- Kannada News Photo gallery Sonal Monteiro Bachelor Party Photos Sonal Monteiro wedding date Sonal Monteiro Photos Cinema News
ತರುಣ್ ಜೊತೆಗಿನ ಮದುವೆಗೂ ಮುನ್ನ ಸೋನಲ್ ಮೊಂತೆರೋ ಬ್ಯಾಚುಲರ್ ಪಾರ್ಟಿ
ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೋ ಮದುವೆ ಆಗುತ್ತಿದ್ದಾರೆ. ಆಗಸ್ಟ್ 10 ಹಾಗೂ 11ರಂದು ವಿವಾಹ ಕಾರ್ಯಕ್ರಮ ನಡೆಯಲಿದೆ. ಅದಕ್ಕೂ ಮೊದಲು ಸೋನಲ್ ಅವರು ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ.
Updated on: Aug 07, 2024 | 12:06 PM

ತರುಣ್ ಸುಧೀರ್ ಜೊತೆ ಸೋನಲ್ ಮೊಂತೆರೋ ಮದುವೆ ಆಗುತ್ತಿದ್ದಾರೆ. ಆಗಸ್ಟ್ 10 ಹಾಗೂ 11ರಂದು ವಿವಾಹ ಕಾರ್ಯಕ್ರಮ ನಡೆಯಲಿದೆ. ಅದಕ್ಕೂ ಮೊದಲು ಸೋನಲ್ ಅವರು ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ.

ಸೋನಲ್ ಅವರು ಕುಟುಂಬದವರ ಜೊತೆ ಬ್ಯಾಚುಲರ್ ಪಾರ್ಟಿ ಆಚರಿಸಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ಮದುವೆಗೂ ಮೊದಲು ಬ್ಯಾಚುಲರ್ ಪಾರ್ಟಿಯನ್ನು ಆಯೋಜನೆ ಮಾಡಲಾಗುತ್ತದೆ. ಸೋನಲ್ ಕೂಡ ಇದನ್ನು ಆಚರಿಸಿದ್ದಾರೆ. ಇದರಲ್ಲಿ ಅವರು ಸಖತ್ ಆಗಿ ಮಿಂಚಿದ್ದಾರೆ. ಸೋನಲ್ ವಿವಾಹಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಸೋನಲ್ಗಾಗಿ ಅವರ ತಾಯಿ ಮತ್ತು ತಂಗಿ ಸರ್ಪ್ರೈಸ್ ಪಾರ್ಟಿ ಕೊಟ್ಟಿದ್ದಾರೆ. ಆ ಕ್ಷಣದ ಫೊಟೋಗಳು ಲಭ್ಯವಾಗಿವೆ. ಸೋನಲ್ ಕುಟುಂಬದವರು ತರುಣ್ ಸುಧೀರ್ ಅವರ ಮುಖವಾಡ ಹಿಡಿದು ನಿಂತಿದ್ದಾರೆ.

ಸೋನಲ್ ಹಾಗೂ ತರುಣ್ ಅವರದ್ದು ಪ್ರೇಮ ವಿವಾಹ. ಆಗಸ್ಟ್ 10 ಹಾಗೂ 11ರಂದು ಬೆಂಗಳೂರಿನ ಕೆಂಗೇರಿ ಸಮೀಪ ಇರುವ ಕಲ್ಯಾಣ ಮಂಟಪದಲ್ಲಿ ಇವರು ವಿವಾಹ ಆಗುತ್ತಿದ್ದಾರೆ.



















