Samantha Tattoo: ಸಮಂತಾ ಮೈಮೇಲೆ ಇನ್ನೂ ಇದೆ ಮಾಜಿ ಗಂಡನ ಟ್ಯಾಟೂ; ಮತ್ತೆ ರಾಜಿ ಆಗುವ ಸೂಚನೆ?

ಸಮಂತಾ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗ್ಲಾಮರಸ್​​ ಆಗಿರುವ ಈ ಫೋಟೋಗಳನ್ನು ನೋಡಿದಾಗ ಅಭಿಮಾನಿಗಳ ಕಣ್ಣಿಗೆ ಮೊದಲು ಕಾಣಿಸಿದ್ದೇ ಮಾಜಿ ಗಂಡನ ಹೆಸರಿರುವ ಟ್ಯಾಟೂ! ಹೌದು, ಸಮಂತಾ ಮೈಮೇಲೆ ‘ಚೈ’ ಎಂಬ ಟ್ಯಾಟೂ ಇನ್ನೂ ಹಾಗೆಯೇ ಇದೆ. ಅದನ್ನು ಮರೆಮಾಚುವ ಗೋಜಿಗೂ ಅವರು ಕೈ ಹಾಕಿಲ್ಲ.

Samantha Tattoo: ಸಮಂತಾ ಮೈಮೇಲೆ ಇನ್ನೂ ಇದೆ ಮಾಜಿ ಗಂಡನ ಟ್ಯಾಟೂ; ಮತ್ತೆ ರಾಜಿ ಆಗುವ ಸೂಚನೆ?
ಸಮಂತಾ ರುತ್​ ಪ್ರಭು
Follow us
ಮದನ್​ ಕುಮಾರ್​
|

Updated on: Nov 05, 2023 | 3:25 PM

ಪ್ರೀತಿಯಲ್ಲಿ ಬಿದ್ದಾಗ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಬಹುತೇಕರು ಟ್ಯಾಟೂ (Tattoo) ಹಾಕಿಸಿಕೊಳ್ಳುತ್ತಾರೆ. ಆದರೆ ಬ್ರೇಕಪ್​ ಆದಾಗ ಅದರಿಂದ ಕಿರಿಕಿರಿ ಅನುಭವಿಸುತ್ತಾರೆ. ನಟಿ ಸಮಂತಾ ರುತ್​ ಪ್ರಭು ಅವರಿಗೂ ಹಾಗೆಯೇ ಆಗಿದೆ. ಅಕ್ಕಿನೇನಿ ನಾಗ ಚೈತನ್ಯ (Naga Chaitanya) ಜೊತೆ ಅವರು ಪ್ರೀತಿಯಲ್ಲಿ ಮುಳುಗಿದ್ದರು. ಆಗ ಅವರು ‘ಚೈ’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಮದುವೆ ಬಳಿಕ ಕೇವಲ ನಾಲ್ಕು ವರ್ಷಕ್ಕೆ ಅವರ ದಾಂಪತ್ಯದಲ್ಲಿ ಬಿರುಕು ಮಾಡಿತು. ಕಡೆಗೂ ಅವರು ವಿಚ್ಚೇದನ ಪಡೆದರು. ಆಗ ಅವರಿಗೆ ಹಳೇ ಟ್ಯಾಟೂ ಕಿರಿಕಿರಿ ಉಂಟುಮಾಡಿತು. ಅದನ್ನು ಸಮಂತಾ (Samantha Ruth Prabhu) ತೆಗೆಸುತ್ತಾರೆ ಎಂದು ಬಹಳ ಹಿಂದೆಯೇ ಸುದ್ದಿ ಹಬ್ಬಿತ್ತು. ಆದರೆ ಆ ಟ್ಯಾಟೂಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.

ಸಮಂತಾ ರುತ್​ ಪ್ರಭು ಅವರು ಇತ್ತೀಚೆಗೆ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗ್ಲಾಮರಸ್​​ ಆಗಿರುವ ಈ ಫೋಟೋಗಳನ್ನು ನೋಡಿದಾಗ ಅಭಿಮಾನಿಗಳ ಕಣ್ಣಿಗೆ ಮೊದಲು ಕಾಣಿಸಿದ್ದೇ ಮಾಜಿ ಗಂಡನ ಹೆಸರಿರುವ ಟ್ಯಾಟೂ! ಹೌದು, ಸಮಂತಾ ಅವರ ಮೈಮೇಲೆ ‘ಚೈ’ ಎಂಬ ಟ್ಯಾಟೂ ಇನ್ನೂ ಹಾಗೆಯೇ ಇದೆ. ಅದನ್ನು ಮರೆಮಾಚುವ ಗೋಜಿಗೂ ಅವರು ಕೈ ಹಾಕಿಲ್ಲ. ತಮ್ಮ ಪಾಡಿಗೆ ತಾವು ಪೋಸ್​ ನೀಡಿದ್ದಾರೆ. ಹಚ್ಚೆ ಕಾಣಿಸಿದರೂ ಡೋಂಟ್​ ಕೇರ್​ ಎಂಬ ರೀತಿಯಲ್ಲಿ ಸಮಂತಾ ನಡೆದುಕೊಂಡಿದ್ದಾರೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಮಾಜಿ ಗಂಡನ ಹೆಸರಿನ ಟ್ಯಾಟೂ ಅನ್ನು ಸಮಂತಾ ಇನ್ನೂ ತೆಗೆಸಿಲ್ಲ ಎಂಬುದು ಗೊತ್ತಾದ ಬಳಿಕ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ. ‘ಹಚ್ಚೆ ತೆಗೆಸಿದ್ದಾರೆ ಅಂತ ಯಾರೋ ಹೇಳಿದ್ದು’ ಎಂದು ನೆಟ್ಟಿಗರು ಅಚ್ಚರಿಯಿಂದ ಪ್ರಶ್ನೆ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋ ವೈರಲ್​ ಆಗಿದೆ. ಸಮಂತಾ ಅವರು ಬೇಕಂತಲೇ ಈ ರೀತಿ ಪೋಸ್​ ನೀಡಿರಬಹುದು, ಮಾಜಿ ಗಂಡನ ಜೊತೆ ರಾಜಿ ಆಗುವ ಬಗ್ಗೆ ಅವರು ಈ ರೀತಿಯಲ್ಲಿ ಸೂಚನೆ ನೀಡಿರಬಹುದು ಎಂದು ಕೂಡ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಮಂತಾ ಕಡೆಯಿಂದಲೇ ಪ್ರತಿಕ್ರಿಯೆ ಸಿಗಬೇಕಿದೆ.

ಇದನ್ನೂ ಓದಿ: Samantha: ಮಯೋಸೈಟಿಸ್​ ಕಾಯಿಲೆಗೆ ಸಮಂತಾ ಪಡೆಯುತ್ತಿರುವ ಚಿಕಿತ್ಸೆ ಹೇಗಿದೆ ನೋಡಿ; ಫೋಟೋ ವೈರಲ್​

ನಾಗ ಚೈತನ್ಯ ಮತ್ತು ಸಮಂತಾ ಅವರು ಜೊತೆಯಾಗಿ ಇದ್ದಾಗ ಒಂದು ಶ್ವಾನವನ್ನು ಸಾಕಿದ್ದರು. ಅದಕ್ಕೆ ಹಶ್​ ಎಂದು ಹೆಸರು ಇಟ್ಟಿದ್ದರು. ಇಬ್ಬರ ವಿಚ್ಛೇದನದ ಬಳಿಕ ಈ ಶ್ವಾನ ಕೂಡ ಬೇರೆಯವರ ಪಾಲಾಗಲಿದೆ ಎಂದು ಕೆಲವರು ಊಹಿಸಿದ್ದರು. ಆದರೆ ಆ ರೀತಿ ಆಗಲಿಲ್ಲ. ತಮ್ಮ ನಡುವೆ ಏನೇ ಕಿರಿಕ್​ ಇದ್ದರೂ ಕೂಡ ಮುದ್ದಿನ ಶ್ವಾನಕ್ಕೆ ಅವರು ಪ್ರೀತಿ ಕಡಿಮೆ ಮಾಡಿಲ್ಲ. ಇಬ್ಬರೂ ಜೊತೆಯಾಗಿ ಈ ಶ್ವಾನವನ್ನು ಸಾಕುತ್ತಿದ್ದಾರೆ. ಒಂದಷ್ಟು ದಿನಗಳ ಕಾಲ ಸಮಂತಾ ಜೊತೆ, ಇನ್ನೊಂದಿಷ್ಟು ದಿನಗಳ ಕಾಲ ನಾಗ ಚೈತನ್ಯ ಜೊತೆ ಈ ನಾಯಿ ಇರುತ್ತದೆ. ಇಬ್ಬರು ರಾಜಿ ಆಗಬಹುದು ಎಂಬ ಮಾತಿಗೆ ಈ ವಿಚಾರ ಕೂಡ ಪುಷ್ಠಿ ನೀಡುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.