AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಮಯೋಸೈಟಿಸ್​ ಕಾಯಿಲೆಗೆ ಸಮಂತಾ ಪಡೆಯುತ್ತಿರುವ ಚಿಕಿತ್ಸೆ ಹೇಗಿದೆ ನೋಡಿ; ಫೋಟೋ ವೈರಲ್​

Cryotherapy: ಸಮಂತಾ ರುತ್​ ಪ್ರಭು ಅವರು ಹಂಚಿಕೊಂಡಿರುವ ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಮಯೋಸೈಟಿಸ್​ ಕಾಯಿಲೆಯಿಂದ ಗುಣವಾಗಲು ಅವರು ಹಲವು ಬಗೆಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಕ್ರಯೋಥೆರಪಿ ಕೂಡ ಒಂದು. ಬೇರೆ ಎಲ್ಲ ಚಿಕಿತ್ಸಾ ವಿಧಾನಗಳಿಗಿಂತಲೂ ಇದು ತುಂಬ ಭಿನ್ನವಾಗಿದೆ.

Samantha: ಮಯೋಸೈಟಿಸ್​ ಕಾಯಿಲೆಗೆ ಸಮಂತಾ ಪಡೆಯುತ್ತಿರುವ ಚಿಕಿತ್ಸೆ ಹೇಗಿದೆ ನೋಡಿ; ಫೋಟೋ ವೈರಲ್​
ಸಮಂತಾ ರುತ್​ ಪ್ರಭು
ಮದನ್​ ಕುಮಾರ್​
|

Updated on: Nov 05, 2023 | 8:59 AM

Share

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರಿಗೆ ಮಯೋಸೈಟಿಸ್​ ಕಾಯಿಲೆ (Myositis) ಬಂದಾಗಿನಿಂದ ಅವರ ಅಭಿಮಾನಿಗಳಿಗೆ ಚಿಂತೆ ಶುರುವಾಯಿತು. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇದ್ದರೂ ಕೂಡ ಎಲ್ಲವನ್ನೂ ಒಪ್ಪಿಕೊಂಡು ನಟಿಸಲು ಸಮಂತಾಗೆ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಅವರು ಆಗಾಗ ಚಿಕಿತ್ಸೆ ಪಡೆಯಬೇಕಾಗಿದೆ. ಅದಕ್ಕಾಗಿ ಅವರು ಸಮಯ ಮೀಸಲಿಡಬೇಕು. ಅದೇ ಕಾರಣಕ್ಕೆ ಅವರು ಸದ್ಯಕ್ಕೆ ನಟನೆಯಿಂದ ಬ್ರೇಕ್​ ತೆಗೆದುಕೊಂಡು, ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ತಾವು ಪಡೆಯುತ್ತಿರುವ ಚಿಕಿತ್ಸೆ ಬಗ್ಗೆ ಸಮಂತಾ ಆಗಾಗ ಅಪ್​ಡೇಟ್​ ನೀಡುತ್ತಾರೆ. ಈಗ ಅವರು ಕ್ರಯೋಥೆರಪಿ (Cryotherapy) ಪಡೆಯುತ್ತಿದ್ದಾರೆ. ಅದು ಹೇಗಿರುತ್ತದೆ ಎಂಬುದನ್ನು ತಿಳಿಸಲು ಒಂದು ವಿಶೇಷವಾದ ಫೋಟೋವನ್ನು ಅವರೀಗ ಹಂಚಿಕೊಂಡಿದ್ದಾರೆ.

ಸಮಂತಾ ಅವರು ಹಂಚಿಕೊಂಡಿರುವ ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಮಯೋಸೈಟಿಸ್​ ಕಾಯಿಲೆಯಿಂದ ಗುಣವಾಗಲು ಅವರು ಹಲವು ಬಗೆಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಕ್ರಯೋಥೆರಪಿ ಕೂಡ ಒಂದು. ಬೇರೆ ಎಲ್ಲ ಚಿಕಿತ್ಸಾ ವಿಧಾನಗಳಿಗಿಂತಲೂ ಇದು ತುಂಬ ಭಿನ್ನವಾಗಿದೆ. ಇದರಿಂದ ಸಮಂತಾ ಅವರು ಆದಷ್ಟು ಬೇಗ ಚೇತರಿಕೆ ಕಾಣುವ ಸಾಧ್ಯತೆ ಇದೆ. ಮೊದಲಿನಂತೆ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

ಇದನ್ನೂ ಓದಿ: Samantha: ಸೀರೆಯಲ್ಲೂ ಸಖತ್​ ಗ್ಲಾಮರಸ್​ ಅವತಾರ ತಾಳಿದ ನಟಿ ಸಮಂತಾ ರುತ್ ಪ್ರಭು; ಫೋಟೋ ವೈರಲ್​​

ಸೂಕ್ತ ವಿಧಾನದ ಮೂಲಕ ಒಂದು ನಿರ್ದಿಷ್ಟ ಸಮಯದವರೆಗೆ ದೇಹವನ್ನು ಅತಿಯಾದ ಶೀತದ ವಾತಾವರಣಕ್ಕೆ ಒಡ್ಡುವ ಪ್ರಕ್ರಿಯೆಯೇ ಕ್ರಯೋಥೆರಪಿ. ಇದರಿಂದ ಹಲವು ಅನುಕೂಲತೆ ಇದೆ. ಇದರಿಂದ ರಕ್ತ ಸಂಚಾರ ಸರಾಗವಾಗುತ್ತದೆ. ದೇಹದ ಸಹಿಷ್ಠು ಶಕ್ತಿ ಹೆಚ್ಚುತ್ತದೆ. ಅಗತ್ಯ ಇರುವ ಹಾರ್ಮೋನ್​ಗಳ ವೃದ್ಧಿಗೂ ಇದು ಸಹಕಾರಿ ಆಗಿದೆ. ಚರ್ಮದಲ್ಲಿ ಇರುವ ಡೆಡ್​ ಸೆಲ್​ಗಳನ್ನು ತೆಗೆದು ಹಾಕಲು ಕೂಡ ಈ ಚಿಕಿತ್ಸಾ ವಿಧಾನವನ್ನು ಬಳಸುತ್ತಾರೆ. ‘ರಿಕವರಿ’ ಎಂಬ ಕ್ಯಾಪ್ಷನ್​ನೊಂದಿಗೆ ಸಮಂತಾ ರುತ್​ ಪ್ರಭು ಅವರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ ಹೆಚ್ಚಾಗಿದೆ ಸಮಂತಾ ಓಡಾಟ; ಹಿಂದಿ ಸಿನಿಮಾ ಮಾಡ್ತಾರಾ?

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ನಲ್ಲಿ ನಟಿಸಿದ ಬಳಿಕ ಸಮಂತಾ ಅವರಿಗೆ ಒಟಿಟಿ ದುನಿಯಾದಲ್ಲಿ ಬೇಡಿಕೆ ಹೆಚ್ಚಾಯಿತು. ‘ಪುಷ್ಪ’ ಸಿನಿಮಾದಲ್ಲಿ ಅವರು ಹೆಜ್ಜೆ ಹಾಕಿದ ‘ಉ ಅಂಟಾವಾ ಮಾವ… ಉಊ ಅಂಟಾವಾ ಮಾವ..’ ಹಾಡು ಸೂಪರ್​ ಹಿಟ್​ ಆದ ಬಳಿಕ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅವರಿಗೆ ಹವಾ ಸೃಷ್ಟಿ ಆಯಿತು. ಆದರೆ ಮಯೋಸೈಟಿಸ್​ ಕಾಯಿಲೆ ಕಾಣಿಸಿಕೊಂಡಿದ್ದರಿಂದ ಸಮಂತಾ ಅವರ ವೃತ್ತಿಜೀವನದ ವೇಗಕ್ಕೆ ಸ್ವಲ್ಪ ಬ್ರೇಕ್​ ಬಿದ್ದಿದೆ. ಈಗ ಅವರು ‘ಸಿಟಾಡೆಲ್​’ ಇಂಗ್ಲಿಷ್ ವೆಬ್​ ಸರಣಿಯ ಭಾರತದ ವರ್ಷನ್​ನಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಸಮಂತಾಗೆ ವರುಣ್​ ಧವನ್​ ಜೋಡಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್