ಮಹೇಶ್ ಬಾಬು-ತ್ರಿವಿಕ್ರಮ್ ಸಿನಿಮಾ ರಿಲೀಸ್​ ಬಗ್ಗೆ ಘೋಷಣೆ; ಆಗಸ್ಟ್​ನಿಂದ ಶೂಟಿಂಗ್

ಮಹೇಶ್ ಬಾಬು ಅವರು ‘ಸರ್ಕಾರು ವಾರಿ ಪಾಟ’ ಸಿನಿಮಾ ತೆರೆಕಂಡ ಬಳಿಕ ಒಂದು ಬ್ರೇಕ್ ತೆಗೆದುಕೊಂಡಿದ್ದರು. ಇಡೀ ಫ್ಯಾಮಿಲಿ ಜತೆ ಅವರು ವಿದೇಶಕ್ಕೆ ತೆರಳಿದ್ದರು. ಈಗ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲು ರೆಡಿ ಆಗಿದ್ದಾರೆ.

ಮಹೇಶ್ ಬಾಬು-ತ್ರಿವಿಕ್ರಮ್ ಸಿನಿಮಾ ರಿಲೀಸ್​ ಬಗ್ಗೆ ಘೋಷಣೆ; ಆಗಸ್ಟ್​ನಿಂದ ಶೂಟಿಂಗ್
ತ್ರಿವಿಕ್ರಮ್-ಮಹೇಶ್
Edited By:

Updated on: Jul 09, 2022 | 3:38 PM

ಮಹೇಶ್ ಬಾಬು (Mahesh Babu) ಅವರು ‘ಸರ್ಕಾರು ವಾರಿ ಪಾಟ’ (Sarkaru Vaari Paata) ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರದಿಂದ ಮಹೇಶ್ ಬಾಬು ಚಾರ್ಮ್​ ಹೆಚ್ಚಿದೆ. ತೆಲುಗು ಭಾಷೆಯಲ್ಲಿ ಮಾತ್ರ ತೆರೆಗೆ ಬಂದ ಈ ಸಿನಿಮಾ 200+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈಗ ಮಹೇಶ್ ಬಾಬು ಮುಂದಿನ ಸಿನಿಮಾ ಬಗ್ಗೆ ಪ್ರೇಕ್ಷಕರು ಕಾತುರರಾಗಿ ಕಾಯುತ್ತಿದ್ದಾರೆ. ಆ ಬಗ್ಗೆ ಕೊನೆಗೂ ಅಧಿಕೃತ ಘೋಷಣೆ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್​ ಸಖತ್ ಖುಷಿಯಾಗಿದ್ದಾರೆ.

ಮಹೇಶ್ ಬಾಬು ಅವರು ‘ಸರ್ಕಾರು ವಾರಿ ಪಾಟ’ ಸಿನಿಮಾ ತೆರೆಕಂಡ ಬಳಿಕ ಒಂದು ಬ್ರೇಕ್ ತೆಗೆದುಕೊಂಡಿದ್ದರು. ಇಡೀ ಫ್ಯಾಮಿಲಿ ಜತೆ ಅವರು ವಿದೇಶಕ್ಕೆ ತೆರಳಿದ್ದರು. ಜರ್ಮನಿ ಹಾಗೂ ಅಮೆರಿಕಕ್ಕೆ ಭೇಟಿ ನೀಡಿ ಬಂದಿದ್ದರು. ಈಗ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲು ರೆಡಿ ಆಗಿದ್ದಾರೆ.

ಇದನ್ನೂ ಓದಿ
‘ಸಮಂತಾ ಆಂಟಿ ನನ್ನ ಬೆಸ್ಟ್​ ಫ್ರೆಂಡ್​’ ಎಂದ ಮಹೇಶ್​ ಬಾಬು ಪುತ್ರಿ ಸಿತಾರಾ; ವಿಡಿಯೋ ವೈರಲ್​
Sarkaru Vaari Paata Twitter review: ‘ಸರ್ಕಾರು ವಾರಿ ಪಾಟ’ ಚಿತ್ರ ನೋಡಿ ಮಹೇಶ್​ ಬಾಬು ಫ್ಯಾನ್ಸ್​ ಏನಂದ್ರು?
ಹಿಂದಿ ಚಿತ್ರರಂಗದ ಎಂಟ್ರಿ ಬಗ್ಗೆ ಮಹೇಶ್​ ಬಾಬುಗೆ ಪದೇಪದೇ ಪ್ರಶ್ನೆ; ಅವರು ಕೊಟ್ಟ ಖಡಕ್ ಉತ್ತರ ಹೇಗಿತ್ತು ನೋಡಿ
‘ಹೆಚ್ಚೆಚ್ಚು ಹೆಮ್ಮೆ ಪಡುವಂತೆ ಮಾಡುತ್ತಿದ್ದೀಯ’; ಮಗಳು ಸಿತಾರಾ ಬಗ್ಗೆ ಮಹೇಶ್​ ಬಾಬು ವಿಶೇಷ ಮಾತು

ಮಹೇಶ್ ಬಾಬು ಅವರ ಮುಂದಿನ ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಟಾಲಿವುಡ್​ನಲ್ಲಿ ತ್ರಿವಿಕ್ರಮ್ ಅವರು ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಇಬ್ಬರೂ ಈಗ ಒಂದಾಗುತ್ತಿರುವ ವಿಚಾರ ಕೇಳಿ ಫ್ಯಾನ್ಸ್ ಖುಷಿಯಲ್ಲಿದ್ದಾರೆ. ಈಗ ಚಿತ್ರತಂಡ ಈ ಸಿನಿಮಾ ಬಗ್ಗೆ ಅಪ್​ಡೇಟ್ ನೀಡಿದೆ.

ಆಗಸ್ಟ್​ ತಿಂಗಳಲ್ಲಿ ಈ ಚಿತ್ರದ ಶೂಟಿಂಗ್ ಆರಂಭ ಆಗಲಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಹಾರಿಕಾ ಹಾಸಿನಿ ಕ್ರಿಯೇಷನ್ಸ್​ ಮಾಹಿತಿ ನೀಡಿದೆ. ‘ಎವರ್​ಗ್ರೀನ್ ಕಾಂಬಿನೇಷನ್ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್ ಸಿನಿಮಾ ಮತ್ತೆ ಬರುತ್ತಿದೆ. ಮಹೇಶ್ ಬಾಬು 28ನೇ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಆಗಸ್ಟ್ ತಿಂಗಳಿಂದ ಶೂಟಿಂಗ್ ಆರಂಭ ಆಗಲಿದೆ. 2023ರ ಬೇಸಿಗೆಗೆ ಸಿನಿಮಾ ರಿಲೀಸ್ ಆಗಲಿದೆ’ ಎಂದು ಮಾಹಿತಿ ನೀಡಲಾಗಿದೆ.

ಇದನ್ನೂ ಒದಿ: ನ್ಯೂಯಾರ್ಕ್​ ಡೈರಿಸ್​​ ನೆನಪಿಸಿಕೊಂಡ ಮಹೇಶ್ ಬಾಬು ಪತ್ನಿ ನಮ್ರತಾ

‘ಅತಡು’ ಹಾಗೂ ‘ಖಲೇಜ’ ಚಿತ್ರದಲ್ಲಿ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಒಟ್ಟಾಗಿ ಕೆಲಸ ಮಾಡಿದ್ದರು. ಈಗ 12 ವರ್ಷಗಳ ಬಳಿಕ ಇಬ್ಬರೂ ಮೂರನೇ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಚಿತ್ರದ ಬಳಿಕ ಮಹೇಶ್ ಬಾಬು ರಾಜಮೌಳಿ ಜತೆ ಕೈ ಜೋಡಿಸುತ್ತಿದ್ದಾರೆ.

Published On - 3:29 pm, Sat, 9 July 22