ಟಿಕೆಟ್ ದರ ವಿವಾದ; ಮುಖ್ಯಮಂತ್ರಿ ಭೇಟಿ ಮಾಡಿದ ಸ್ಟಾರ್ ನಟರು
ಅಕ್ಕಿನೇನಿ ನಾಗಾರ್ಜುನ ಅವರು ಸಭೆಗೆ ಆಗಮಿಸಿರಲಿಲ್ಲ. ಇದಕ್ಕೆ ಕಾರಣವೂ ಇದೆ. ಅವರಿಗೆ ಕೊವಿಡ್ ಪಾಸಿಟಿವ್ ಆಗಿದೆ. ಹೀಗಾಗಿ, ಮನೆಯಲ್ಲೇ ಅವರು ಕ್ವಾರಂಟೈನ್ ಆಗಿದ್ದಾರೆ. ಈ ಮೊದಲು ಅವರು ಟಿಕೆಟ್ ದರದ ವಿಚಾರದಲ್ಲಿ ನೀಡಿದ್ದ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು.

ಸಿನಿಮಾ ಟಿಕೆಟ್ ದರ (Ticket Price) ವಿಚಾರದಲ್ಲಿ ಆಂಧ್ರ ಪ್ರದೇಶದಲ್ಲಿ ಹೊಸ ನಿಯಮ ಜಾರಿಗೆ ಬಂದು ಹಲವು ತಿಂಗಳು ಕಳೆದಿದೆ. ಸಿನಿಮಾ ಟಿಕೆಟ್ ದರ ಮಲ್ಟಿಪ್ಲೆಕ್ಸ್ಗಳಲ್ಲಿ 250 ರೂಪಾಯಿ ದಾಟುವಂತಿಲ್ಲ. ಸಿಂಗಲ್ ಸ್ಕ್ರೀನ್ಗಳಲ್ಲೂ ದರಕ್ಕೆ ಕಡಿವಾಣ ಹಾಕಲಾಗಿದೆ. ಇದರಿಂದ ಎಲ್ಲಾ ಸಿನಿಮಾಗಳ ಕಲೆಕ್ಷನ್ಗೆ ದೊಡ್ಡ ಮಟ್ಟದ ಹೊಡೆತ ಕೊಡುತ್ತಿದೆ. ಹೀಗಾಗಿ, ಈ ವಿಚಾರದ ಬಗ್ಗೆ ಇಂದು ತೆಲುಗು ಸ್ಟಾರ್ ನಟರು ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು (YS Jagan Mohan Reddy) ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎನ್ನುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಸಿನಿಮಾ ಟಿಕೆಟ್ಗೆ ಸರ್ಕಾರ ದರ ನಿಗದಿ ಮಾಡಿದೆ. ನಗರ ವ್ಯಾಪ್ತಿಯಲ್ಲಿ ಇರುವ ಮಲ್ಟಿಪ್ಲೆಕ್ಸ್ಗಳಿಗೆ ಟಿಕೆಟ್ ಮೊತ್ತ 75 ರೂಪಾಯಿ ಕನಿಷ್ಠ ಹಾಗೂ 250 ಗರಿಷ್ಟ ಮೊತ್ತ ನಿಗದಿ ಮಾಡಿದೆ. ಎಸಿ ಹಾಗೂ ಎಸಿ ರಹಿತ ಚಿತ್ರಮಂದಿರಗಳ ಟಿಕೆಟ್ ದರ 20-100 ರೂ ಅಂತರದಲ್ಲಿ ಇರಬೇಕು. ಪಂಚಾಯತ್ ಭಾಗದಲ್ಲಿ ಟಿಕೆಟ್ ಕನಿಷ್ಠ ದರ 20 ರೂಪಾಯಿಗೂ ಕಡಿಮೆ ಇಡಲು ಸೂಚಿಸಲಾಗಿದೆ. ಇದು ಸಿನಿಮಾ ಕಲೆಕ್ಷನ್ಗೆ ಹೊಡೆತ ನೀಡುತ್ತಿದೆ. ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
ಚಿರಂಜೀವಿ, ಪ್ರಭಾಸ್, ಮಹೇಶ್ ಬಾಬು, ರಾಜಮೌಳಿ, ಕೊರಟಾಲ ಶಿವ, ನಿರಂಜನ್ ರೆಡ್ಡಿ ಮೊದಲಾದವರು ಇಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ. ಟಿಕೆಟ್ ದರ ವಿಚಾರದಲ್ಲಿ ಸರ್ಕಾರ ಈಗಾಗಲೇ ಸಮಿತಿ ಒಂದನ್ನು ರಚನೆ ಮಾಡಿದೆ. ಆ ಸಮಿತಿ ಟಿಕೆಟ್ ದರದ ಬಗ್ಗೆ ಅಧ್ಯಯನ ನಡೆಸುತ್ತಿದೆ. ಸಿಎಂ ಜಗನ್ ಅವರು ಈ ವಿಚಾರದಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.
ಸಭೆಗೆ ಅಕ್ಕಿನೇನಿ ನಾಗಾರ್ಜುನ ಗೈರು
ಅಕ್ಕಿನೇನಿ ನಾಗಾರ್ಜುನ ಅವರು ಸಭೆಗೆ ಆಗಮಿಸಿರಲಿಲ್ಲ. ಇದಕ್ಕೆ ಕಾರಣವೂ ಇದೆ. ಅವರಿಗೆ ಕೊವಿಡ್ ಪಾಸಿಟಿವ್ ಆಗಿದೆ. ಹೀಗಾಗಿ, ಮನೆಯಲ್ಲೇ ಅವರು ಕ್ವಾರಂಟೈನ್ ಆಗಿದ್ದಾರೆ. ಈ ಮೊದಲು ಅವರು ಟಿಕೆಟ್ ದರದ ವಿಚಾರದಲ್ಲಿ ನೀಡಿದ್ದ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು.
ನಾಗಾರ್ಜುನ ನಟನೆಯ ‘ಬಂಗಾರ್ರಾಜು’ ಚಿತ್ರ ಜನವರಿ 14ರಂದು ತೆರೆಗೆ ಬಂದಿದೆ. ಈ ಸಿನಿಮಾ ರಿಲೀಸ್ಗೂ ಮೊದಲು ಮಾತನಾಡಿರುವ ಅವರು, ‘ಈ ದರದಿಂದ ನಮ್ಮ ಸಿನಿಮಾಗೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದಿದ್ದರು. ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುತ್ತಿರುವಾಗ ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಇದರಲ್ಲಿ ನಾಗಾರ್ಜುನ ಅವರ ಸ್ವಾರ್ಥ ಇದೆ ಎಂದು ಕೆಲವರು ಹೇಳಿದ್ದರು. ಅಭಿಮಾನಿಗಳು ಕೂಡ ಅಸಮಾಧಾನ ಹೊರಹಾಕಿದ್ದರು.
ಇದನ್ನೂ ಓದಿ: ಅಲ್ಲು ಅರ್ಜುನ್ ಜತೆ ರನ್ನಿಂಗ್ ರೇಸ್ಗೆ ಇಳಿದ ಮಗಳು ಅಲ್ಲು ಅರ್ಹಾ; ವೈರಲ್ ಆಯ್ತು ವಿಡಿಯೋ
‘ಸಮಂತಾ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಿಲ್ಲ’; ಕಿಡಿಕಾರಿದ ಅಕ್ಕಿನೇನಿ ನಾಗಾರ್ಜುನ




