ಬಾಕ್ಸ್ಆಫೀಸ್ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ‘ಮಹಾವತಾರ್ ನರಸಿಂಹ’
Mahavatar Narasimha: ಹೊಂಬಾಳೆ ಫಿಲಮ್ಸ್ ಪ್ರಸ್ತುತ ಪಡಿಸಿ, ದೇಶದಾದ್ಯಂತ ವಿತರಣೆ ಸಹ ಮಾಡಿರುವ ‘ಮಹಾವತಾರ್ ನರಸಿಂಹ’ ಅನಿಮೇಷನ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆದಿದೆ. ಜುಲೈ 25 ರಂದು ಬಿಡುಗಡೆ ಆಗಿದ್ದ ಈ ಸಿನಿಮಾ ‘ಕೂಲಿ’, ‘ವಾರ್ 2‘, ‘ಸು ಫ್ರಂ ಸೋ’, ‘ಕಿಂಗ್ಡಮ್’ ಇನ್ನೂ ಕೆಲ ಸಿನಿಮಾಗಳ ಎದುರು ಗಟ್ಟಿಯಾಗಿ ನಿಂತು ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಗೆಲುವನ್ನು ತನ್ನದಾಗಿಸಿಕೊಂಡಿದೆ.
ಹೊಂಬಾಳೆ ಫಿಲಮ್ಸ್ (Hombale Films) ಪ್ರಸ್ತುತ ಪಡಿಸಿ, ದೇಶದಾದ್ಯಂತ ವಿತರಣೆ ಮಾಡಿರುವ ಅನಿಮೇಟೆಡ್ ಸಿನಿಮಾ ‘ಮಹಾವತಾರ್ ನರಸಿಂಹ’ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ‘ಕೂಲಿ’, ‘ವಾರ್ 2’ ಅದಕ್ಕೂ ಮುಂಚೆ ‘ಕಿಂಗ್ಡಮ್’, ‘ಸು ಫ್ರಂ ಸೋ’ ಸಿನಿಮಾಗಳ ಅಬ್ಬರಗಳ ಎದುರು ಅಲುಗದೆ ನಿಂತ ‘ಮಹಾವತಾರ್ ನರಸಿಂಹ’ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಹೊಸ ಮೈಲಿಗಲ್ಲಿ ಸ್ಥಾಪನೆ ಮಾಡಿದೆ. ಹಿಂದೆಂದೂ ಯಾವ ಅನಿಮೇಷನ್ ಸಿನಿಮಾ ಸಹ ಸೃಷ್ಟಿಸದ ದಾಖಲೆಯೊಂದನ್ನು ಸೃಷ್ಟಿಸಿದೆ ಈ ಸಿನಿಮಾ.
‘ಮಹಾವತಾರ್ ನರಸಿಂಹ’ ಸಿನಿಮಾ ಜುಲೈ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಹೊಂಬಾಳೆ ಫಿಲಮ್ಸ್ನವರ ಬೆಂಬಲದಿಂದಾಗಿ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ದೇಶದೆಲ್ಲೆಡೆ ಪ್ರಮುಖ ನಗರಗಳಲ್ಲಿ ಬಿಡುಗಡೆ ಆಯ್ತು. ಆರಂಭದಲ್ಲಿ ಹೆಚ್ಚು ಸದ್ದು ಮಾಡದಿದ್ದರೂ ಕೇವಲ ಒಂದೇ ವಾರದಲ್ಲಿ ತನ್ನ ಕಂಟೆಂಟ್ ಹಾಗೂ ಹೊಂಬಾಳೆಯು ಶಕ್ತಿಯುತ ಮಾರ್ಕೆಟಿಂಗ್ನಿಂದಾಗಿ ಪ್ರೇಕ್ಷಕರನ್ನು ಸೆಳೆಯಲು ಆರಂಭಿಸಿತು.
ಇದೀಗ ಸಿನಿಮಾ ಬಿಡುಗಡೆ ಆಗಿ 30 ದಿನಗಳ ಬಳಿಕ ‘ಮಹಾವತಾರ್ ನರಸಿಂಹ’ ಸಿನಿಮಾ 300 ಕೋಟಿ ರೂಪಾಯಿಗೆ ಹೆಚ್ಚಿನ ಗಳಿಕೆ ಮಾಡಿದೆ. ಭಾರತದ ಇನ್ಯಾವುದೇ ಅನಿಮೇಷನ್ ಸಿನಿಮಾ ಸಹ ಇಷ್ಟು ದೊಡ್ಡ ಮೊತ್ತದ ಹಣವನ್ನು ಈ ವರೆಗೆ ಗಳಿಕೆ ಮಾಡಿಲ್ಲ. ಭಾರತದ ಅನಿಮೇಷನ್ ಸಿನಿಮಾಗಳು ಮಾತ್ರವೇ ಅಲ್ಲದೆ. ವಿದೇಶದ ಅನಿಮೇಷನ್ ಸಿನಿಮಾಗಳು ಸಹ ಭಾರತದಲ್ಲಿ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿಲ್ಲ. ಕಳೆದೆರಡು ವರ್ಷಗಳಲ್ಲಿ ಬಿಡುಗಡೆ ಆದ ‘ಸ್ಪೈಡರ್ಮ್ಯಾನ್’, ‘ಡಾಕ್ಟರ್ ಸ್ಟ್ರೇಂಜ್’, ‘ಥಾರ್’, ‘ಅವತಾರ್’ ಸಿನಿಮಾಗಳೂ ಸಹ ಇಷ್ಟು ದೊಡ್ಡ ಮೊತ್ತದ ಹಣವನ್ನು ಭಾರತದ ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿಲ್ಲ ಎಂಬುದು ಗಮನಿಸಬೇಕಾದ ಅಂಶ.
‘ಮಹಾವತಾರ್ ನರಸಿಂಹ’ ಸಿನಿಮಾನಲ್ಲಿ ವಿಷ್ಣುವಿನ ನರಸಿಂಹ ಅವತಾರದ ಕತೆಯನ್ನು ಅನಿಮೇಷನ್ ಮೂಲಕ ಹೇಳಲಾಗಿದೆ. ‘ಮಹಾವತಾರ: ನರಸಿಂಹ’ ಸಿನಿಮಾವನ್ನು ಅಶ್ವಿಕ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ನಿರ್ಮಾಣ ಮಾಡಿದ್ದಾರೆ. ಕಡಿಮೆ ಬಜೆಟ್ ಕಾರಣದಿಂದಾಗಿ ಈ ಸಿನಿಮಾ ನಿರ್ಮಾಣ ಮಾಡಲು ಅಶ್ವಿಕ್ ಅವರಿಗೆ ಬಹಳ ಸಮಯ ಹಿಡಿಯಿತಂತೆ. ಆದರೆ ಈ ಸಿನಿಮಾ ಹಣ ಮಾಡಿರುವ ಕಾರಣ ಮುಂದಿನ ಸಿನಿಮಾಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಪ್ರೇಕ್ಷಕರ ಮುಂದೆ ತರುವುದಾಗಿ ಅಶ್ವಿಕ್ ಹೇಳಿದ್ದಾರೆ.
ಇದನ್ನೂ ಓದಿ:ಹೊಂಬಾಳೆಗೆ ಮತ್ತೊಂದು ಯಶಸ್ಸು, ‘ಮಹಾವತಾರ್’ ಗಳಿಸಿದ್ದೆಷ್ಟು?
“ಮಹಾವತಾರ್” ಸಿನಿಮ್ಯಾಟಿಕ್ ಯೂನಿವರ್ಸ್ ನಿರ್ಮಿಸಲು ಚಿತ್ರತಂಡ ಮುಂದಾಗಿದ್ದು, ಭಗವಾನ್ ವಿಷ್ಣುವಿನ ದಶಾವತಾರಗಳ ಆಧಾರದ ಮೇಲೆ ಬರಲಿರುವ ಸಿನಿಮಾ ಆಗಿರಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ‘ಮಹಾವತಾರ್’ ಯೂನಿವರ್ಸ್ನ ಏಳು ಸಿನಿಮಾಗಳು ತೆರೆಗೆ ಬರಲಿದೆ. ಸಿನಿಮಾಗಳ ಟೈಂಲೈನ್ ಹೀಗಿದೆ. “ಮಹಾವತಾರ್ ನರಸಿಂಹ” (2025), “ಮಹಾವತಾರ್ ಪರಶುರಾಮ” (2027), “ಮಹಾವತಾರ್ ರಘುನಂದನ” (2029), “ಮಹಾವತಾರ್ ಧ್ವಾಕಾಧೀಶ್” (2031), “ಮಹಾವತಾರ್ ಗೋಕುಲನಂದ” (2033), “ಮಹಾವತಾರ್ ಕಲ್ಕಿ ಭಾಗ 1” (2035), “ಮಹಾವತಾರ್ ಕಲ್ಕಿ ಭಾಗ 2” (2037) ಮೂಡಿಬರಲಿವೆ. ಜುಲೈ 25ರಂದು “ಮಹಾವತಾರ್ ನರಸಿಂಹ” ಸಿನಿಮಾ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




