AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಭದಲ್ಲಿ 10 ಪರ್ಸೆಂಟ್ ಪಾಲು, ಕಥೆ ಲೀಕ್ ಆರೋಪ; ವಂಗಾ ಬ್ರದರ್ಸ್ ವಿರುದ್ಧ ನಟಿ ದೀಪಿಕಾ ಗರಂ

'ಸ್ಪಿರಿಟ್' ಸಿನಿಮಾದಿಂದ ಹೊರಬಂದ ವಿಚಾರವಾಗಿ ನಟಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸಹೋದರರ ನಡುವೆ ಶೀತಲ ಸಮರ ಶುರುವಾಗಿದೆ. ಪ್ರಣಯ್ ರೆಡ್ಡಿ ಅವರ ಆರೋಪಗಳಿಗೆ ದೀಪಿಕಾ ಸಾಮಾಜಿಕ ಜಾಲತಾಣದ ಪೋಸ್ಟ್ ಲೈಕ್ ಮಾಡುವ ಮೂಲಕ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಲಾಭದಲ್ಲಿ 10 ಪರ್ಸೆಂಟ್ ಪಾಲು, ಕಥೆ ಲೀಕ್ ಆರೋಪ; ವಂಗಾ ಬ್ರದರ್ಸ್ ವಿರುದ್ಧ ನಟಿ ದೀಪಿಕಾ ಗರಂ
ದೀಪಿಕಾ-ಸಂದೀಪ್ ರೆಡ್ಡಿ ವಂಗ
ರಾಜೇಶ್ ದುಗ್ಗುಮನೆ
|

Updated on: Aug 22, 2026 | 2:46 PM

Share

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ‘ಸ್ಪಿರಿಟ್’ ಚಿತ್ರತಂಡದ ನಡುವಿನ ಕಿತ್ತಾಟ ಮುಂದುವರಿದಿದೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಸಹೋದರ ಪ್ರಣಯ್ ರೆಡ್ಡಿ ನೀಡಿದ ಹೇಳಿಕೆಗೆ ದೀಪಿಕಾ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ವಂಗಾ ಸಹೋದರರ ವಿರುದ್ಧ ಹರಿಹಾಯ್ದ ಲೇಖನವನ್ನು ಲೈಕ್ ಮಾಡುವ ಮೂಲಕ ಪರೋಕ್ಷವಾಗಿತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ವೇತನ ಮತ್ತು ಶರತ್ತುಗಳ ವಿವಾದ

ಸ್ಪಿರಿಟ್ ಸಿನಿಮಾದಿಂದ ದೀಪಿಕಾ ಹೊರಬರಲು ಸಂಭಾವನೆ ಮತ್ತು ಸಮಯದ ಕೊರತೆ ಕಾರಣ ಎಂದು ಪ್ರಣಯ್ ರೆಡ್ಡಿ ಹೇಳಿದ್ದಾರೆ. ದೀಪಿಕಾ ಶೇಕಡಾ 10 ರಷ್ಟು ಲಾಭದ ಪಾಲು ಕೇಳಿದ್ದರು. ಈ ಬೇಡಿಕೆ ನಮಗೆ ಸೂಕ್ತವೆನಿಸಲಿಲ್ಲ. ಹಾಗಾಗಿ ಬೇರೆ ನಟಿಯ ಹುಡುಕಾಟ ಆರಂಭಿಸಿದೆವು ಎಂದು ತಿಳಿಸಿದ್ದಾರೆ.

Deepika likes a post calling out Sandeep reddy vanga by u/Holiday-Version-3226 in BollyBlindsNGossip

ಕಥೆ ಸೋರಿಕೆ ಆರೋಪ

ಸಿನಿಮಾದ ಕಥೆ ಮತ್ತು ಪಾತ್ರಗಳ ವಿವರವನ್ನು ದೀಪಿಕಾ ಲೀಕ್ ಮಾಡಿದ್ದಾರೆ ಎಂದು ಪ್ರಣಯ್ ಗಂಭೀರ ಆರೋಪ ಮಾಡಿದ್ದಾರೆ. ಆಂತರಿಕ ವಿಚಾರಗಳನ್ನು ಹೊರಗೆ ಬಹಿರಂಗಪಡಿಸಿದ್ದು ನಮಗೆ ಬೇಸರ ತಂದಿದೆ. ಈ ನಡವಳಿಕೆಯಿಂದ ನಮಗೆ ತುಂಬಾ ತೊಂದರೆಯಾಗಿದೆ ಎಂದು ಅವರು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ‘ಸ್ಪಿರಿಟ್’ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರ ನಡೆದಿದ್ದಕ್ಕೆ ಕೊನೆಗೂ ಅಸಲಿ ಕಾರಣ ಬಯಲು

ದೀಪಿಕಾ ಪರೋಕ್ಷ ತಿರುಗೇಟು

ಸಾಮಾಜಿಕ ಜಾಲತಾಣದ ಪೋಸ್ಟ್ ಒಂದಕ್ಕೆ ದೀಪಿಕಾ ಲೈಕ್ ಒತ್ತಿದ್ದಾರೆ. ‘ಹೀರೋಗಳು ಲಾಭದ ಪಾಲು ಕೇಳಿದರೆ ಶಿಸ್ತು ಎನ್ನಲಾಗುತ್ತದೆ. ಅದೇ ಬೇಡಿಕೆಯನ್ನು ಮಹಿಳೆ ಇಟ್ಟರೆ ತೊಂದರೆ ಕೊಡುವವಳು ಎಂದು ಕರೆಯಲಾಗುತ್ತದೆ. ನಟಿಯೊಬ್ಬಳು ಬೇಡ ಎಂದಿದ್ದಕ್ಕೆ ಪುರುಷ ಅಹಂಗೆ ಪೆಟ್ಟು ಬಿದ್ದಿದೆ’ ಎಂದು ಆ ಪೋಸ್ಟ್‌ನಲ್ಲಿ ಬರೆಯಲಾಗಿತ್ತು. ಈ ಪೋಸ್ಟ್​ ಅನ್ನು ದೀಪಿಕಾ ಇಷ್ಟಪಟ್ಟು ಲೈಕ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು