AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಕಿನೇನಿ ನಾಗಾರ್ಜುನನಿಂದ 14 ಬಾರಿ ಕೆನ್ನೆಗೆ ಹೊಡಿಸಿಕೊಂಡಿದ್ದ ‘ಸೂರ್ಯವಂಶ’ ನಟಿ

Akkineni Nagarjuna: ಚಂದ್ರಲೇಖ ಚಿತ್ರದ ಒಂದು ದೃಶ್ಯಕ್ಕಾಗಿ ನಟಿ ಇಶಾ ಕೊಪ್ಪಿಕರ್ ಅವರು ನಾಗಾರ್ಜುನ ಅವರಿಂದ 14 ಬಾರಿ ಕೆನ್ನೆಗೆ ಹೊಡೆಸಿಕೊಂಡಿದ್ದರಂತೆ. ಈ ಘಟನೆಯನ್ನು ಅವರು ತಮ್ಮ ಅನುಭವವಾಗಿ ಹಂಚಿಕೊಂಡಿದ್ದು, ಚಿತ್ರೀಕರಣದ ಸವಾಲುಗಳ ಬಗ್ಗೆ ಬೆಳಕು ಚೆಲ್ಲಿದೆ. ಚಿತ್ರದಲ್ಲಿ ಪರಿಪೂರ್ಣತೆಗಾಗಿ ಹಲವು ರಿಟೇಕ್‌ಗಳು ಅಗತ್ಯವಾಗಿದ್ದವು ಎಂದು ಅವರು ಹೇಳಿದ್ದಾರೆ. ನಾಗಾರ್ಜುನ ಅವರು ನಂತರ ಕ್ಷಮೆ ಕೇಳಿದರೂ, ಇಶಾ ಅವರು ಅದನ್ನು ಸ್ವೀಕರಿಸಿಲ್ಲವಂತೆ.

ಅಕ್ಕಿನೇನಿ ನಾಗಾರ್ಜುನನಿಂದ 14 ಬಾರಿ ಕೆನ್ನೆಗೆ ಹೊಡಿಸಿಕೊಂಡಿದ್ದ ‘ಸೂರ್ಯವಂಶ’ ನಟಿ
Isha Kopikar
 ಶ್ರೀಲಕ್ಷ್ಮೀ ಎಚ್
| Edited By: |

Updated on: Jul 30, 2025 | 10:51 PM

Share

ನಟನೆ ಅನ್ನೋದು ದೊಡ್ಡ ಚಾಲೆಂಜ್. ಅದರಲ್ಲೂ ಇಂಟಿಮೇಟ್ ದೃಶ್ಯ, ಹೊಡೆತ ತಿನ್ನುವ ದೃಶ್ಯಗಳನ್ನು ಮಾಡೋದು ತುಂಬಾನೇ ಕಷ್ಟ. ಈ ರೀತಿಯ ಸಂದರ್ಭದಲ್ಲಿ ರೀ-ಟೇಕ್ ಮಾಡಬೇಕು ಎಂದು ಹೇಳಿದರೆ ಕಲಾವಿದರೆ ಸಾಕಷ್ಟು ಸಮಸ್ಯೆ ಆಗುತ್ತದೆ. ಈಗ ನಟಿ ಇಶಾ ಕೊಪ್ಪಿಕರ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅವರು ತಮಗಾದ ಸಮಸ್ಯೆಯನ್ನು ವಿವರಿಸಿದ್ದಾರೆ.

‘ಚಂದ್ರಲೇಖಾ’ 1998ರಲ್ಲಿ ರಿಲೀಸ್ ಆದ ಚಿತ್ರ. ಈ ಸಿನಿಮಾದಲ್ಲಿ ನಾಗಾರ್ಜುನ ಹಾಗೂ ಇಶಾ ನಟಿಸಿದ್ದರು. ಈ ಸಿನಿಮಾದಲ್ಲಿ ಇಶಾಗೆ ಕೆನ್ನೆಗೆ ಬಾರಿಸೋ ದೃಶ್ಯ ಇತ್ತು. ಈ ದೃಶ್ಯ ಸರಿಯಾಗಿ ಮೂಡಿ ಬರಲು ರೀ-ಟೇಕ್ ತೆಗೆದುಕೊಳ್ಳಲಾಯಿತು. ಒಂದೆರಡು ಬಾರಿ ಅಲ್ಲ, 14 ಬಾರಿ ಈ ರೀ ಟೇಕ್​ಗಳು ನಡೆದವು ಎಂದರೆ ನೀವು ನಂಬಲೇಬೇಕು.

‘ನನಗೆ ನಾಗಾರ್ಜುನ ಕಪಾಳಮೋಕ್ಷ ಮಾಡಿದರು’ ಎಂದು ಇಶಾ ಈಗ ನಗುತ್ತಾ ಹೇಳಿದರು. ‘ನಾನು ನಟನೆಯಲ್ಲಿ ಬದ್ಧತೆ ತೋರಿಸುತ್ತೇನೆ. ನಾನು ಕ್ರಮಬದ್ಧ ರೀತಿಯಲ್ಲಿ ನಟಿಸಲು ಬಯಸುತ್ತೇನೆ. ನಾಗಾರ್ಜುನ ನನಗೆ ಕಪಾಳಮೋಕ್ಷ ಮಾಡುವಾಗ, ನನಗೆ ಅದನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ಅದು ನನ್ನ ಎರಡನೇ ಚಿತ್ರ ಆಗಿತ್ತು. ನಾನು ಅವರ ಬಳಿ ನಿಜವಾಗಿಯೂ ಕಪಾಳ ಮೋಕ್ಷ ಮಾಡಲು ಕೇಳಿದೆ’ ಎಂದಿದ್ದಾರೆ ಇಶಾ.

ಇದನ್ನೂ ಓದಿ:ರಜನೀಕಾಂತ್ ಮತ್ತು ನಾಗಾರ್ಜುನ ಅಭಿಮಾನಿಗಳ ನಡುವೆ ಶುರು ಯುದ್ಧ

‘ಅವರು ಸಾಧ್ಯ ಇಲ್ಲ ಎಂದರು. ನನಗೆ ಆ ಭಾವನೆ ಬೇಕು.ಕೆನ್ನೆಗೆ ಹೊಡೆದಂತೆ ನಟಿಸುವುದರಿಂದ ಆ ಭಾವನೆ ಬರುತ್ತಿಲ್ಲ. ಕೋಪಗೊಂಡಂತೆ ಕಾಣುವ ಪ್ರಯತ್ನದಲ್ಲಿ, ನನಗೆ 14 ಬಾರಿ ಕಪಾಳಮೋಕ್ಷ ಮಾಡಲಾಯಿತು. ಕೊನೆಯಲ್ಲಿ, ನನ್ನ ಮುಖದ ಮೇಲೆ ಅಕ್ಷರಶಃ ಕಪಾಳಮೋಕ್ಷದ ಗುರುತುಗಳು ಇದ್ದವು’ ಎಂದು ಅವರು ಹೇಳಿದರು. ಈ ವೇಳೆ ನಾಗರ್ಜುನ ಕ್ಷಮೆ ಕೇಳಿದರಂತೆ. ಕ್ಷಮೆ ಬೇಡ ಎಂದು ಮೃದುವಾಗಿ ಅದನ್ನು ಇಶಾ ತಿರಸ್ಕರಿಸಿದರು.

ಚಂದ್ರಲೇಖಾ ಇದು ಮಲಯಾಳಂನ ಸಿನಿಮಾದ ತೆಲುಗು ರಿಮೇಕ್. ಈ ಸಿನಿಮಾ ಕನ್ನಡದಲ್ಲಿ ‘ಹೇ ಸರಸು’ ಹೆಸರಲ್ಲಿ ರಿಮೇಕ್ ಆಯಿತು. ರಮೇಶ್ ಅರವಿಂದ್ ಅವರು ಈ ಚಿತ್ರದಲ್ಲಿ ನಟಿಸಿದರು.  ಇಶಾ ಅವರು ಕನ್ನಡದಲ್ಲೂ ನಟಿಸಿದ್ದಾರೆ. ‘ಸೂರ್ಯವಂಶ’ ಚಿತ್ರದಲ್ಲಿ ಅವರು ನಟಿಸಿ ಗಮನ ಸೆಳೆದರು. ಈ ಚಿತ್ರದ ಬಳಿಕ ಕನ್ನಡದಲ್ಲಿ ಸಾಕಷ್ಟು ಆಫರ್​ಗಳು ಸಿಕ್ಕವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ