‘ಮಹಾವೀರ ಕರ್ಣ’: ತೆರೆಗೆ ಬರುತ್ತಿದೆ ಅಪ್ರತಿಮ ವೀರ ಕರ್ಣನ ಕತೆ

Mahaveera Karna: ಇತ್ತೀಚೆಗೆ ಪೌರಾಣಿಕ ಕತೆಗಳನ್ನು ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಲಾಗುತ್ತಿದೆ. ‘ಆದಿಪುರುಷ್’, ‘ರಾಮಾಯಣ’, ‘ವಾರಣಾಸಿ’, ‘ಕಲ್ಕಿ 2898 ಎಡಿ’ ಇನ್ನೂ ಹಲವು ಸಿನಿಮಾಗಳಲ್ಲಿ ಪೌರಾಣಿಕ ಕತೆಗಳನ್ನು ಹೊಂದಿವೆ. ಇದೀಗ ‘ಮಹಾಭಾರತ’ದ ಪ್ರಮುಖ ಪಾತ್ರವೊಂದನ್ನು ಆಧರಿಸಿ ಸಿನಿಮಾ ಒಂದು ನಿರ್ಮಾಣ ಆಗುತ್ತಿದೆ. ಅದುವೇ ‘ಮಹಾವೀರ ಕರ್ಣ’.

‘ಮಹಾವೀರ ಕರ್ಣ’: ತೆರೆಗೆ ಬರುತ್ತಿದೆ ಅಪ್ರತಿಮ ವೀರ ಕರ್ಣನ ಕತೆ
Karna

Updated on: Aug 22, 2026 | 7:19 PM

ಮುಖ್ಯಾಂಶಗಳು

  • ಪೌರಾಣಿಕ ಕತೆಗಳನ್ನು ಆಧರಿಸಿದ ಸಿನಿಮಾಗಳು ಹೆಚ್ಚು ನಿರ್ಮಾಣ ಆಗುತ್ತಿವೆ.
  • ಮಹಾಭಾರತದ ಕರ್ಣನ ಪಾತ್ರ ಆಧರಿಸಿದ ಸಿನಿಮಾ ಬರುತ್ತಿದೆ.
  • ತೆಲುಗಿನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.

ಇತ್ತೀಚೆಗೆ ಪೌರಾಣಿಕ ಕತೆಗಳನ್ನು ತೆರೆಗೆ ತರುವ ಸಂಪ್ರದಾಯ ಹೆಚ್ಚಾಗುತ್ತಿದೆ. ಮಹಾಭಾರತದ ಕತೆಗಳು, ಉಪಕತೆಗಳು, ರಾಮಾಯಣದ ಕತೆ, ಪಾತ್ರಗಳ ಕುರಿತಾದ ಸಿನಿಮಾಗಳನ್ನು ದೊಡ್ಡ ಮಟ್ಟದಲ್ಲಿ ತರೆಗೆ ತರಲಾಗುತ್ತಿದೆ. ‘ಆದಿಪುರುಷ್’ ಈಗಾಗಲೇ ಬಿಡುಗಡೆ ಆಗಿದ್ದು, ‘ರಾಮಾಯಣ’ (Ramayana) ಬಿಡುಗಡೆಗೆ ಸಜ್ಜಾಗಿದೆ. ಇವುಗಳ ಜೊತೆಗೆ ಹಲವು ಸಿನಿಮಾಗಳು ದೇವರು, ದೈವದ ಕತೆಗಳನ್ನು ಹೇಳಿವೆ. ಇದೀಗ ಮಹಾಭಾರತದ ಪ್ರಮುಖ ಪಾತ್ರವೊಂದರ ಬಗ್ಗೆ ಪ್ರತ್ಯೇಕ ಸಿನಿಮಾ ಮಾಡಲಾಗುತ್ತಿದ್ದು, ಖ್ಯಾತ ನಿರ್ದೇಶಕರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಮಹಾಭಾರತದ ಕತೆಯಲ್ಲಿ ಹಲವಾರು ಅತ್ಯುತ್ತಮ ಪಾತ್ರಗಳಿವೆ. ಇರುವ ಪ್ರತಿ ಪಾತ್ರಕ್ಕೂ ಅದ್ಭುತವಾಗಿ ಹಿನ್ನೆಲೆ, ವ್ಯಕ್ತಿತ್ವ, ಗುರಿ, ಉದ್ದೇಶಗಳಿವೆ. ಮಹಾಭಾರತದ ಹಲವು ಅದ್ಭುತವಾದ ಪಾತ್ರಗಳಲ್ಲಿ ಕರ್ಣನ ಪಾತ್ರಕ್ಕೆ ವಿಶೇಷ ಗೌರವ, ಪ್ರೀತಿ ಇದೆ. ಇದೀಗ ಇದೇ ಕರ್ಣನ ಪಾತ್ರ ಆಧರಿಸಿದ ಸಿನಿಮಾ ಒಂದು ನಿರ್ಮಾಣ ಆಗಲಿದೆ. ಪ್ರತಿಷ್ಠಿತ ಪೆನ್ ಮೂವೀಸ್, ಶ್ರೀ ನೀಲಾದ್ರಿ ಪ್ರೊಡಕ್ಷನ್ಸ್ ಹಾಗೂ ಆರ್‌ವಿ ಸ್ಟುಡಿಯೋಸ್ ಸಹಯೋಗದಲ್ಲಿ ಕರ್ಣನ ಬಗ್ಗೆ ‘ಮಹಾವೀರ ಕರ್ಣ’ ಸಿನಿಮಾ ಘೋಷಣೆಯಾಗಿದೆ. ತೆಲುಗಿನ ಖ್ಯಾತ ನಿರ್ದೇಶಕ ರಮೇಶ್ ವರ್ಮಾ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ರಮೇಶ್ ವರ್ಮಾ ಅವರು ‘ರಾಕ್ಷಸುಡು’, ‘ಖಿಲಾಡಿ’, ‘ವೀರ’ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದಾರೆ.

ಆ್ಯಕ್ಷನ್, ಥ್ರಿಲ್ಲರ್ ಹಾಗೂ ಕಮರ್ಷಿಯಲ್ ಸಿನಿಮಾಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ರಮೇಶ್ ವರ್ಮಾ, ಇದೀಗ ಮಹಾಭಾರತದ ವ್ಯಕ್ತಿ ಕರ್ಣನ ಕಥೆಯನ್ನು ಹೊಸ ರೀತಿಯಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ. ಕೌರವರ ಜೊತೆಗಿದ್ದರೂ ತನ್ನ ಸನ್ನಡತೆಗಳಿಂದ, ತನ್ನ ವ್ಯಕ್ತಿತ್ವದಿಂದ ಅಪಾರ ಗೌರವವನ್ನು ಪಡೆದುಕೊಂಡಿರುವ ಪಾತ್ರ ಕರ್ಣನ ಪಾತ್ರ. ಕುಂತಿ ಪುತ್ರನಾಗಿ ಜನಿಸಿದರೂ ರಾಜಮನೆತನದ ಮಾನ್ಯತೆಯಿಂದ ದೂರ ಬೆಳೆದ ಕರ್ಣ, ತನ್ನ ಜೀವನದುದ್ದಕ್ಕೂ ತಿರಸ್ಕಾರ ಮತ್ತು ವಿಧಿಯ ವಿರುದ್ಧ ಹೋರಾಡುತ್ತಾನೆ. ಆದರೂ ತಾನು ನಂಬಿದ ವ್ಯಕ್ತಿಗಳು ಹಾಗೂ ತತ್ವಗಳಿಗೆ ಅಚಲವಾದ ನಿಷ್ಠೆಯನ್ನು ಹೊಂದಿರುತ್ತಾನೆ.

ಇದನ್ನೂ ಓದಿ:‘ರಾಮಾಯಣ 2’ ಬಳಿಕ ಮತ್ತೊಂದು ಸೀಕ್ವೆಲ್​ಗೆ ರೆಡಿ ಆಗಲಿದ್ದಾರೆ ರಣಬೀರ್ ಕಪೂರ್

ಇದೀಗ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಚಿತ್ರದ ಟೀಸರ್‌ನಲ್ಲಿಯೂ ಕರ್ಣನ ಈ ಪ್ರಮುಖ ಗುಣವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ಯೋಧರು, ಸಾಮ್ರಾಜ್ಯಗಳು, ಆಯುಧಗಳು ಮತ್ತು ಅದ್ಧೂರಿ ದೃಶ್ಯಗಳ ನಡುವೆ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವುದು ತನ್ನ ಮಾತಿಗೆ ಬದ್ಧನಾಗಿ ನಿಂತಿರುವ ಕರ್ಣನ ವ್ಯಕ್ತಿತ್ವ. ಕೇವಲ ಪೌರಾಣಿಕ ವೈಭವವನ್ನು ತೋರಿಸುವ ಬದಲು, ಗೌರವ, ನಿಷ್ಠೆ, ಸ್ನೇಹ, ದ್ರೋಹ, ವಿಧಿ ಹಾಗೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಬೆಲೆಯ ಸುತ್ತ ಹೆಣೆದ ಆಳವಾದ ಮಾನವೀಯ ಕಥೆಯಾಗಿ ‘ಮಹಾವೀರ ಕರ್ಣ’ ಚಿತ್ರವನ್ನು ರೂಪಿಸಲಾಗುತ್ತಿದೆ.

ಚಿತ್ರಕ್ಕೆ ರಾಮ್‌ಜಿ ದತ್ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ, ಶ್ರೀಮಣಿ ಸಂಭಾಷಣೆ ಹಾಗೂ ಜ್ಞಾನಿ ಸಂಗೀತವಿರಲಿದೆ. ಸಿನಿಮಾನಲ್ಲಿ ಕರ್ಣನಾಗಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಚಿತ್ರದ ನಟ-ನಟಿಯರ ಬಗ್ಗೆ ಇನ್ನಷ್ಟೆ ಮಾಹಿತಿಗಳು ಹೊರಬೀಳಬೇಕಿದೆ. ಮಹಾವೀರ ಕರ್ಣ ಚಿತ್ರವು ಡಿಸೆಂಬರ್ 4ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us