
ಚಿತ್ರರಂಗಕ್ಕೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಈಗಾಗಲೇ ಹಲವು ವಿವಾದಗಳು ಹುಟ್ಟಿಕೊಂಡಿವೆ. ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡ ಕಾರಣಕ್ಕೆ ಹಲವು ಸೆಲೆಬ್ರಿಟಿಗಳು ಚರ್ಚೆ ಆಗಿದ್ದಿದೆ. ರಾಧಿಕಾ ಆಪ್ಟೆ (Radhika Apte) ಅವರಿಂದ ಹಿಡಿದು ತಮನ್ನಾ ಭಾಟಿಯಾವರೆಗೆ ಅನೇಕರು ಈ ರೀತಿ ವಿವಾದಗಳನ್ನು ಸೃಷ್ಟಿ ಮಾಡಿದ್ದಿದೆ. ‘ಲಸ್ಟ್ ಸ್ಟೋರಿಸ್ 2’, ‘ಪಾರ್ಚಡ್’ ಸೇರಿ ಅನೇಕ ಸಿನಿಮಾಗಳು ಈ ಸಾಲಿನಲ್ಲಿ ಇವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ನಿಜ ಜೀವನದ ಲವರ್ಸ್. ಇವರು ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. ‘ಲಸ್ಟ್ ಸ್ಟೋರಿಸ್ 2’ ಚಿತ್ರದ ಮೂಲಕ ತಮನ್ನಾ ಸಾಕಷ್ಟು ಸುದ್ದಿ ಆಗಿದ್ದರು. ಅವರು ಮಾಡಿದ ಕಿಸ್ಸಿಂಗ್ ದೃಶ್ಯವನ್ನು ಅನೇಕರು ಟೀಕೆ ಮಾಡಿದ್ದರು. ಕಳೆದ ಹಲವು ವರ್ಷಗಳಿಂದ ನೋ ಕಿಸ್ಸಿಂಗ್ ಪಾಲಿಸಿಯನ್ನು ಅವರು ಫಾಲೋ ಮಾಡುತ್ತಿದ್ದರು.
ರಾಧಿಕಾ ಆಪ್ಟೆ ಅವರು ಹಲವು ಸಿನಿಮಾಗಳಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದರು. ರಾಧಿಕಾ ಅವರು ‘ಪಾರ್ಚರ್ಡ್’ ಸಿನಿಮಾದಲ್ಲಿ ಬೋಲ್ಡ್ ಆಗಿ ಮಿಂಚಿದ್ದರು. ಈ ಸಿನಿಮಾ ಮೇಲೆ ಬ್ಯಾನ್ ಹೇರಬೇಕು ಎಂದು ಅನೇಕರು ಹೇಳಿದ್ದರು.
ಇಮ್ರಾನ್ ಹಷ್ಮಿ ಹಾಗೂ ಮಲ್ಲಿಕಾ ಶೆರಾವತ್ ಅವರು ‘ಮರ್ಡರ್’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ 2004ರಲ್ಲಿ ರಿಲೀಸ್ ಆಯಿತು. ಇವರ ಮಧ್ಯೆ ಇಂಟಿಮೇಟ್ ದೃಶ್ಯಗಳು ಸಾಕಷ್ಟು ಸದ್ದು ಮಾಡಿತ್ತು. ಇದು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು.
ಇಂಡೋ ಅಮೆರಿಕನ್ ಸಿನಿಮಾ ‘ಸಿದ್ದಾರ್ಥ’ ಚಿತ್ರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. 1972ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದ ನ್ಯೂಡ್ ದೃಶ್ಯ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಈ ದೃಶ್ಯದ ಬಗ್ಗೆ ಪ್ರೇಕ್ಷಕರು ಅಪಸ್ವರ ತೆಗೆದಿದ್ದರು. ಸಿನಿಮಾ ಬ್ಯಾನ್ ಮಾಡಲು ಒತ್ತಾಯ ಹೇರಿದ್ದರು.
ಶೀರ್ಷಿಕೆ ಮೂಲಕವೇ ವಿವಾದ ಸೃಷ್ಟಿ ಮಾಡಿತ್ತು ‘ಕಾಮಸೂತ್ರ ಎ ಟೇಲ್ ಆಫ್ ಲವ್’ ಸಿನಿಮಾ. ಬೋಲ್ಡ್ ದೃಶ್ಯ ಹಾಗೂ ಗ್ರಾಫಿಕ್ಸ್ನಿಂದ ಮಾಡಲ್ಪಟ್ಟ ಸೆಕ್ಸ್ ದೃಶ್ಯ ಸಾಕಷ್ಟು ಟೀಕೆ ಎದುರಿಸಬೇಕಾಯಿತು. ರೇಖಾ ಹಾಗೂ ಇಂದಿರಾ ವರ್ಮ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕುಸ್ತಿ ಅಖಾಡ; ಮತ್ತದೇ ಜಗಳ, ಕಿತ್ತಾಟ
1996ರಲ್ಲಿ ‘ಫೈರ್’ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಶಬಾನಾ ಆಜ್ಮಿ ಹಾಗೂ ನಂದಿತಾ ದಾಸ್ ಅವರು ಈ ಚಿತ್ರದಲ್ಲಿ ನಟಿಸಿದ್ದರು. ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡವರ ಸೆಕ್ಸ್ ದೃಶ್ಯ ಗಮನ ಸೆಳೆದಿತ್ತು.
2017ರಲ್ಲಿ ರಿಲೀಸ್ ಆದ ಲಿಪ್ಸ್ಟಿಕ್ ಅಂಡರ್ ಮೈ ಬುರ್ಖಾ ಚಿತ್ರ ಚರ್ಚೆ ಹುಟ್ಟುಹಾಕಿತ್ತು. ಮಹಿಳೆಯರ ಲೈಂಗಿಕತೆ ಬಗ್ಗೆ ಈ ಚಿತ್ರದಲ್ಲಿ ಚರ್ಚೆ ಆಗಿತ್ತು. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:37 pm, Tue, 7 November 23