Dookudu: ‘ದೂಕುಡು’ ಚಿತ್ರಕ್ಕೆ 10 ವರ್ಷದ ಸಂಭ್ರಮ; ಫ್ಯಾನ್ಸ್​ಗೆ ವಿಶೇಷ ಗಿಫ್ಟ್ ನೀಡಿದ ಚಿತ್ರತಂಡ

| Updated By: Digi Tech Desk

Updated on: Sep 23, 2021 | 12:18 PM

Mahesh Babu and Samantha: ತೆಲುಗಿನ ಸೂಪರ್​ ಹಿಟ್ ಚಿತ್ರ ‘ದೂಕುಡು’ಗೆ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ.

Dookudu: ‘ದೂಕುಡು’ ಚಿತ್ರಕ್ಕೆ 10 ವರ್ಷದ ಸಂಭ್ರಮ; ಫ್ಯಾನ್ಸ್​ಗೆ ವಿಶೇಷ ಗಿಫ್ಟ್ ನೀಡಿದ ಚಿತ್ರತಂಡ
ಸಮಂತಾ, ಮಹೇಶ್ ಬಾಬು
Follow us on

ಟಾಲಿವುಡ್​ನ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ‘ದೂಕುಡು’ ಚಿತ್ರ ಬಿಡುಗಡೆಯಾಗಿ ಇಂದಿಗೆ ಸರಿಯಾಗಿ 10 ವರ್ಷಗಳು ತುಂಬಿವೆ. ಮಹೇಶ್ ಬಾಬು- ಸಮಂತಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಈ ಚಿತ್ರ, ಎಲ್ಲೆಡೆ ಜನಪ್ರಿಯವಾಗಿತ್ತು. ಅಲ್ಲದೇ, ಕನ್ನಡದಲ್ಲೂ ಇದು ರಿಮೇಕ್ ಆಗಿದ್ದು, ಪುನೀತ್ ರಾಜ್​ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸೆಪ್ಟೆಂಬರ್ 11, 20011ರಂದು ‘ದೂಕುಡು’ ಚಿತ್ರ ಬಿಡುಗಡೆಯಾಗಿತ್ತು. ಇದು ಸಮಂತಾ ಸೇರಿದಂತೆ ಅನೇಕ ಕಲಾವಿದರು, ತಂತ್ರಜ್ಞರಿಗೆ ವೃತ್ತಿ ಬದುಕಿನಲ್ಲಿ ಬಹುದೊಡ್ಡ ತಿರುವನ್ನು ನೀಡಿತ್ತು. ಆದ್ದರಿಂದಲೇ ನಿರ್ಮಾಪಕರು ಮತ್ತು ವಿತರಕರು ಈ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದಾರೆ. ನಟ ಮಹೇಶ್ ಬಾಬು ‘ದೂಕುಡು’ವಿನಲ್ಲಿ ಪೋಲಿಸ್ ಪಾತ್ರದಲ್ಲಿ ಮಿಂಚಿದ್ದರು. ಅವರ ತಂದೆಯ ಪಾತ್ರದಲ್ಲಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದರು. ಬಿಡುಗಡೆಯಾದ ಹತ್ತು ವರ್ಷಗಳ ಸವಿನೆನಪಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಇಂದು ಚಿತ್ರಮಂದಿರಗಳಲ್ಲಿ ಈ ಚಿತ್ರದ ವಿಶೇಷ ಪ್ರದರ್ಶನಗಳನ್ನು ಚಿತ್ರತಂಡ ಆಯೋಜಿಸಿದೆ. ಈ ಮೂಲಕ ಅಭಿಮಾನಿಗಳಿಗೆ ಹತ್ತು ವರ್ಷಗಳ ನಂತರ ಮತ್ತೆ ತಮ್ಮ ನೆಚ್ಚಿನ ನಾಯಕ ನಟನನ್ನು ಹಾಗೂ ಚಿತ್ರವನ್ನು ದೊಡ್ಡ ತೆರೆಯ ಮೇಲೆ ಪೊಲೀಸ್ ಪಾತ್ರದಲ್ಲಿ ವೀಕ್ಷಿಸುವ ಅವಕಾಶ ಲಭಿಸಿದೆ.

ದೂಕುಡು ಚಿತ್ರದಲ್ಲಿ ಬೃಹತ್ ತಾರಾಗಣವೇ ಇತ್ತು. ಫ್ಯಾಮಿಲಿ- ಕಾಮಿಡಿ ಮಾದರಿಯ ಈ ಚಿತ್ರ ವೀಕ್ಷಕರನ್ನು ಕೊನೆಯವರೆಗೂ ಹಿಡಿದು ಕೂರಿಸುವಲ್ಲಿ ಯಶಸ್ವಿಯಾಗಿಇತ್ತು. ಸೋನು ಸೂದ್, ಬ್ರಹ್ಮಾನಂದಂ, ಕೋಟ ಶ್ರೀನಿವಾಸ ರಾವ್, ಎಂಎಸ್ ನಾರಾಯಣ ಮತ್ತು ನಾಸರ್ ಮೊದಲಾದ ಖ್ಯಾತ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಶ್ರೀನು ವೈಟ್ಲ ನಿರ್ದೇಶನದ ದೂಕುಡುವನ್ನು 14 ರೀಲ್ಸ್ ಎಂಟರ್​ಟೈನ್​ಮೆಂಟ್ ನಿರ್ಮಿಸಿತ್ತು. ಚಿತ್ರಕ್ಕೆ ಎಸ್.ಎಸ್.ತಮನ್ ಸಂಗೀಈತ ಸಂಯೋಜಿಸಿದ್ದರು. ‘ದೂಕುಡು’ಗೆ ವಿಮರ್ಷಕರಿಂದ, ವೀಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲದೇ ಹಲವಾರು ಪ್ರಶಸ್ತಿಗಳನ್ನೂ ಚಿತ್ರ ಬಾಚಿಕೊಂಡಿತ್ತು.

ಕನ್ನಡದಲ್ಲಿ ಈ ಚಿತ್ರ ‘ಪವರ್’ ಹೆಸರಿನಲ್ಲಿ ತೆರೆಕಂಡಿತ್ತು. ಕಾಲಿವುಡ್ ಹಾಗೂ ಟಾಲಿವುಡ್ ಬೆಡಗಿ ತ್ರಿಷಾ ಈ ಚಿತ್ರದ ಮುಖಾಂತರ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದರು. ಕನ್ನಡದಲ್ಲೂ ಈ ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತು. ಇದೀಗ ತ್ರಿಷಾ ಮತ್ತು ಪುನೀತ್ ಜೋಡಿ ‘ದ್ವಿತ್ವ’ ಚಿತ್ರಕ್ಕೆ ಒಂದಾಗುತ್ತಿದ್ದು, ಲೂಸಿಯಾ ಪವನ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿದೆ.

ಇದನ್ನೂ ಓದಿ:

ಕಿಯಾರಾ ಅಡ್ವಾಣಿ ಫ್ಯಾಷನ್​ ಅಭಿರುಚಿಗೆ ಸಾಟಿ ಯಾರು? ಶೇರ್​ಷಾ ಸುಂದರಿ ಈಗ ಸಖತ್​ ಮಿಂಚಿಂಗ್​

‘ನೆನಪಿರಲಿ’ ಪ್ರೇಮ್​ ಮುಂದಿನ ಚಿತ್ರಕ್ಕೆ 400 ಕೋಟಿ ರೂ. ಬಜೆಟ್​; ಹಾಲಿವುಡ್​ ಹಾದಿಯತ್ತ ‘ಲವ್ಲಿ ಸ್ಟಾರ್​’

(Mahesh Babu and Samantha starring Dookudu completes 10 years and special screenings across Andhra Pradesh and Telangana)

Published On - 9:59 am, Thu, 23 September 21