AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಃ’ ಸರಣಿಯಲ್ಲಿ ಬರಲಿವೆ ಐದು ಸಿನಿಮಾ; ಬಜೆಟ್ ಎಷ್ಟು ಕೋಟಿ ರೂಪಾಯಿ?

Lokah cinematic universe: ಮಲಯಾಳಂ ಚಿತ್ರರಂಗದವರು ಇತ್ತೀಚೆಗೆ ಹೊಸ ಹೊಸ ರೀತಿಯ ಸಿನಿಮಾಗಳ್ನು ಕೊಡುವ ಪ್ರಯತ್ನದಲ್ಲಿ ಇದ್ದಾರೆ.‘ಲೋಕಃ: ಚಾಪ್ಟರ್ 1-ಚಂದ್ರ’ ಎನ್ನುವ ಸಿನಿಮಾವು ಮಲಯಾಳಂನಲ್ಲಿ ಬಿಡುಗಡೆ ಆಗಿದ್ದು ಮೆಚ್ಚುಗೆ ಪಡೆಯುತ್ತಿದೆ. ಈ ಚಿತ್ರದ ಟೈಟಲ್​ನಲ್ಲಿ ಚಾಪ್ಟರ್ 1 ಎಂದು ಉಲ್ಲೇಖಿಸಿರುವುದರಿಂದ ಈ ಸಿನಿಮಾಗೆ ಇನ್ನೂ ಕೆಲವು ಪಾರ್ಟ್​ಗಳು ಬರಲಿವೆ ಎಂದು ಹೇಳಲಾಗಿತ್ತು. ಅದು ನಿಜವಾಗಿದೆ.

ಲೋಕಃ’ ಸರಣಿಯಲ್ಲಿ ಬರಲಿವೆ ಐದು ಸಿನಿಮಾ; ಬಜೆಟ್ ಎಷ್ಟು ಕೋಟಿ ರೂಪಾಯಿ?
Lokah
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on:Sep 03, 2025 | 7:02 PM

Share

‘ಲೋಕಃ: ಚಾಪ್ಟರ್ 1-ಚಂದ್ರ’ ಎನ್ನುವ ಸಿನಿಮಾವು ಮಲಯಾಳಂನಲ್ಲಿ ಬಿಡುಗಡೆ ಆಗಿದೆ, ಎಲ್ಲ ಕಡೆಗಳಲ್ಲಿ ಮೆಚ್ಚುಗೆ ಪಡೆಯುತ್ತಿದೆ. ಈ ಚಿತ್ರದ ಟೈಟಲ್​ನಲ್ಲಿ ಚಾಪ್ಟರ್ 1 ಎಂದು ಉಲ್ಲೇಖಿಸಿರುವುದರಿಂದ ಈ ಸಿನಿಮಾಗೆ ಇನ್ನೂ ಕೆಲವು ಪಾರ್ಟ್​ಗಳು ಬರಲಿವೆ ಎಂದು ಹೇಳಲಾಗಿತ್ತು. ಅದು ನಿಜವಾಗಿದೆ. ಈ ಸಿನಿಮಾ ಸರಣಿಯಿಂದ ಐದು ಚಿತ್ರಗಳು ಬರಲಿವೆ ಎಂದು ಹೇಳಲಾಗಿದೆ.

ಮಲಯಾಳಂ ಚಿತ್ರರಂಗದವರು ಇತ್ತೀಚೆಗೆ ಹೊಸ ಹೊಸ ರೀತಿಯ ಸಿನಿಮಾಗಳ್ನು ಕೊಡುವ ಪ್ರಯತ್ನದಲ್ಲಿ ಇದ್ದಾರೆ. ಇದರಲ್ಲಿ ಅನೇಕ ಚಿತ್ರಗಳು ಯಶಸ್ಸು ಕಂಡಿವೆ. ಸಣ್ಣ ಬಜೆಟ್​ನಲ್ಲಿ ದೊಡ್ಡ ಯಶಸ್ಸು ಕಾಣುವ ತಂತ್ರವನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ‘ಲೋಕಃ’ ಸಿನಿಮಾ 35 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗಿದೆ. ಮೊದಲ ವಾರದಲ್ಲಿ ಚಿತ್ರವು 38 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಅರುಣ್ ಅವರು ‘ಲೋಕಃ’ ಸಿನಿಮಾ ನಿರ್ದೇಶನ ಮಾಡಿದರೆ, ದುಲ್ಕರ್ ಸಲ್ಮಾನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಅನಾಯಾಸವಾಗಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಅಂತಿಮವಾಗಿ 200 ಕೋಟಿ ರೂಪಾಯಿ ತಲುಪೋ ಸಾಧ್ಯತೆ ಇದೆ.

ಇದನ್ನೂ ಓದಿ:ರಾಜ್ ಬಿ. ಶೆಟ್ಟಿ ಮುಟ್ಟಿದ್ದೆಲ್ಲ ಚಿನ್ನ; ಅವರು ಕರ್ನಾಟಕದಲ್ಲಿ ಹಂಚಿಕೆ ಮಾಡಿದ ‘ಲೋಕಃ’ ಗಳಿಕೆ ಇಷ್ಟೊಂದಾ?

ಈ ಸರಣಿಯಲ್ಲಿ  ಐದು ಸಿನಿಮಾಗಳು ಬರಲಿವೆ ಎಂದು ಅರುಣ್ ಹೇಳಿದ್ದಾರೆ. ಐದೂ ಚಿತ್ರದ ಕಥೆಗಳು ಸಿದ್ಧವಿವೆ. ಸ್ಕ್ರಿಪ್ಟ್​ನೊಂದಿಗೆ ಸಿನಿಮಾ ಶೂಟ್​ ಮಾಡುವುದು ಒಂದೇ ಬಾಕಿ ಇದೆ. ಈ ಸಿನಿಮಾಗೆ ಇನ್ನೂ ಮುಖ್ಯ ವಿಲನ್ ಎಂಟ್ರಿ ಆಗಿಲ್ಲ ಎಂದು ಹೇಳಿದ್ದಾರೆ.

ಇವುಗಳ ಬಜೆಟ್ ಎಷ್ಟಾಗಲಿವೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ‘ಲೋಕಃ’ ಸಿನಿಮಾದ ಬಜೆಟ್ 35-40 ಕೋಟಿ ರೂಪಾಯಿ. ಇದೇ ಲೆಕ್ಕಾಚಾರದಲ್ಲಿ ಐದು ಸಿನಿಮಾ ಮಾಡಲು 200 ಕೋಟಿ ರೂಪಾಯಿ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಹಣ ಹೂಡಲು ದುಲ್ಖರ್ ಸಲ್ಮಾನ್ ಕೂಡ ಸಿದ್ಧರಾಗಿದ್ದಾರೆ.

‘ಲೋಕಃ’ ಸಿನಿಮಾದಲ್ಲಿ ಕಲ್ಯಾಣಿ ಪ್ರಿಯದರ್ಶನ್, ನಸ್ಲೆನ್ ಮೊದಲಾದವರು ನಟಿಸಿದ್ದಾರೆ. ಸಿನಿಮಾದ ಕಥೆಯು ಬೆಂಗಳೂರಿನಲ್ಲಿ ಸಾಗುತ್ತದೆ. ಈ ಸರಣಿಯ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಮೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Wed, 3 September 25