ನಿರ್ಮಾಪಕ ಕರಣ್ ಜೋಹರ್​​ನಿಂದ ಐದು ಕೋಟಿ ರೂಪಾಯಿ ಸುಲಿಗೆ ಮಾಡಲು ನಡೆದಿತ್ತು ಪ್ಲ್ಯಾನ್​

| Updated By: ರಾಜೇಶ್ ದುಗ್ಗುಮನೆ

Updated on: Jun 19, 2022 | 4:20 PM

ಕರಣ್ ಜೋಹರ್ ಅವರಿಗೆ ಬೆದರಿಕೆವೊಡ್ಡಿ ಹಣ ಕಿತ್ತುಕೊಳ್ಳಲು ಲಾರೆನ್ಸ್​​​ ಬಿಷ್ಣೋಯ್ ಗ್ಯಾಂಗ್​ನಲ್ಲಿ ಒಬ್ಬನಾದ ಸಿದ್ದೇಶ್​ ಕಾಂಬ್ಳೆ ಸಂಚು ರೂಪಿಸಿದ್ದ. ಈ ವಿಚಾರ ಕರಣ್ ಫ್ಯಾನ್ಸ್ ವಲಯದಲ್ಲಿ ಆತಂಕ ಮೂಡಿಸಿದೆ.

ನಿರ್ಮಾಪಕ ಕರಣ್ ಜೋಹರ್​​ನಿಂದ ಐದು ಕೋಟಿ ರೂಪಾಯಿ ಸುಲಿಗೆ ಮಾಡಲು ನಡೆದಿತ್ತು ಪ್ಲ್ಯಾನ್​
ಲಾರೆನ್ಸ್-ಕರಣ್​
Follow us on

ನಿರ್ಮಾಪಕ ಕರಣ್ ಜೋಹರ್ ಅವರು (Karan Johar) ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ಬರ್ತ್​ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 55ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಕೊವಿಡ್ ಅಂಟಿತ್ತು. ಈ ವಿಚಾರದಲ್ಲಿ ಕರಣ್​ ಜೋಹರ್ ಅವರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಇದಕ್ಕೆ ಕರಣ್ ಜೋಹರ್ ಅವರು ಅಸಮಾಧಾನ ಹೊರಹಾಕಿದ್ದರು. ಈ ಮಧ್ಯೆ ಶಾಕಿಂಗ್ ವಿಚಾರ ಒಂದು ಹೊರ ಬಿದ್ದಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆ ಪ್ರಕರಣದಲ್ಲಿ ಕೈವಾಡ ಇದೆ ಎನ್ನಲಾದ ಲಾರೆನ್ಸ್​​​ ಬಿಷ್ಣೋಯ್ (Lawrence Bishnoi ) ಗ್ಯಾಂಗ್​ನ ಕೆಲವರು ಕರಣ್​ ಜೋಹರ್ ಅವರಿಂದ 5 ಕೋಟಿ ರೂಪಾಯಿ ಸುಲಿಗೆ ಮಾಡಲು ಪ್ಲ್ಯಾನ್ ರೂಪಿಸಿದ್ದರು ಎಂದು ವರದಿ ಆಗಿದೆ.

ಕರಣ್ ಜೋಹರ್ ಅವರು ನಿರ್ಮಾಪಕನಾಗಿ, ನಿರ್ದೇಶಕನಾಗಿ, ನಿರೂಪಕನಾಗಿ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ನೂರಾರು ಕೋಟಿ ರೂಪಾಯಿ ಆಸ್ತಿಗೆ ಅವರು ಒಡೆಯ. ಇವರಿಗೆ ಬೆದರಿಕೆವೊಡ್ಡಿ ಹಣ ಕಿತ್ತುಕೊಳ್ಳಲು ಲಾರೆನ್ಸ್​​​ ಬಿಷ್ಣೋಯ್ ಗ್ಯಾಂಗ್​ನಲ್ಲಿ ಒಬ್ಬನಾದ ಸಿದ್ದೇಶ್​ ಕಾಂಬ್ಳೆ ಸಂಚು ರೂಪಿಸಿದ್ದ. ಈ ವಿಚಾರ ಕರಣ್ ಫ್ಯಾನ್ಸ್ ವಲಯದಲ್ಲಿ ಆತಂಕ ಮೂಡಿಸಿದೆ.

ಸಿಧು ಅವರನ್ನು ಶೂಟರ್​ ಸಂತೋಷ್ ಜಾಧವ್​ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಸಂತೋಷ್ ಜತೆ ಸಿದ್ದೇಶ್​ ತುಂಬಾನೇ ಒಡನಾಟ ಹೊಂದಿದ್ದ. ಇಬ್ಬರೂ ಲಾರೆನ್ಸ್ ಗ್ಯಾಂಗ್​ನವರಾಗಿದ್ದಾರೆ. ವಿಚಾರಣೆ ವೇಳೆ ಸಿದ್ದೇಶ್ ಈ ವಿಚಾರ ಹೇಳಿಕೊಂಡಿದ್ದಾನೆ ಎಂದು ವರದಿ ಆಗಿದೆ. ಆದರೆ, ಪೊಲೀಸರು ಇದನ್ನು ಅಧಿಕೃತಗೊಳಿಸಿಲ್ಲ.

ಇದನ್ನೂ ಓದಿ
‘ನಾವು ‘ಕೆಜಿಎಫ್​’ ರೀತಿಯ ಸಿನಿಮಾ ಮಾಡಿದ್ರೆ ಕಟು ಟೀಕೆ ವ್ಯಕ್ತವಾಗುತ್ತಿತ್ತು’: ಕರಣ್​ ಜೋಹರ್​ ಆರೋಪ
‘ನನ್ನನ್ನೇಕೆ ದೂಷಿಸುತ್ತೀರಿ?’; ಏಕಾಏಕಿ ಸಿಟ್ಟಾದ ನಿರ್ಮಾಪಕ ಕರಣ್​ ಜೋಹರ್
‘ಬಾಡಿಗಾರ್ಡ್ಸ್​ ಇಲ್ಲದೇ ಬನ್ನಿ’​ ಎಂದು ರಶ್ಮಿಕಾಗೆ ಕರಣ್​ ಜೋಹರ್​ ಆಹ್ವಾನ: ನಂತರ ಏನಾಯ್ತು?
‘ಇಂಥ ಕೆಲಸ ಮಾಡ್ಬೇಡಿ’: ಎಲ್ಲರ ಎದುರು ಕರಣ್​ ಜೋಹರ್​ಗೆ ಅನಿಲ್​ ಕಪೂರ್ ವಾರ್ನಿಂಗ್​; ವಿಡಿಯೋ ವೈರಲ್​​

ಇದನ್ನೂ ಓದಿ: ‘ಹೃದಯಂ’ ರಿಮೇಕ್​ನಲ್ಲಿ ಸೈಫ್​ ಅಲಿ ಖಾನ್​ ಮಗ ಇಬ್ರಾಹಿಂ? ಲಾಂಚ್​ ಮಾಡ್ತಾರೆ ಕರಣ್​ ಜೋಹರ್​

ಅಸಮಾಧಾನ ಹೊರಹಾಕಿದ್ದ ಕರಣ್

ಕರಣ್ ಅವರು ಈ ಬಾರಿ 50ನೇ ವರ್ಷಕ್ಕೆ ಕಾಲಿಟ್ಟರು. ಹೀಗಾಗಿ ಬರ್ತ್​ಡೇ ಪಾರ್ಟಿ ಜೋರಾಗಿಯೇ ಇತ್ತು. ರಶ್ಮಿಕಾ ಮಂದಣ್ಣ, ಬಾಲಿವುಡ್​ ನಟ ಶಾರುಖ್ ಖಾನ್​, ಟಾಲಿವುಡ್​ ಹೀರೋ ವಿಜಯ್ ದೇವರಕೊಂಡ ಮೊದಲಾದವರು ಭಾಗಿ ಆಗಿದ್ದರು. ಪಾರ್ಟಿ ಮುಗಿದ ಕೆಲವೇ ದಿನಗಳಲ್ಲಿ ಕತ್ರಿನಾ ಹಾಗೂ ಶಾರುಖ್​ಗೆ ಕೊವಿಡ್ ಪಾಸಿಟಿವ್ ಆಯಿತು. ಇವರಲ್ಲದೆ ಇನ್ನೂ ಅನೇಕ ಸೆಲೆಬ್ರಿಟಿಗಳಿಗೆ ಕೊವಿಡ್ ಆಗಿತ್ತು ಎಂದು ವರದಿಗಳು ಹೇಳಿವೆ. ಇದನ್ನು ಕೆಲವರು ‘ಕರಣ್ ಜೋಹರ್ ಪಾರ್ಟಿ ಮಹಿಮೆ’ ಎಂದು ಲೇವಡಿ ಮಾಡಿದರು. ಈ ವಿಚಾರ ಕರಣ್​ಗೆ ಬೇಸರ ತರಿಸಿದೆ.

‘ಒಂದು ವಾರದಲ್ಲಿ ಸಾಕಷ್ಟು ವಿಚಾರಗಳು ನಡೆಯುತ್ತಿರುತ್ತವೆ. ಯಾರಿಗೆ ಎಲ್ಲಿ ಕೊವಿಡ್ ಅಂಟಿದೆ ಅಂತ ಹೇಗೆ ಹೇಳುವುದು?ಪಾರ್ಟಿ ಮಾತ್ರ ಅಲ್ಲ, ಮದುವೆಗಳಿದ್ದವು, ಅನೇಕ ಕಾರ್ಯಕ್ರಮಗಳಿದ್ದವು, ಶೂಟಿಂಗ್ ಇತ್ತು. ನನ್ನನ್ನು ಮಾತ್ರ ಏಕೆ ದೂಷಿಸಲಾಗುತ್ತಿದೆ? ಎಲ್ಲವೂ ನನಗೆ ಏಕೆ ಬರುತ್ತದೆ? ಕೊವಿಡ್​​ ಹರಡಿದ್ದಕ್ಕೂ ನನಗೆ ಯಾವುದೇ ಸಂಬಂಧವಿಲ್ಲ. ನಾನು ಇದಕ್ಕೆ ಪೂರ್ಣವಿರಾಮ ಇಡಲು ಬಯಸುತ್ತೇನೆ. ಅದು ಆಗಿದ್ದು ನನ್ನಿಂದ ಅಲ್ಲ. ಈ ಕೊವಿಡ್​ ಆರಂಭಕ್ಕೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದಿದ್ದರು ಕರಣ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.