AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಳಿ’ ಚಿತ್ರ ಪ್ಲಾಟ್‌ಫಾರ್ಮ್ ತಯಾರಕರಿಗೆ ಕ್ಷಮೆಯಾಚಿಸಿದ ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯ

ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯವು ಕಾಲಿವುಡ್ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ತನ್ನ ಚಿತ್ರದ ಪ್ರಚಾರಕ್ಕಾಗಿ ರಚಿಸಿದ ಕಾಳಿ ಚಿತ್ರ ಮತ್ತು ಹಿಂದೂಫೋಬಿಕ್ ಪೋಸ್ಟರ್‌ನೊಂದಿಗೆ ಪ್ರಚಾರ ಮಾಡಲು ವೇದಿಕೆ ಮಾಡಿಕೊಟ್ಟ ವಿಶ್ವವಿದ್ಯಾನಿಲಯ ಕ್ಷಮೆಯಾಚಿಸಿದೆ.

'ಕಾಳಿ' ಚಿತ್ರ ಪ್ಲಾಟ್‌ಫಾರ್ಮ್ ತಯಾರಕರಿಗೆ ಕ್ಷಮೆಯಾಚಿಸಿದ ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯ
Toronto Metropolitan University apologizes
TV9 Web
| Edited By: |

Updated on:Jul 09, 2022 | 6:33 PM

Share

ಕಾಲಿವುಡ್ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಕಾಳಿ ಚಿತ್ರವು ಬಾರಿ ವಿವಾದಗಳನ್ನು ಸೃಷ್ಟಿ ಮಾಡಿದೆ. ಈ ಚಿತ್ರವು ಹಿಂದೂ ಧಾರ್ಮಿಕ ವಿಚಾರಗಳಿಗೆ ಮತ್ತು ದೇವರಿಗೆ ಅವಮಾನ ಮಾಡಿದೆ ಎಂಬ ವಿಚಾರವಾಗಿ ದೇಶದ್ಯಾಂತ ಭಾರೀ ಸದ್ದು ಮಾಡಿದೆ. ಇದೀಗ ಈ ವಿಚಾರವಾಗಿ ಕಾಳಿ ಚಿತ್ರದ ಪ್ರಚಾರಕ್ಕಾಗಿ ವೇದಿಕೆಯನ್ನು ಸೃಷ್ಟಿ ಮಾಡಿಕೊಟ್ಟ ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯವು ಸಾರ್ವಜನಿಕವಾಗಿ  ಕ್ಷಮೆಯಾಚಿಸಿದೆ. ವಿಶ್ವವಿದ್ಯಾನಿಲಯ ಪ್ರಾಯೋಜಿತ ಸಮಾರಂಭದಲ್ಲಿ “ಕಾಳಿ” ಚಲನಚಿತ್ರವನ್ನು ಪ್ರದರ್ಶಿಸಲಾಯಿತು ಮತ್ತು ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ಹಿಂದೂ ದೇವತೆ ಕಾಳಿ ಸಿಗರೇಟ್ ಸೇದುತ್ತಿರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದರು. ಇದೀಗ ಈ ಬಗ್ಗೆ ಕ್ಷಮಾಪಣೆ ಪತ್ರವನ್ನು ಟ್ವಿಟ್ ಮೂಲಕ ವೈರಲ್ ಮಾಡಿದೆ. ನಮ್ಮ ವಿಶ್ವ ಕ್ಷಮಾಪಣೆಯ ಪತ್ರದಲ್ಲಿ, ಈ ಕಾರ್ಯವನ್ನು  ನಮ್ಮ ವಿಶ್ವವಿದ್ಯಾಲಯವು  ತನ್ನ  ಸಮಸ್ಯೆಯನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಬದ್ಧವಾಗಿದೆ ಮತ್ತು ಅಂತಹ ಸೂಕ್ಷ್ಮ ವಿಷಯಗಳನ್ನು ಹೆಚ್ಚು  ಅಗತ್ಯವನ್ನು ಒಪ್ಪಿಕೊಂಡಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ. ಕಾಳಿ ಚಿತ್ರ ಪ್ರದರ್ಶನದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಲಾಗಿದೆ.

ಈ ಚಲನಚಿತ್ರವನ್ನು ಅಗಾ ಖಾನ್ ಮ್ಯೂಸಿಯಂನಲ್ಲಿನ ಅಂಡರ್ ದಿ ಟೆಂಟ್  ಯೋಜನೆಯಲ್ಲಿ ತೋರಿಸಬೇಕಿತ್ತು ಮತ್ತು ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದ ಕೆನಡಾ ಎಕ್ಸಲೆನ್ಸ್ ರಿಸರ್ಚ್ ಚೇರ್ ಇನ್ ಮೈಗ್ರೇಷನ್ ಅಂಡ್ ಇಂಟಿಗ್ರೇಷನ್ ಅಥವಾ ಸಿಇಆರ್‌ಸಿ ಮೈಗ್ರೇಷನ್ ಆಯೋಜಿಸಿತ್ತು. ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯವು ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರಿಂದ ದೂರವಿದೆ. ಕಾರ್ಯಕ್ರಮದ ಸಂಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ನಾವೇ ತೆಗೆದುಕೊಳ್ಳುತ್ತವೆ ಎಂದು ವಿಶ್ವವಿದ್ಯಾಲಯವು ಹೇಳಿದೆ. ವಿಶ್ವವಿದ್ಯಾನಿಲಯವು ನಮ್ಮ ಕಡೆಯಿಂದ ಈ ವಿಚಾರಕ್ಕಾಗಿ  ಕ್ಷಮೆಯಾಚಿಸಲು ಬಯಸುತ್ತದೆ ಎಂದು ಪತ್ರ ಬರೆದಿದೆ.

ಇದನ್ನೂ ಓದಿ
Image
ಬೆಂಗಳೂರು ಮೈಸೂರು ರಸ್ತೆಯಲ್ಲಿ ಸರಣಿ ಅಪಘಾತ! ಟೆಂಪೋ, ಬಿಎಂಟಿಸಿ ಬಸ್ ನಡುವೆ ಸಿಲುಕಿ ಆಟೋ ಜಖಂ
Image
36 ವರ್ಷದ ಬಳಿಕ ಮರುಕಳಿಸಿತು ಇತಿಹಾಸ; ಕಮಲ್​ ಹಾಸನ್​-ಚಿರಂಜೀವಿ ಸ್ನೇಹದ ರೆಟ್ರೋ ಫೋಟೋ ವೈರಲ್
Image
ಶಿಕ್ಷಕರ ಮತ್ತು ಪದವಿಧರ ಕ್ಷೇತ್ರಗಳ ಚುನಾವಣೆ: ಇಂದು ಮೂರು ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
Image
Chicago Shootings: ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು, ಚಿಕಾಗೊದಲ್ಲಿ ಐವರು ಸಾವು, 16 ಮಂದಿಗೆ ಗಾಯ

ಅಗಾಖಾನ್ ಮ್ಯೂಸಿಯಂ ಕ್ಷಮೆಯಾಚಿಸಿದೆ

ಹಿಂದೂಫೋಬಿಕ್ ಚಿತ್ರ ‘ಕಾಳಿ’ ಪ್ರದರ್ಶನವನ್ನು ನಿಲ್ಲಿಸಿದೆ. ಜುಲೈ 6 ರಂದು ಹಿಂದೂಫೋಬಿಕ್ ಚಿತ್ರ ‘ಕಾಳಿ’ ಪ್ರದರ್ಶನವನ್ನು ನಿಲ್ಲಿಸಲು ವಿಶ್ವವಿದ್ಯಾಲಯ ನಿರ್ಧರಿಸಿತ್ತು. ವಿಯನ್ ನ್ಯೂಸ್‌ನ ಪ್ರಶ್ನೆಗೆ ಉತ್ತರವಾಗಿ ವಿಶ್ವವಿದ್ಯಾನಿಲಯವು ‘ಕಾಳಿ’ ಚಿತ್ರವು ‘ಅಂಡರ್ ದಿ ಟೆಂಟ್’ ಕಾರ್ಯಕ್ರಮದ ಮುಂದಿನ ಪ್ರದರ್ಶನದ ಭಾಗವಾಗಿರುವುದಿಲ್ಲ ಎಂದು ಹೇಳಿದೆ.

ಇದನ್ನು ಓದಿ: ವಿವಾದ ಸೃಷ್ಟಿಸಿರುವ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ಲುಕ್‌ಔಟ್ ನೋಟಿಸ್

ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯವು ಕಾರ್ಯಕ್ರಮದ ವಿವರಗಳ ಪುಟದಲ್ಲಿ ಹೇಳಿಕೆಯನ್ನು ಕೂಡ ಸೇರಿಸಿದೆ. ಹೇಳಿಕೆಯಲ್ಲಿ, ವಿಶ್ವವಿದ್ಯಾನಿಲಯದ CERC ವಿಭಾಗವು, ಜುಲೈ 2, ಶನಿವಾರದಂದು ನಮ್ಮ ಅಂಡರ್ ದಿ ಟೆಂಟ್ ಪ್ರಸ್ತುತಿಯಲ್ಲಿನ ಕೆಲವು ವಿಷಯವು ಅಪರಾಧವನ್ನು ಉಂಟು ಮಾಡಿದೆ ಎಂದು ನಾವು ವಿಷಾದಿಸುತ್ತೇವೆ ಮತ್ತು ಇದನ್ನು ಪರಿಹರಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಾವು ಸಮಾನತೆ, ವೈವಿಧ್ಯತೆ, ಏಕತೆಗೆ ಬದ್ಧರಾಗಿದ್ದೇವೆ ಮತ್ತು ನಮ್ಮ ಸಮಾಜದಲ್ಲಿನ ನಂಬಿಕೆಗಳು ಮತ್ತು ದೃಷ್ಟಿಕೋನಗಳ ವೈವಿಧ್ಯತೆಯನ್ನು ಗೌರವಿಸುತ್ತೇವೆ ಎಂದು ಹೇಳಿಕೊಂಡಿದೆ. ಇದಕ್ಕೂ ಒಂದು ದಿನ ಮುಂಚಿತವಾಗಿ, ಅಗಾ ಖಾನ್ ಮ್ಯೂಸಿಯಂ ಕೂಡ ಹೇಳಿಕೆಯನ್ನು ನೀಡಿತ್ತು ಮತ್ತು ಹಿಂದೂ ಮತ್ತು ಇತರ ನಂಬಿಕೆ ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದೆ.

Published On - 5:40 pm, Sat, 9 July 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್