ಹೊಂಬಾಳೆಗೆ ಮತ್ತೊಂದು ಯಶಸ್ಸು, ‘ಮಹಾವತಾರ್’ ಗಳಿಸಿದ್ದೆಷ್ಟು?
Mahavatar Narasimha movie: ಹೊಂಬಾಳೆ ಫಿಲಮ್ಸ್ ಪ್ರಸ್ತುತ ಪಡಿಸಿರುವ ‘ಮಹಾವತಾರ್: ನರಸಿಂಹ’ ಅನಿಮೇಷನ್ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆ ಆಗಿತ್ತು. ‘ಸು ಫ್ರಂ ಸೋ’ ಅಬ್ಬರದಲ್ಲಿ ಈ ಸಿನಿಮಾದ ಸುದ್ದಿಯೇ ಇರಲಿಲ್ಲ. ಹಾಗೆಂದು ಸಿನಿಮಾ ಫ್ಲಾಪ್ ಆಗಿಲ್ಲ ಬದಲಿಗೆ ಒಳ್ಳೆಯ ಗಳಿಕೆಯನ್ನೇ ಮಾಡುತ್ತಿದೆ. ಬಿಡುಗಡೆ ಆದ ಐದು ದಿನಗಳಲ್ಲಿ ಈ ಸಿನಿಮಾ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ...
ಕರ್ನಾಟಕದ ಹೆಮ್ಮೆಯ ಸಿನಿಮಾ ನಿರ್ಮಾಣ ಮತ್ತು ವಿತರಣಾ ಸಂಸ್ಥೆ ಹೊಂಬಾಳೆ ಫಿಲಮ್ಸ್ (Hombale Films) ಪ್ರಸ್ತುತ ಪಡಿಸಿರುವ ಅನಿಮೇಟೆಡ್ ಸಿನಿಮಾ ‘ಮಹಾವಾತಾರ್: ನರಸಿಂಹ’ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆ ಆಗಿದೆ. ‘ಸು ಫ್ರಂ ಸೋ’ ಸಿನಿಮಾ ಬಿಡುಗಡೆ ಆದ ದಿನದಂದೇ ಬಿಡುಗಡೆ ಆದ ‘ಮಹಾವಾತಾರ್’ ಸಿನಿಮಾ ಭರ್ಜರಿ ಕಲೆಕ್ಷನ್ ಅನ್ನೇ ಮಾಡುತ್ತಿದೆ. ‘ಸು ಫ್ರಂ ಸೋ’ನ ಅಬ್ಬರದಲ್ಲಿ ‘ಮಹಾವಾತಾರ್: ನರಸಿಂಹ’ ಗೆಲುವಿನ ಸುದ್ದಿ ಕಳೆದು ಹೋಗಿದೆ ಅಷ್ಟೆ.
‘ಮಹಾವತಾರ್: ನರಸಿಂಹ’ ಸಿನಿಮಾ ಬಿಡುಗಡೆ ಆದ ಐದು ದಿನದಲ್ಲಿ 30 ಕೋಟಿ ರೂಪಾಯಿ ಗಳಿಕೆ ಮಾಡಿದೆ. ನಿನ್ನೆಗೆ ಸಿನಿಮಾದ ಗಳಿಕೆ 26.43 ಕೋಟಿ ಇತ್ತು. ಇಂದು ಖಾತೆಗೆ ಮೂರು ಕೋಟಿಗೂ ಹೆಚ್ಚು ಮೊತ್ತ ಸೇರಿಸಿಕೊಂಡಿದ್ದು ಸಿನಿಮಾದ ಗಳಿಕೆ ಹೆಚ್ಚಿ 30 ಕೋಟಿ ದಾಟಿದೆ. ಯಾವುದೇ ಸ್ಟಾರ್ಗಳಲ್ಲಿದೆ, ಅಬ್ಬರದ ಪ್ರಚಾರಗಳಿಲ್ಲದೆಯೂ ಸಹ ಈ ಅನಿಮೇಷನ್ ಸಿನಿಮಾ 30 ಕೋಟಿ ಹಣ ಗಳಿಸಿರುವುದು ಕಡಿಮೆ ಸಾಧನೆಯಲ್ಲ.
ಅನಿಮೇಷನ್ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ವಿಷ್ಣುವಿನ ನರಸಿಂಹ ಅವತಾರದ ಕತೆಯನ್ನು ಅನಿಮೇಷನ್ ಮೂಲಕ ಹೇಳಲಾಗಿದೆ. ‘ಮಹಾವತಾರ: ನರಸಿಂಹ’ ಸಿನಿಮಾವನ್ನು ಅಶ್ವಿಕ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ನಿರ್ಮಾಣ ಮಾಡಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಗಳಿಗೆ ಡಬ್ ಆಗಿ ಏಕಕಾಲದಲ್ಲಿ ದಕ್ಷಿಣ ಮತ್ತು ಉತ್ತರ ಭಾರತದಲ್ಲಿ ಬಿಡುಗಡೆ ಆಗಿದೆ.
ಇದನ್ನೂ ಓದಿ:ಹೊಂಬಾಳೆ ಫಿಲಮ್ಸ್ನ ‘ಮಹಾವತಾರ: ನರಸಿಂಹ’ ಟ್ರೈಲರ್ ಬಿಡುಗಡೆ, ಹೇಗಿದೆ?
ಸಿನಿಮಾ ಅನ್ನು ಹೊಂಬಾಳೆ ಫಿಲಮ್ಸ್ ಪ್ರೆಸೆಂಟ್ ಮಾಡಿದ್ದು, ಸಿನಿಮಾದ ವಿತರಣೆಯನ್ನೂ ಹೊಂಬಾಳೆಯೇ ಮಾಡಿದೆ ಎನ್ನಲಾಗುತ್ತಿದೆ. “ಮಹಾವತಾರ್ ನರಸಿಂಹ” ಸಿನಿಮಾ ಭಗವಾನ್ ವಿಷ್ಣುವಿನ ದಶಾವತಾರಗಳ ಆಧಾರದ ಮೇಲೆ ಬರಲಿರುವ ಸಿನಿಮಾ ಆಗಿರಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ‘ಮಹಾವತಾರ್’ ಯೂನಿವರ್ಸ್ನ ಏಳು ಸಿನಿಮಾಗಳು ತೆರೆಗೆ ಬರಲಿದೆ. ಸಿನಿಮಾಗಳ ಟೈಂಲೈನ್ ಹೀಗಿದೆ. “ಮಹಾವತಾರ್ ನರಸಿಂಹ” (2025), “ಮಹಾವತಾರ್ ಪರಶುರಾಮ” (2027), “ಮಹಾವತಾರ್ ರಘುನಂದನ” (2029), “ಮಹಾವತಾರ್ ಧ್ವಾಕಾಧೀಶ್” (2031), “ಮಹಾವತಾರ್ ಗೋಕುಲನಂದ” (2033), “ಮಹಾವತಾರ್ ಕಲ್ಕಿ ಭಾಗ 1” (2035), “ಮಹಾವತಾರ್ ಕಲ್ಕಿ ಭಾಗ 2” (2037) ಮೂಡಿಬರಲಿವೆ. ಜುಲೈ 25ರಂದು “ಮಹಾವತಾರ್ ನರಸಿಂಹ” ಸಿನಿಮಾ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




