ನಟ ರಾಜ್ ತರುಣ್ ಗೆಳೆಯನಿಗೆ ಚಪ್ಪಲಿಯಲ್ಲಿ ಹೊಡೆದ ಲಾವಣ್ಯ
Raj Tarun: ನಟ ರಾಜ್ ತರುಣ್ ವಿರುದ್ಧ ದೂರು ನೀಡಿರುವ ಮಾಜಿ ಗರ್ಲ್ಫ್ರೆಂಡ್ ಲಾವಣ್ಯ, ನ್ಯೂಸ್ ಚಾನೆಲ್ ಚರ್ಚೆಯಲ್ಲಿ ಭಾಗವಹಿಸಿದ್ದಾಗ ರಾಜ್ ತರುಣ್ರ ಗೆಳೆಯ ಶೇಖರ್ ಅನ್ನು ಚಪ್ಪಲಿಯಲ್ಲಿ ಹೊಡೆದಿದ್ದಾರೆ.
ತೆಲುಗು ನಟ ರಾಜ್ ತರುಣ್ ಖಾಸಗಿ ಜೀವನ ವಿವಾದವಾಗಿದೆ. ರಾಜ್ ತರುಣ್ ಮಾಜಿ ಪ್ರೇಯಸಿ ಲಾವಣ್ಯ, ರಾಜ್ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಈಗ ಬೇರೊಬ್ಬ ನಟಿಯೊಡನೆ ಸಂಬಂಧದಲ್ಲಿದ್ದಾಣೆ ಎಂದು ಲಾವಣ್ಯ ಆರೋಪ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ಇದರ ಜೊತೆಗೆ ಮಾಧ್ಯಮಗಳಲ್ಲಿ ರಾಜ್ ತರುಣ್ ಬಗ್ಗೆ ಹಲವು ಆರೋಪಗಳನ್ನು ಸಹ ಮಾಡುತ್ತಿದ್ದು, ರಾಜ್ ತರುಣ್ ಮನೆಯ ಮುಂದೆ ಪ್ರತಿಭಟನೆಯನ್ನೂ ಮಾಡಿದ್ದಾರೆ. ಇತ್ತೀಚೆಗೆ ನ್ಯೂಸ್ ಚಾನೆಲ್ ಡಿಬೇಟ್ನಲ್ಲಿ ಭಾಗಿಯಾಗಿದ್ದ ಲಾವಣ್ಯ, ರಾಜ್ ತರುಣ್ ಗೆಳೆಯನೊಬ್ಬನಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ.
ರಾಜ್ ತರುಣ್ ವಿವಾದ ಕುರಿತು ತೆಲುಗು ನ್ಯೂಸ್ ಚಾನೆಲ್ ಒಂದು ಚರ್ಚೆ ಆಯೋಜಿಸಿತ್ತು. ಚರ್ಚೆಯಲ್ಲಿ ರಾಜ್ ತರುಣ್ ಪರವಾಗಿ ಅವರ ಗೆಳೆಯ ಆರ್ಜೆ ಶೇಖರ್ ಭಾಷಾ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಆರ್ಜೆ ಶೇಖರ್ ಲಾವಣ್ಯ ಬಗ್ಗೆ ಮಾತನಾಡುತ್ತಿದ್ದರು, ಎದುರು ಕೂತಿದ್ದ ಲಾವಣ್ಯ, ಕಾಲಿನಲ್ಲಿ ಧರಿಸಿದ್ದ ಚಪ್ಪಲಿ ತೆಗೆದು ಆರ್ಕೆ ಶೇಖರ್ ಕಡೆಗೆ ಎಸೆದರು. ಚಪ್ಪಲಿ ತಮಗೆ ತಾಗುತ್ತಿದ್ದಂತೆ ಮೇಲೆದ್ದ ಶೇಖರ್, ಲಾವಣ್ಯ ಮೇಲೆ ಜಗಳಕ್ಕೆ ಹೋದರು, ಜೋರಾಗಿ ಕಿರುಚಾಡಿ ತುಸು ಎಳೆದಾಡಿದರೂ ಸಹ. ಆದರೆ ಕೈ ಮಾಡಲಿಲ್ಲ.
ಲಾವಣ್ಯ, ಆರ್ಜೆ ಶೇಖರ್ ಮೇಲೆ ಚಪ್ಪಲಿ ಎಸೆದ ವಿಡಿಯೋ ಇದೀಗ ವೈರಲ್ ಆಗಿದೆ. ಚಪ್ಪಲಿ ಏಟು ತಿಂದ ಶೇಖರ್ ಸಹ ಅದೇ ಶೋನಲ್ಲಿ ಲಾವಣ್ಯ ವಿರುದ್ಧ ನಿಂದನೆ ಮಾಡಿದ್ದಾರೆ. ಅದಕ್ಕೆ ಲಾವಣ್ಯ, ‘ಶೇಖರ್ ಹೇಳಿದ ಮಾತು ಸರಿಯಿಲ್ಲ ಅದಕ್ಕೆ ಹೊಡೆದೆ’ ಎಂದಿದ್ದಾರೆ. ಅಲ್ಲದೆ, ‘ನನ್ನ ಮೇಲೆ ಬೇಕಾದರೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟುಕೋ ಹೋಗು’ ಎಂದು ಆವಾಜ್ ಹಾಕಿದ್ದಾರೆ.
ಇದನ್ನೂ ಓದಿ:ಲಂಡನ್ ಡಯರೀಸ್ ಫೋಟೋ ಹಂಚಿಕೊಂಡ ಲಾವಣ್ಯಾ
ರಾಜ್ ತರುಣ್ ಹಾಗೂ ಲಾವಣ್ಯ ಹಲವು ವರ್ಷಗಳಿಂದ ಲಿವಿನ್ ರಿಲೇಷನ್ನಲ್ಲಿದ್ದರು. ಮದುವೆ ಆಗುವುದಾಗಿ ರಾಜ್ ತರುಣ್, ಲಾವಣ್ಯಗೆ ಭರವಸೆ ನೀಡಿದ್ದರಂತೆ. ಆದರೆ ಇತ್ತೀಚೆಗೆ ರಾಜ್ ತರುಣ್ ಹಿಮಾಚಲ ಪ್ರದೇಶ ಮೂಲದ ನಾಯಕಿ ಮಾಳವಿ ಮಲ್ಹೋತ್ರಾ ಜೊತೆ ಸಂಬಂಧದಲ್ಲಿದ್ದಾರೆ ಎಂದು ಲಾವಣ್ಯ ಆರೋಪಿಸಿದ್ದಾರೆ. ಮಾಳವಿ ಮಲ್ಹೋತ್ರಾ ಸಹ ಲಾವಣ್ಯ ವಿರುದ್ಧ ದೂರು ನೀಡಿದ್ದು, ತನ್ನ ಸಹೋದರ ಹಾಗೂ ಪೋಷಕರಿಗೆ ಕೊಲೆ ಬೆದರಿಕೆಯನ್ನು ಲಾವಣ್ಯ ಹಾಕಿದ್ದಾರೆಂದು ಆರೋಪ ಮಾಡಿದ್ದಾರೆ.
ರಾಜ್ ತರುಣ್ ಕಳೆದ ಹತ್ತು ವರ್ಷಗಳಿಂದಲೂ ತೆಲುಗು ಚಿತ್ರರಂಗದಲ್ಲಿದ್ದಾರೆ. ಹಲವು ಜನಪ್ರಿಯ ಸಿನಿಮಾಗಳಲ್ಲಿ ರಾಜ್ ತರುಣ್ ನಟಿಸಿದ್ದಾರೆ. ‘ಉಯ್ಯಾಲ ಜಂಪಾಲ’, ‘ಕುಮಾರಿ 21 ಎಫ್’, ‘ಸಿನಿಮಾ ಚೂಪಿಸ್ತಾ ಮಾವ’, ‘ರಂಗುಲ ರತ್ನಮ್ಮ’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಾಗಾರ್ಜುನ ಜೊತೆಗೆ ‘ನಾ ಸಾಮಿ ರಂಗ’ ನಲ್ಲಿ ನಟಿಸಿದ್ದರು. ಇದೀಗ ‘ತಿರಗಬಡರಾ ಸಾಮಿ’ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾದಲ್ಲಿ ರಾಜ್ ತರುಣ್ರ ಹೊಸ ಗರ್ಲ್ಫ್ರೆಂಡ್ ಮಾಳವಿ ಮಲ್ಹೋತ್ರಾ ನಾಯಕಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ