ಆ ನಟಿಯನ್ನು ಗರ್ಭಿಣಿ ಮಾಡಿದ್ದ ನಟ ರಾಜ್ ತರುಣ್: ಮಾಜಿ ಗೆಳತಿ ಆರೋಪ

|

Updated on: Aug 07, 2024 | 12:07 PM

Raj Tarun: ಟಾಲಿವುಡ್ ನಟ ರಾಜ್​ ತರುಣ್ ವಿರುದ್ಧ ಮಾಜಿ ಗೆಳತಿ ಲಾವಣ್ಯ ಹಲವು ಆರೋಪಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಇದೀಗ ರಾಜ್ ತರುಣ್, ತೆಲುಗಿನ ನಟಿಯೊಟ್ಟಿಗೆ ಸಂಬಂಧ ಹೊಂದಿದ್ದಾಗಿಯೂ, ರಾಜ್​ ಇಂದಾಗಿ ಆಕೆ ಗರ್ಭಿಣಿ ಆಗಿದ್ದಾಗಿಯೂ ಹೇಳಿದ್ದಾರೆ.

ಆ ನಟಿಯನ್ನು ಗರ್ಭಿಣಿ ಮಾಡಿದ್ದ ನಟ ರಾಜ್ ತರುಣ್: ಮಾಜಿ ಗೆಳತಿ ಆರೋಪ
ರಾಜ್ ತರುಣ್-ಅರಿಯಾನಾ
Follow us on

ತೆಲುಗು ಚಿತ್ರರಂಗದ ಜನಪ್ರಿಯ ಯುವನಟ ರಾಜ್ ತರುಣ್​ ವಿರುದ್ಧ ಮಾಜಿ ಗೆಳತಿ ಲಾವಣ್ಯ ಒಂದರ ಹಿಂದೊಂದು ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ದಶಕಕ್ಕೂ ಹೆಚ್ಚು ಸಮಯದಿಂದ ಸಿನಿಮಾಗಳಲ್ಲಿ ನಟಿಸುತ್ತಿರುವ ರಾಜ್ ತರುಣ್, ಲಾವಣ್ಯ ಅವರೊಟ್ಟಿಗೆ ಪ್ರೀತಿಯಲ್ಲಿದ್ದರು. ಆದರೆ ಕಳೆದ ವರ್ಷ ಇಬ್ಬರೂ ದೂರಾಗಿದ್ದಾರೆ. ಈಗ ಲಾವಣ್ಯ, ರಾಜ್ ತಮಗೆ ಮೋಸ ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದು, ಮಾಧ್ಯಮಗಳು, ಯೂಟ್ಯೂಬ್ ಚಾನೆಲ್​ಗಳಿಗೆ ಹೋಗಿ ರಾಜ್ ವಿರುದ್ಧ ಒಂದರ ಮೇಲೊಂದು ಆರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ತೆಲುಗಿನ ನಟಿಯೊಬ್ಬರಿಗೆ ರಾಜ್ ಮೋಸ ಮಾಡಿದ್ದ. ರಾಜ್​ ಇಂದಾಗಿ ನಟಿಯೊಬ್ಬಾಕೆ ಗರ್ಭಿಣಿ ಆಗಿದ್ದಳು ಎಂದಿದ್ದಾರೆ ನಟಿಯ ಹೆಸರು ಸಹ ಹೇಳಿದ್ದಾರೆ ಲಾವಣ್ಯ.

ಟಿವಿ ತಾರೆಯಾಗಿ ಬಳಿಕ ಬಿಗ್​ಬಾಸ್​ಗೆ ಹೋಗಿ ಜನಪ್ರಿಯವಾದ ನಟಿ ಅರಿಯಾನಾ ಗ್ಲೋರಿ, ರಾಜ್ ತರುಣ್ ಇಂದಾಗಿ ಗರ್ಭಿಣಿ ಆಗಿದ್ದಳು ಎಂದು ಲಾವಣ್ಯಾ ಆರೋಪ ಮಾಡಿದ್ದಾರೆ. ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಲಾವಣ್ಯ, ‘ರಾಜ್ ನನ್ನಿಂದ ದೂರಾದ ಮೇಲೆ ಅರಿಯಾನಾ ಜೊತೆಗೆ ಸಂಬಂಧ ಇರಿಸಿಕೊಂಡಿದ್ದ. ಅರಿಯಾನಾ ಬಿಗ್​ಬಾಸ್​ನಿಂದ ಹೊರಬಂದ ಬಳಿಕ ಅವರಿಬ್ಬರೂ ಸಂಬಂಧದಲ್ಲಿದ್ದರು. ಆ ಸಮಯದಲ್ಲಿ ರಾಜ್ ಇಂದಾಗಿ ಅರಿಯಾನಾ ಗರ್ಭಿಣಿ ಆಗಿದ್ದಳು. ನನ್ನ ಬಳಿ ಸಾಕ್ಷ್ಯಗಳು ಸಹ ಇವೆ’ ಎಂದಿದ್ದಾರೆ ಲಾವಣ್ಯ.

‘ಬಿಗ್​ಬಾಸ್​ನಲ್ಲಿ ಅರಿಯಾನಾ ಬಹಳ ಸಣ್ಣಗೆ ಇದ್ದಳು, ಆದರೆ ಹೊರಬಂದ ಕೆಲವೇ ತಿಂಗಳುಗಳ ಬಳಿಕ ದಪ್ಪ ಆಗಿಬಿಟ್ಟಳು, ಇದಕ್ಕೆ ಕಾರಣ ಆಕೆ ಗರ್ಭಿಣಿ ಆಗಿದ್ದೆ. ರಾಜ್, ಅರಿಯಾನಾಗೂ ಮೋಸ ಮಾಡಿದ. ರಾಜ್​ನಿಂದ ಮೋಸ ಹೋದ ಬಳಿಕ ಅರಿಯಾನಾ ಅಬಾರ್ಷನ್ ಮಾಡಿಸಿಕೊಂಡಳು. ಇದಕ್ಕೆಲ್ಲ ನನ್ನ ಬಳಿ ಸಾಕ್ಷಿ ಇದೆ’ ಎಂದು ಲಾವಣ್ಯ ಮಾಧ್ಯಮದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:ನಟ ರಾಜ್ ತರುಣ್ ಗೆಳೆಯನಿಗೆ ಚಪ್ಪಲಿಯಲ್ಲಿ ಹೊಡೆದ ಲಾವಣ್ಯ

ಲಾವಣ್ಯಾರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ರಾಜ್ ತರುಣ್ ಗೆಳೆಯ ಆರ್​ಜೆ ಶೇಖರ್ ಭಾಷಾ, ‘ಲಾವಣ್ಯಾ ಹೇಳುತ್ತಿರುವುದು ಎಲ್ಲವೂ ಸುಳ್ಳು. ಅರಿಯಾನಾ ಬಗ್ಗೆ ಲಾವಣ್ಯಾ ಆರೋಪ ಮಾಡಿದ ಬಳಿಕ ನಾನು ಸ್ವತಃ ಅರಿಯಾನಾಗೆ ಕರೆ ಮಾಡಿದ್ದೆ. ನಾನು ಸಿನಿಮಾದ ಪಾತ್ರಕ್ಕಾಗಿ ದಪ್ಪ ಆಗಿದ್ದೆ. ನನಗೂ ರಾಜ್​ಗೂ ಯಾವುದೇ ಸಂಬಂಧ ಇಲ್ಲ. ಆಕೆ ನನ್ನ ವಿರುದ್ಧ ಇಲ್ಲ ಸಲ್ಲದ ಹೇಳಿಕೆ ನೀಡಿದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅರಿಯಾನಾ ಹೇಳಿದ್ದಾರೆ ಎಂದು ಶೇಖರ್ ಮಾಧ್ಯಮಗಳಿಗೆ ಹೇಳಿದ್ದಾರೆ.

ಮುಂದುವರೆದು, ಲಾವಣ್ಯ ಬಗ್ಗೆಯೂ ಆರೋಪ ಮಾಡಿರುವ ಶೇಖರ್, ‘ಲಾವಣ್ಯ, ರಾಜ್ ವಿಷಯದಲ್ಲಿ ಹಲವು ಸುಳ್ಳುಗಳನ್ನು ಹೇಳಿದ್ದಾಳೆ. ಲಾವಣ್ಯಗೆ ಮಾದಕ ವ್ಯಸನವಿದ್ದು, ಆಕೆ ಹಲವರಿಗೆ ಮಾದಕ ವಸ್ತುವಿನ ವ್ಯಸನ ಅಂಟಿಸಿದ್ದಾಳೆ. ಆಕೆ ವ್ಯಕ್ತಿತ್ವದಲ್ಲಿಯೂ ಸಮಸ್ಯೆ ಇದೆ’ ಎಂದು ಆರೋಪ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ