲತಾ ಮಂಗೇಶ್ಕರ್ ಇನ್ನೂ ಐಸಿಯುವಿನಲ್ಲಿದ್ದು, ಆರೋಗ್ಯ ಬಗ್ಗೆ ನಿಗಾ ಇಟ್ಟಿದ್ದೇವೆ. ವಯಸ್ಸಾಗಿರುವ ಕಾರಣ ಅವರಿಗೆ ಚೇತರಿಸಿಕೊಳ್ಳಲು ಸಮಯ ಬೇಕು’’ ಎಂದು ಡಾ.ಪ್ರತೀತ್ ಸಮ್ದಾನಿ (Dr Pratit Samdani) ಸೋಮವಾರ ಸಂಜೆ ಮಾಹಿತಿ ನೀಡಿದ್ದಾರೆ.

ಲತಾ ಆರೋಗ್ಯದ ಕುರಿತು ಎಎನ್​ಐ ನೀಡಿದ ಮಾಹಿತಿ ಇಲ್ಲಿದೆ:

ಲತಾ ಅವರ ಆರೋಗ್ಯ ಸುಧಾರಣೆಗೆ ಮನೆಯಲ್ಲಿ ವಿಶೇಷ ಪೂಜೆ:
ಲತಾ ಮಂಗೇಶ್ಕರ್ ಅವರ ಆರೋಗ್ಯ ಸುಧಾರಣೆಗೆ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಈ ಕುರಿತು ಲತಾ ಸಹೋದರಿ ಆಶಾ ಭೋಸ್ಲೆ ಮಾಹಿತಿ ನೀಡಿದ್ದು, ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಶಿವ ರುದ್ರರನ್ನು ಪ್ರತಿಷ್ಠಾಪಿಸಿ ಪೂಜೆ ನಡೆಯುತ್ತಿದೆ ಎಂದು ಹೇಳಿದ್ದರು.

ಇತ್ತೀಚೆಗೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಮಾತನಾಡಿ, ಲತಾ ಅವರ ಆರೋಗ್ಯ ಸುಧಾರಣೆಯಾಗುತ್ತಿದೆ ಎಂದು ಮಾಹಿತಿ ನೀಡಿದ್ದರು. ಅಲ್ಲದೇ ಆಸ್ಪತ್ರೆಯವರಿಗೆ ಲತಾ ಅವರ ಆರೋಗ್ಯದ ಕುರಿತು ಆಗಾಗ ಮಾಹಿತಿ ನೀಡುತ್ತಿರುವಂತೆ ಸೂಚಿಸಿದ್ದ ಸಚಿವರು, ಅಭಿಮಾನಿಗಳು ಅವರ ಆರೋಗ್ಯ ಚೇತರಿಕೆಯ ಸುದ್ದಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿಸಿದ್ದರು.

ಇದನ್ನೂ ಓದಿ:

Lata Mangeshkar: ಲತಾ ಮಂಗೇಶ್ಕರ್ ಆರೋಗ್ಯ ಸುಧಾರಣೆಗೆ ಕುಟುಂಬವರಿಂದ ವಿಶೇಷ ಪೂಜೆ; ಸಹೋದರಿ ಆಶಾ ಬೋಸ್ಲೆ ಮಾಹಿತಿ

ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ಹಬ್ಬಿದೆ ಸುಳ್ಳು ಸುದ್ದಿ; ಐಸಿಯುನಲ್ಲಿರುವ ಅವರ ಸ್ಥಿತಿ ನಿಜಕ್ಕೂ ಹೇಗಿದೆ?