AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂಜಾಡಿದ ನಟ ಮಹೇಶ್ ಬಾಬು, ವಿಕ್ಟರಿ ವೆಂಕಟೇಶ್: ಕಾನೂನು ಕ್ರಮಕ್ಕೆ ಒತ್ತಾಯ

Mahesh Babu-Venkatesh: ನಟ ಮಹೇಶ್ ಬಾಬು ಹಾಗೂ ವಿಕ್ಟರಿ ವೆಂಕಟೇಶ್ ಅವರುಗಳು ಬಾಜಿ ಕಟ್ಟಿ ಇಸ್ಪೀಟ್ ಆಟ ಆಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಜೂಜಾಡಿದ ನಟ ಮಹೇಶ್ ಬಾಬು, ವಿಕ್ಟರಿ ವೆಂಕಟೇಶ್: ಕಾನೂನು ಕ್ರಮಕ್ಕೆ ಒತ್ತಾಯ
ಮಹೇಶ್-ವೆಂಕಿ
ಮಾಲಾಶ್ರೀ ಅಂಚನ್​
| Edited By: |

Updated on: Nov 05, 2023 | 6:37 PM

Share

ಸಿನಿಮಾ ಸೆಲೆಬ್ರಿಟಿಗಳು (Movie Celebrity) ಕ್ರೀಡೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳಿಗಾಗಿಯೇ ಸಿಸಿಎಲ್ ಕ್ರಿಕೆಟ್ ಟೂರ್ನಿ ಸೇರಿದಂತೆ ವಿವಿಧ ಕ್ರೀಡಾ ಟೂರ್ನಿಗಳಿವೆ. ಬಾಲಿವುಡ್ ನಟರು ವಾರಕ್ಕೊಮ್ಮೆ ಸೇರಿ ಫುಟ್​ಬಾಲ್ ಸಹ ಆಡುತ್ತಾರಂತೆ. ಇನ್ನು ನಟ ಸುದೀಪ್ ಅವರು ಸಹನಟರ ತಂಡ ಮಾಡಿಕೊಂಡು ಕ್ರಿಕೆಟ್ ಒಮ್ಮೊಮ್ಮೆ ಬ್ಯಾಡ್​ಮಿಂಟನ್ ಸಹ ಆಡುತ್ತಾರೆ. ಆದರೆ ಇತ್ತೀಚೆಗೆ ತೆಲುಗಿನ ಸ್ಟಾರ್ ನಟರಾದ ಮಹೇಶ್ ಬಾಬು ಹಾಗೂ ವಿಕ್ಟರಿ ವೆಂಕಟೇಶ್ ಒಟ್ಟು ಸೇರಿ ಆಡಿರುವ ‘ಕ್ರೀಡೆ’ ವಿವಾದಕ್ಕೆ ಕಾರಣವಾಗಿದೆ. ಇಬ್ಬರೂ ನಟರ ವಿರುದ್ಧ ದೂರು ದಾಖಲಿಸಿಕೊಳ್ಳಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.

ಮಹೇಶ್ ಬಾಬು ಹಾಗೂ ವಿಕ್ಟರಿ ವೆಂಕಟೇಶ್ ಅವರುಗಳು ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಇಸ್ಪೀಟು ಆಡಿದ್ದಾರೆ. ಕೇವಲ ಆಟ ಆಡಿದ್ದರೆ ಅದು ಅಷ್ಟಾಗಿ ಸುದ್ದಿ ಆಗುತ್ತಿರಲಿಲ್ಲವೇನೋ ಆದರೆ ಈ ನಟರು ಹಣ ತೊಡಗಿಸಿ ಇಸ್ಪೀಟ್ ಆಟ ಆಡಿದ್ದಾರೆ. ಟೇಬಲ್​ ಮೇಲೆ ಪಕ್ಕ-ಪಕ್ಕ ಕುಳಿತುಕೊಂಡು ಮಹೇಶ್ ಹಾಗೂ ವಿಕ್ಟರಿ ವೆಂಕಟೇಶ್ ಅವರು ಇಸ್ಪೀಟ್ ಆಡುತ್ತಿರುವ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಇದನ್ನೂ ಓದಿ:ವಿಕ್ಟರಿ ವೆಂಕಟೇಶ್ ಪುತ್ರಿಯ ನಿಶ್ಚಿತಾರ್ಥ: ವರ ಯಾರು?

ಮಹೇಶ್ ಹಾಗೂ ವಿಕ್ಟರಿ ವೆಂಕಟೇಶ್ ಅವರುಗಳು ಒಟ್ಟಿಗೆ ಇಸ್ಪೀಟು ಆಡುತ್ತಿರುವ ಚಿತ್ರ ವೈರಲ್ ಆಗುತ್ತಿದ್ದಂತೆ. ಹಲವರು ಈ ಬಗ್ಗೆ ಟ್ರೋಲ್, ಮೀಮ್​ಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು, ಹಣ ತೊಡಗಿಸಿ ಇಸ್ಪೀಟ್ ಆಟ ಆಡಿರುವ ಈ ನಟರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು, ಹೈದರಾಬಾದ್ ಪೊಲೀಸರು ಸ್ವಯಂ ಪ್ರೇರಿತವಾಗಿ ಈ ಇಬ್ಬರೂ ನಟರ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಇನ್ನು ಕೆಲವರು, ಮಹೇಶ್ ಬಾಬು ಹಾಗೂ ವಿಕ್ಟರಿ ವೆಂಕಟೇಶ್ ಅವರುಗಳು ಅಲ್ಲಿ ಇಸ್ಪೀಟು ಆಡಲು ಹೋಗಿರಲಿಲ್ಲ ಬದಲಿಗೆ ಅವರು ಕ್ಲಬ್ ಉದ್ಘಾಟನೆಗೆಂದು ಹೋಗಿದ್ದರು ಅಷ್ಟೆ. ಇಬ್ಬರೂ ಸಹ ಒಳ್ಳೆಯ ವ್ಯಕ್ತಿಗಳಾಗಿದ್ದು, ಕಾನೂನಿಗೆ ವಿರುದ್ಧವಾದ ಚಟುವಟಿಕೆಗಳಿಂದ ಸದಾ ದೂರವೇ ಇರುತ್ತಾರೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸಿನಿಮಾಗಳ ವಿಷಯಕ್ಕೆ ಬರುವುದಾದರೆ ನಟ ವೆಂಕಟೇಶ್, ‘ಸೈಂಧವ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಶ್ರೀಲೀಲಾ ಸಹ ನಟಿಸಿದ್ದಾರೆ. ಇನ್ನು ನಟ ಮಹೇಶ್ ಬಾಬು, ‘ಗುಂಟೂರು ಖಾರಂ’ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾವನ್ನು ತ್ರಿವಿಕ್ರಮ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿಯೂ ಸಹ ಶ್ರೀಲೀಲಾ ನಟಿಸಿದ್ದಾರೆ. ಅದಾದ ಬಳಿಕ ರಾಜಮೌಳಿಯ ಹೊಸ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ