AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ 2’ ಬಳಿಕ ಮತ್ತೊಂದು ಸೀಕ್ವೆಲ್​ಗೆ ರೆಡಿ ಆಗಲಿದ್ದಾರೆ ರಣಬೀರ್ ಕಪೂರ್

ಬಾಲಿವುಡ್ ನಟ ರಣ್‌ಬೀರ್ ಕಪೂರ್ ‘ರಾಮಾಯಣ 2’ ಸಿನಿಮಾದ ಶೂಟಿಂಗ್ ಪೂರ್ಣಗೊಂಡ ತಕ್ಷಣವೇ ‘ಬ್ರಹ್ಮಾಸ್ತ್ರ 2’ ಚಿತ್ರದ ಕೆಲಸಗಳನ್ನು ಆರಂಭಿಸಲಿದ್ದಾರೆ. 2027 ರ ಏಪ್ರಿಲ್‌ನಲ್ಲಿ ನಿರ್ದೇಶಕ ಅಯಾನ್ ಮುಖರ್ಜಿ ಈ ಬಹುನಿರೀಕ್ಷಿತ ಸಿನಿಮಾದ ಶೂಟಿಂಗ್ ಆರಂಭಿಸಲಿದ್ದು, ರಣ್‌ಬೀರ್ ಜೊತೆಗೆ ಆಲಿಯಾ ಭಟ್ ಹಾಗೂ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ.

‘ರಾಮಾಯಣ 2’ ಬಳಿಕ ಮತ್ತೊಂದು ಸೀಕ್ವೆಲ್​ಗೆ ರೆಡಿ ಆಗಲಿದ್ದಾರೆ ರಣಬೀರ್ ಕಪೂರ್
ರಣಬೀರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 20, 2026 | 11:11 AM

Share

ಮುಖ್ಯಾಂಶಗಳು

  • ರಾಮಾಯಣ 2 ಮುಗಿಯುತ್ತಿದ್ದಂತೆ ಬ್ರಹ್ಮಾಸ್ತ್ರ 2 ಶುರು
  • ರಣ್‌ಬೀರ್ ಕಪೂರ್ ಹೊಸ ಪ್ಲಾನ್
  • ದೇವ್ ಹಾಗೂ ಶಿವನಾಗಿ ದ್ವಿಪಾತ್ರದಲ್ಲಿ ರಣ್‌ಬೀರ್:

ಬಾಲಿವುಡ್ ಹ್ಯಾಂಡ್ಸಮ್ ನಟ ರಣ್‌ಬೀರ್ ಕಪೂರ್ ತಮ್ಮ ಸಾಲು ಸಾಲು ಬ್ಲಾಕ್ ಬಸ್ಟರ್ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಪ್ರಸ್ತುತ ಅವರು ಬಿಗ್ ಬಜೆಟ್‌ನ ‘ರಾಮಾಯಣ’ ಸಿನಿಮಾದ ಶೂಟಿಂಗ್‌ನಲ್ಲಿ ಸಂಪೂರ್ಣ ಬ್ಯುಸಿಯಾಗಿದ್ದಾರೆ. ಈ ವರ್ಷದ ದೀಪಾವಳಿ ಹಬ್ಬಕ್ಕೆ ಈ ಸಿನಿಮಾ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. ಈ ಬಿಗ್ ಪ್ರಾಜೆಕ್ಟ್‌ನ ಎರಡನೇ ಭಾಗವು ಮುಂದಿನ ವರ್ಷ ಪ್ರೇಕ್ಷಕರ ಮುಂದೆ ಬರಲಿದೆ.

ರಾಮಾಯಣ 2 ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ರಣ್‌ಬೀರ್ ಕಪೂರ್ ಅವರು ‘ಬ್ರಹ್ಮಾಸ್ತ್ರ 2’ ಸಿನಿಮಾದ ಕೆಲಸಗಳನ್ನು ತಕ್ಷಣವೇ ಪ್ರಾರಂಭಿಸಲಿದ್ದಾರೆ. ಪಿಂಕ್‌ವಿಲ್ಲಾ ವರದಿಯ ಪ್ರಕಾರ ನಿರ್ದೇಶಕ ಅಯಾನ್ ಮುಖರ್ಜಿ ಈಗಾಗಲೇ ಬ್ರಹ್ಮಾಸ್ತ್ರ 2 ಚಿತ್ರದ ಕಥೆ ಹಾಗೂ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿದ್ದಾರೆ. 2027 ರ ಏಪ್ರಿಲ್ ತಿಂಗಳಿನಲ್ಲಿ ಈ ಚಿತ್ರದ ಶೂಟಿಂಗ್ ಅಧಿಕೃತವಾಗಿ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.

ಈ ಸೀಕ್ವೆಲ್‌ನಲ್ಲಿ ರಣ್‌ಬೀರ್ ಕಪೂರ್ ಅವರು ‘ದೇವ್’ ಮತ್ತು ‘ಶಿವ’ ಎಂಬ ಎರಡು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಆಲಿಯಾ ಭಟ್ ಅವರು ‘ಈಶಾ’ ಪಾತ್ರದಲ್ಲಿಯೇ ಮುಂದುವರೆಯಲಿದ್ದಾರೆ. ಅಷ್ಟೇ ಅಲ್ಲದೆ ‘ಅಮೃತ’ ಪಾತ್ರಕ್ಕಾಗಿ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರನ್ನು ಚಿತ್ರತಂಡ ಸಂಪರ್ಕಿಸುತ್ತಿದೆ. ಈ ಮೂಲಕ ಸಿನಿಮಾದಲ್ಲಿ ತಾರಾಗಣ ಇನ್ನಷ್ಟು ದೊಡ್ಡದಾಗಲಿದೆ.

ಇದನ್ನೂ ಓದಿ: ರಣ್​ಬೀರ್ ಕಪೂರ್ ಅನ್ನು ರಾಮನ ಪಾತ್ರದಲ್ಲಿ ಒಪ್ಪಲಾಗದು, ತಗಾದೆ ತೆಗೆದ ಹಿರಿಯ ನಟ

ರಣ್‌ಬೀರ್ ಕಪೂರ್ ಸಾಲಿನಲ್ಲಿ ಪ್ರಸ್ತುತ ಸಾಲು ಸಾಲು ದೊಡ್ಡ ಸಿನಿಮಾಗಳಿವೆ. ರಾಮಾಯಣ ಭಾಗ 1, ಭಾಗ 2 ಮತ್ತು ಬ್ರಹ್ಮಾಸ್ತ್ರ 2 ಸಿನಿಮಾಗಳ ಜೊತೆಗೆ ಅವರು ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದರ ಜೊತೆಗೆ ಸಖತ್ ಹೈಪ್ ಸೃಷ್ಟಿಸಿರುವ ‘ಅನಿಮಲ್ ಪಾರ್ಕ್’ ಚಿತ್ರವೂ ಅವರ ಕೈಯಲ್ಲಿದೆ. ರಣ್‌ಬೀರ್ ಕಪೂರ್ ಅವರ ಈ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನೋಡಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ರಣ್‌ಬೀರ್ ಅಬ್ಬರ ಮುಂದುವರೆಯುವುದು ಖಚಿತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More