ಮಹೇಶ್​ ಬಾಬು ಹಾಗೂ ‘ದಳಪತಿ’ ವಿಜಯ್ ಫ್ಯಾನ್ಸ್​ ಮಧ್ಯೆ ವಾರ್​; ಕಾರಣ ಕೇಳಿದ್ರೆ ನಗ್ತೀರಾ

 ಒಂದೇ ದಿನ ಎರಡು ಚಿತ್ರಗಳ ಸಾಂಗ್ ರಿಲೀಸ್​ ಆಗುತ್ತಿರುವುದಕ್ಕೆ ಅಭಿಮಾನಿಗಳು ಸಂಭ್ರಮಿಸಬಹುದಿತ್ತು. ಆದರೆ, ಹಾಗೆ ಮಾಡಿಲ್ಲ. ಬದಲಿಗೆ ಕಿತ್ತಾಟ ನಡೆಸಿದ್ದಾರೆ. ಇಷ್ಟೊಂದು ಸಿಲ್ಲಿ ರೀಸನ್​ಗೆ ಕಿತ್ತಾಟ ನಡೆಯುತ್ತಿರುವ ಬಗ್ಗೆ ಕೆಲವರು ನಕ್ಕಿದ್ದಾರೆ.

ಮಹೇಶ್​ ಬಾಬು ಹಾಗೂ ‘ದಳಪತಿ’ ವಿಜಯ್ ಫ್ಯಾನ್ಸ್​ ಮಧ್ಯೆ ವಾರ್​; ಕಾರಣ ಕೇಳಿದ್ರೆ ನಗ್ತೀರಾ
ಮಹೇಶ್​ ಬಾಬು-ದಳಪತಿ ವಿಜಯ್​
Edited By:

Updated on: Feb 10, 2022 | 2:01 PM

ಚಿತ್ರರಂಗದಲ್ಲಿ ಫ್ಯಾನ್ಸ್​ ವಾರ್​ಗಳು ಆಗಾಗ ನಡೆಯುತ್ತಲೇ ಇರುತ್ತವೆ. ಸೋಶಿಯಲ್​ ಮೀಡಿಯಾ ಎಲ್ಲರ ಕೈಗೂ ಸುಲಭವಾಗಿ ಎಟುಕುತ್ತಿರುವುದರಿಂದ ಈ ರೀತಿಯ ಘಟನೆಗಳು ಹೆಚ್ಚೆಚ್ಚು ನಡೆಯುತ್ತಿವೆ. ಈಗ ನಟ ಮಹೇಶ್ ಬಾಬು (Mahesh Babu) ಹಾಗೂ ‘ದಳಪತಿ’ ವಿಜಯ್ (Thalapathy Vijay)​ ಅಭಿಮಾನಿಗಳ ಮಧ್ಯೆ ಶೀತಲ ಸಮರ ನಡೆಯುತ್ತಿದೆ. ಎರಡೂ ಬಳಗದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಕಿತ್ತಾಟ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ತಾರಕಕ್ಕೆ ಹೋದರು ಅಚ್ಚರಿ ಏನಿಲ್ಲ ಎನ್ನವು ಅಭಿಪ್ರಾಯ ವ್ಯಕ್ತವಾಗಿದೆ. ಹಾಗಾದರೆ, ಎರಡೂ ಅಭಿಮಾನಿ ಬಳಗದ ನಡುವೆ ವೈಮನಸ್ಸು ಮೂಡೋಕೆ ಕಾರಣ ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮಹೇಶ್​ ಬಾಬು ಹಾಗೂ ದಳಪತಿ ವಿಜಯ್​ ಇಬ್ಬರಿಗೂ ದೊಡ್ಡ ಅಭಿಮಾನಿ ಬಳಗ ಇದೆ. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇದೆ. ಮಹೇಶ್​ ಬಾಬು ತೆಲುಗಿನಲ್ಲಿ ಸಾಕಷ್ಟು ಹೆಸರು ಮಾಡಿದರೆ, ವಿಜಯ್​ ತಮಿಳಿನಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದಾರೆ. ಈ ಕಾರಣಕ್ಕೆ ಅವರ ಅಭಿಮಾನಿ ಬಳಗ ದೊಡ್ಡದಿದೆ. ಮಹೇಶ್​ ಬಾಬು ಅಭಿನಯದ ಕೆಲ ಸಿನಿಮಾಗಳು ತಮಿಳಿಗೆ ರಿಮೇಕ್​ ಆಗಿದ್ದು ಅದರಲ್ಲಿ ವಿಜಯ್​ ನಟಿಸಿದ್ದಾರೆ. ಆದರೆ, ಇವರ ಅಭಿಮಾನಿಗಳ ನಡುವೆ ಒಳ್ಳೆಯ ಬಾಂಧವ್ಯ ಇಲ್ಲ ಎಂಬುದು ಈಗ ಸಾಬೀತಾಗಿದೆ.

ಹೊಸ ವರ್ಷದ ಪ್ರಯುಕ್ತ ‘ಬೀಸ್ಟ್​’ ಸಿನಿಮಾ ತಂಡ ಹೊಸ ಪೋಸ್ಟರ್​ ರಿಲೀಸ್​ ಮಾಡಿತ್ತು. ಈ ಪೋಸ್ಟರ್​ನಲ್ಲಿ ಏಪ್ರಿಲ್​ನಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡುವ ಬಗ್ಗೆ ತಂಡ ಮಾಹಿತಿ ನೀಡಿತ್ತು. ಆದರೆ, ರಿಲೀಸ್​ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಈ ಚಿತ್ರ ಕೂಡ ಏಪ್ರಿಲ್​ 14ರಂದು ಬರುವ ನಿರೀಕ್ಷೆ ಇದೆ. ಇನ್ನು, ಈ ವರ್ಷದ ಸಂಕ್ರಾಂತಿ ಹಬ್ಬಕ್ಕೆ ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾದ ಬಿಡುಗಡೆ ದಿನಾಂಕವನ್ನು ಏಪ್ರಿಲ್​ 1ಕ್ಕೆ ಮುಂದೂಡಲಾಯಿತು. ಈಗ ‘ಸರ್ಕಾರು ವಾರಿ ಪಾಟ’ ಸಿನಿಮಾವನ್ನು ಮೇ 12ರಂದು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಎರಡೂ ಚಿತ್ರಗಳ ಬಗ್ಗೆ ದೊಡ್ಡ ನಿರೀಕ್ಷೆ​ ಇದೆ. ವಿಶೇಷ ಎಂದರೆ, ಈ ಎರಡೂ ಚಿತ್ರಗಳ ಸಾಂಗ್​ ಫೆಬ್ರವರಿ 14ರಂದು ರಿಲೀಸ್​ ಆಗುತ್ತಿದೆ. ಇದೇ ವಿಚಾರಕ್ಕೆ ಕಿತ್ತಾಟ ಆರಂಭ ಆಗಿದೆ.

ಒಂದೇ ದಿನ ಎರಡು ಚಿತ್ರಗಳ ಸಾಂಗ್ ರಿಲೀಸ್​ ಆಗುತ್ತಿರುವುದಕ್ಕೆ ಅಭಿಮಾನಿಗಳು ಸಂಭ್ರಮಿಸಬಹುದಿತ್ತು. ಆದರೆ, ಹಾಗೆ ಮಾಡಿಲ್ಲ. ಬದಲಿಗೆ ಕಿತ್ತಾಟ ನಡೆಸಿದ್ದಾರೆ. ‘ಯೂಟ್ಯೂಬ್​ನಲ್ಲಿ ಹೆಚ್ಚು ಲೈಕ್ಸ್​ ಗಿಟ್ಟಿಸಿಕೊಳ್ಳಲು ವಿಜಯ್​ ಅಭಿಮಾನಿಗಳು ಕಳ್ಳ ಹಾದಿ ಹಿಡಿಯುತ್ತಾರೆ’ ಎಂದು ಮಹೇಶ್​ ಬಾಬು ಅಭಿಮಾನಿಗಳು ದೂರಿದ್ದಾರೆ. ಇದನ್ನು ವಿಜಯ್​ ಅಭಿಮಾನಿಗಳು ಅಲ್ಲಗಳೆದಿದ್ದಾರೆ. ಅಲ್ಲದೆ, ‘ಸರ್ಕಾರಿ ವಾರು ಪಾಟ’ ಚಿತ್ರದ ಬಗ್ಗೆ ಹಾಗೂ ಮಹೇಶ್​ ಬಾಬು ಅಭಿಮಾನಿಗಳನ್ನು ಟೀಕಿಸಿದ್ದಾರೆ. ಇಷ್ಟೊಂದು ಸಿಲ್ಲಿ ರೀಸನ್​ಗೆ ಕಿತ್ತಾಟ ನಡೆಯುತ್ತಿರುವ ಬಗ್ಗೆ ಕೆಲವರು ನಕ್ಕಿದ್ದಾರೆ.

ಇದನ್ನೂ ಓದಿ: ರಜನಿಕಾಂತ್​ 169ನೇ ಸಿನಿಮಾಗೆ ನಿರ್ದೇಶಕ ಫಿಕ್ಸ್​; ‘ಬೀಸ್ಟ್’ ಡೈರೆಕ್ಟರ್​ ಜತೆ ಕೈ ಜೋಡಿಸಿದ ಸೂಪರ್​ ಸ್ಟಾರ್​

Sarkaru Vaari Paata: ಮಹೇಶ್​ ಬಾಬು ಹೊಸ ಚಿತ್ರದಿಂದ ಬಿಗ್ ಅಪ್ಡೇಟ್; ಇಲ್ಲಿದೆ ಹೊಸ ಸಮಾಚಾರ