ಪುರಿ ಜಗನ್ನಾಥ್ (Puri Jagannadh) ನಿರ್ದೇಶನದ ‘ಲೈಗರ್’ ಸಿನಿಮಾ (Liger Movie) ಹಲವು ಕಾರಣದಿಂದ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ (Vijay Devarakonda) ಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಬಾಕ್ಸರ್ ಮೈಕ್ ಟೈಸನ್ (Mike Tyson) ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ. ಬಾಲಿವುಡ್ ನಟಿ ಅನನ್ಯಾ ಪಾಂಡೆ (Ananya Panday) ಚಿತ್ರದ ನಾಯಕಿ. ಈ ಸಿನಿಮಾ ಮೂಲಕ ವಿಜಯ್ ದೇವರಕೊಂಡ ಬಾಲಿವುಡ್ಗೆ ಕಾಲಿಡುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ಆದರೆ, ನಿರ್ದೇಶಕರ ಹಠದಿಂದ ಚಿತ್ರದ ಬಜೆಟ್ ಮಿತಿ ಮೀರಿದೆ. ಈ ಬಗ್ಗೆ ನಿರ್ಮಾಪಕರ ಕರಣ್ ಜೋಹರ್ (Karan Johar) ಅಪ್ಸೆಟ್ ಆಗಿದ್ದಾರೆ. ಅಲ್ಲದೆ, ಸಿನಿಮಾ ಕೆಲಸಗಳನ್ನು ಬೇಗನೇ ಪೂರ್ಣಗೊಳಿಸೋಕೆ ನಿರ್ದೇಶಿಸಿದ್ದಾರೆ ಎನ್ನಲಾಗಿದೆ.
ಬಾಕ್ಸಿಂಗ್ ಜಗತ್ತಿನಲ್ಲಿ ಅಮೆರಿಕದ ಮೈಕ್ ಟೈಸನ್ ಅವರದ್ದು ದೊಡ್ಡ ಹೆಸರು. ‘ಲೈಗರ್’ ಸಿನಿಮಾಗೆ ಮೈಕ್ ಟೈಸನ್ ಬೇಕು ಎಂದು ಪುರಿ ಜಗನ್ನಾಥ್ ಹಠ ಹಿಡಿದು ಕೂತಿದ್ದರು ಎಂದು ವರದಿ ಆಗಿತ್ತು. ಈ ಕಾರಣಕ್ಕೆ ವಿಜಯ್ ದೇವರಕೊಂಡ ಅವರಿಗಿಂತಲೂ ಅಧಿಕ ಮೊತ್ತದ ಸಂಭಾವನೆ ಕೊಟ್ಟು ಮೈಕ್ ಟೈಸನ್ ಒಪ್ಪಿಸಲಾಗಿತ್ತು. ಅಷ್ಟೇ ಅಲ್ಲ, ಇಡೀ ಚಿತ್ರತಂಡ ಅಮೆರಿಕಕ್ಕೆ ತೆರಳಿ ಶೂಟಿಂಗ್ ಮಾಡಿಕೊಂಡು ಬಂದಿತ್ತು. ಇದರಿಂದ ಚಿತ್ರದ ಬಜೆಟ್ ಮಿತಿಮೀರಿದೆ. ಇನ್ನು, ಕೊವಿಡ್ ಕಾರಣದಿಂದ ಸಿನಿಮಾ ಕೆಲಸಗಳು ವಿಳಂಬವಾಗಿದೆ. ಇದರಿಂದ ಅಂದುಕೊಂಡಿದ್ದಕ್ಕಿಂತಲೂ ಸಿನಿಮಾ ಬಜೆಟ್ ಹೆಚ್ಚಿದೆ.
‘ಲೈಗರ್’ ಚಿತ್ರಕ್ಕೆ ಮತ್ತೋರ್ವ ಸ್ಟಾರ್ ಕಲಾವಿದನ ಸೇರ್ಪಡೆ ಆಗಬೇಕಿತ್ತು. ಆದರೆ, ಈಗಾಗಲೇ ಬಜೆಟ್ ಮಿತಿಮೀರಿರುವುದರಿಂದ ನಿರ್ಮಾಪಕ ಕರಣ್ ಇದಕ್ಕೆ ನೋ ಎಂದಿದ್ದಾರೆ. ಇನ್ನು, ಚಿತ್ರದ ಕೆಲಸವನ್ನು ಬೇಗನೆ ಪೊರ್ಣಗೊಳಿಸುವಂತೆ ನಿರ್ಮಾಪಕರ ಕಡೆಯಿಂದ ನಿರ್ದೇಶಕರಿಗೆ ಸೂಚನೆ ಬಂದಿದೆ. ಒಂದೊಮ್ಮೆ ಸಿನಿಮಾ ಶೂಟಿಂಗ್ ಪೂರ್ಣಗೊಂಡರೆ ಸಿನಿಮಾ ರಿಲೀಸ್ಗೂ ಮೊದಲಿನ ಹಲವು ಡೀಲ್ಗಳನ್ನು ಮಾಡಿಕೊಳ್ಳಬಹುದು. ಇದರಿಂದ ಒಂದಷ್ಟು ಹಣ ಬರಲಿದೆ ಎಂಬುದು ಕರಣ್ ಲೆಕ್ಕಚಾರ.
ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಇದೇ ಮೊದಲ ಬಾರಿಗೆ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂನಲ್ಲಿ ಚಿತ್ರ ತೆರೆಗೆ ಬರುತ್ತಿದೆ. ಸಿಂಹ ಹಾಗೂ ಹುಲಿಯಿಂದ ಹುಟ್ಟಿದ ತಳಿಗೆ ಲೈಗರ್ ಎಂದು ಕರೆಯಲಾಗುತ್ತದೆ. ಈ ಕಾರಣಕ್ಕೆ ಸಿನಿಮಾ ಪೋಸ್ಟರ್ ಹಿಂಭಾಗದಲ್ಲಿ ಅರ್ಧ ಹುಲಿ ಅರ್ಧ ಸಿಂಹದ ಚಿತ್ರವಿದೆ.
ಇದನ್ನೂ ಓದಿ: ಕೈಯಲ್ಲಿ ಬೆಂಕಿ ಹಿಡಿದು ಬಂದ ಮೈಕ್ ಟೈಸನ್; ‘ಲೈಗರ್’ನಲ್ಲಿ ಬಾಕ್ಸಿಂಗ್ ಲೆಜೆಂಡ್ ಫಸ್ಟ್ ಲುಕ್ ನೋಡಿ ಫ್ಯಾನ್ಸ್ ಫಿದಾ
ರಾಜಮೌಳಿ ತಂದೆ ಮೊಬೈಲ್ ವಾಲ್ಪೇಪರ್ನಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ಫೋಟೋ; ಕಾರಣ ಏನು?
Published On - 6:31 pm, Wed, 10 November 21