Thangalaan: ರಾಕಿಭಾಯ್​ಗಾಗಿ ‘ತಂಗಲಾನ್’ ವಿಶೇಷ ಪ್ರದರ್ಶನ, ಇದು ‘ಕೆಜಿಎಫ್’ ಕತೆ

Thangalaan: ಕೋಲಾರದ ಚಿನ್ನದ ಗಣಿಯ ಕುರಿತಾದ ಕತೆಯನ್ನು ಒಳಗೊಂಡಿರುವ ತಮಿಳು ಸಿನಿಮಾ ‘ತಂಗಲಾನ್’ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಲಿದೆ. ‘ಕೆಜಿಎಫ್’ ಸಿನಿಮಾದ ನಾಯಕ ಯಶ್​ಗಾಗಿ ಚಿತ್ರತಂಡ ವಿಶೇಷ ಶೋ ಆಯೋಜನೆ ಮಾಡಲಿದೆಯಂತೆ.

Thangalaan: ರಾಕಿಭಾಯ್​ಗಾಗಿ ‘ತಂಗಲಾನ್’ ವಿಶೇಷ ಪ್ರದರ್ಶನ, ಇದು ‘ಕೆಜಿಎಫ್’ ಕತೆ
ತಂಗಲಾನ್
Follow us
ಮಂಜುನಾಥ ಸಿ.
|

Updated on: Aug 07, 2024 | 11:34 AM

ಕನ್ನಡ ಚಿತ್ರರಂಗದ ಕಡೆಗೆ ದೇಶವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ‘ಕೆಜಿಎಫ್’. ಯಶ್, ರಾಕಿಭಾಯ್ ಆಗಿ ಸಖತ್ ಆಗಿ ಮಿಂಚಿದ್ದರು. ಯಶ್ ಅವರನ್ನು ಬೇರೆ ರಾಜ್ಯಗಳಲ್ಲಿ ಈಗ ರಾಕಿಭಾಯ್ ಎಂದೇ ಗುರುತಿಸಲಾಗುತ್ತಿದೆ. ‘ಕೆಜಿಎಫ್’ ಸಿನಿಮಾ ಕೋಲಾರದ ಚಿನ್ನದ ಗಣಿಯ ಕತೆಯನ್ನು ಒಳಗೊಂಡಿತ್ತು. ಇದೀಗ ತಮಿಳಿನಲ್ಲಿ ‘ತಾಂಗಲಾನ್’ ಹೆಸರಿನ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಈ ಸಿನಿಮಾ ಸಹ ಕೋಲಾರದ ಚಿನ್ನದ ಗಣಿಯ ಕುರಿತಾದ ಕತೆಯನ್ನು ಒಳಗೊಂಡಿದೆ. ನಿನ್ನೆಯಷ್ಟೆ ‘ತಾಂಗಲಾನ್’ ಚಿತ್ರತಂಡ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿತ್ತು. ಈ ಸಿನಿಮಾದ ವಿಶೇಷ ಪ್ರದರ್ಶನವನ್ನು ಯಶ್​ಗಾಗಿ ಆಯೋಜಿಸಲು ಯೋಜಿಸಿದೆ ಚಿತ್ರತಂಡ.

‘ತಂಗಲಾನ್’ ಸಿನಿಮಾ ಕೋಲಾರದ ಚಿನ್ನದ ಗಣಿಯ ಆರಂಭದ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಬ್ರಿಟೀಷರು ಹೇಗೆ ಚಿನ್ನದ ಗಣಿಯನ್ನು ಸಂಶೋಧಿಸಿದರು. ಅಲ್ಲಿದ್ದ ಬುಡಕಟ್ಟು ವಾಸಿಗಳನ್ನು ಹೇಗೆ ಒಕ್ಕಲೆಬ್ಬಿಸಿದರು. ಬುಡಕಟ್ಟು ಜನರು ತನ್ನ ನೆಲ ಉಳಿಸಿಕೊಳ್ಳಲು ಹೇಗೆ ಹೋರಾಡಿದರು ಇತ್ಯಾದಿ ಅಂಶಗಳನ್ನು ‘ತಂಗಲಾನ್’ ಸಿನಿಮಾ ಒಳಗೊಂಡಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ವೈರಲ್ ಆಗಿದೆ.

ಇದನ್ನೂ ಓದಿ:‘ತಂಗಲಾನ್’ ಟ್ರೇಲರ್ ಕನ್ನಡದಲ್ಲೂ ಬಂತು; ಕೆಜಿಎಫ್ ಕಥೆಯಲ್ಲಿ ಚಿಯಾನ್ ವಿಕ್ರಮ್ ಅಬ್ಬರ

‘ತಂಗಲಾನ್’ ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಕೋಲಾರದಲ್ಲಿಯೇ ಮಾಡಲಾಗಿದೆ. ಸಿನಿಮಾದಲ್ಲಿ ಚಿಯಾನ್ ವಿಕ್ರಂ, ಮಲಯಾಳಂನ ಪಾರ್ವತಿ ಮಿಲ್ಟನ್, ಮಾಳವಿಕ ಮೋಹನನ್, ಪಶುಪತಿ, ಬ್ರಿಟೀಷ್ ಅಧಿಕಾರಿ ಪಾತ್ರದಲ್ಲಿ ಡೇನಿಯಲ್ ಇನ್ನಿತರರು ನಟಿಸಿದ್ದಾರೆ. ಸಿನಿಮಾವನ್ನು ಪಾ ರಂಜಿತ್ ನಿರ್ದೇಶನ ಮಾಡಿದ್ದಾರೆ. ಪಾ ರಂಜಿತ್ ಈ ಹಿಂದೆ ರಜನೀಕಾಂತ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕಬಾಲಿ’, ‘ಕಾಲ’, ಸೂಪರ್ ಹಿಟ್ ಸಿನಿಮಾ ‘ಸರ್ಪಟ್ಟ ಪರಂಬರೈ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಈಗ ‘ತಂಗಲಾನ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಆಗಸ್ಟ್ 15 ಕ್ಕೆ ಬಿಡುಗಡೆ ಆಗಲಿದೆ.

ನಿನ್ನೆ ಬೆಂಗಳೂರಿಗೆ ಬಂದಿದ್ದ ಚಿಯಾನ್ ವಿಕ್ರಂ, ಯಶ್ ತಮ್ಮ ಗೆಳೆಯರೆಂದು ಅವರೊಟ್ಟಿಗೆ ಕೆಲಸ ಮಾಡುವ ಆಸಕ್ತಿ ಇದೆಯೆಂದು ಹೇಳಿಕೊಂಡಿದ್ದಾರೆ. ಯಶ್ ಮಾತ್ರವೇ ಅಲ್ಲದೆ ರಕ್ಷಿತ್ ಶೆಟ್ಟಿ, ಶಿವರಾಜ್ ಕುಮಾರ್ ಇನ್ನೂ ಕೆಲವು ಕನ್ನಡದ ನಟರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಬೆಂಗಳೂರಿಗೆ ಬಂದಿದ್ದ ಚಿಯಾನ್ ವಿಕ್ರಂ ಅವರನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಭೇಟಿಯಾಗಿದ್ದು, ‘25 ವರ್ಷಗಳಿಂದಲೂ ವಿಕ್ರಂ ಅವರನ್ನು ಭೇಟಿ ಆಗಲು ಕಾಯುತ್ತಿದ್ದೆ. ಈಗ ಭೇಟಿ ಆಗಿದ್ದೀನಿ, ನಾನು ನಟಿಸಲು ಸ್ಪೂರ್ತಿ ತುಂಬಿದ ನಟ ವಿಕ್ರಂ’ ಎಂದು ಹೇಳಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್