‘ಗುಂಟೂರು ಖಾರಂ’ ಸ್ಟೈಲ್​ನಲ್ಲಿ ಅಪ್ಪನ ಥಿಯೇಟರ್​ಗೆ ಬಂದ ಸಿತಾರಾ; ಟ್ರೋಲ್ ಆದ ಮಹೇಶ್ ಬಾಬು ಮಗಳು

|

Updated on: Feb 02, 2024 | 7:00 AM

ಸಿತಾರಾ ತಂದೆ ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್​ಗೆ ಬಂದಿದ್ದಾರೆ. ಅವರ ಜೊತೆ ನಿರ್ದೇಶಕ ವಂಶಿ ಪೈಡಿಪಲ್ಲಿ ಹಾಗೂ ಮೆಹೆರ್ ರಮೇಶ್ ಮಗಳು ಇದ್ದರು. ‘ಗುಂಟೂರು ಖಾರಂ’ ಸಿನಿಮಾದಲ್ಲಿ ಮಹೇಶ್ ಬಾಬು ಒಂದು ಶರ್ಟ್ ಧರಿಸಿದ್ದರು. ಇದೇ ಮಾದರಿಯ ಶರ್ಟ್​ನಲ್ಲಿ ಆಗಮಿಸಿದ್ದಾರೆ ಸಿತಾರಾ.

‘ಗುಂಟೂರು ಖಾರಂ’ ಸ್ಟೈಲ್​ನಲ್ಲಿ ಅಪ್ಪನ ಥಿಯೇಟರ್​ಗೆ ಬಂದ ಸಿತಾರಾ; ಟ್ರೋಲ್ ಆದ ಮಹೇಶ್ ಬಾಬು ಮಗಳು
ಸಿತಾರಾ-ಮಹೇಶ್ ಬಾಬು
Follow us on

ಮಹೇಶ್ ಬಾಬು (Mahesh Babu) ನಟನೆಯ ‘ಗುಂಟೂರು ಖಾರಂ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮಿಶ್ರಪ್ರತಿಕ್ರಿಯೆ ಪಡೆಯಿತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮಹೇಶ್​ ಬಾಬು ಅಂಥ ಸ್ಟಾರ್ ಹೀರೋ ಸಿನಿಮಾಗೆ ಈ ಗಳಿಕೆ ಏನೂ ಅಲ್ಲ. ರೇಟಿಂಗ್ ವಿಚಾರದಲ್ಲಿ ಈ ಸಿನಿಮಾ ಅಂಥ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿಲ್ಲ. ಈ ಮಧ್ಯೆ ಮಹೇಶ್ ಬಾಬು ಮಗಳು ಸಿತಾರಾ (Sitara) ಅವರು ಈ ಸಿನಿಮಾ ನೋಡಲು ಅಪ್ಪನ ಥಿಯೇಟರ್​ಗೆ ಬಂದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಕೆಲವರು ಸಿತಾರಾನ ಟ್ರೋಲ್ ಮಾಡಿದ್ದಾರೆ.

ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಅವರದ್ದು ಹಿಟ್ ಕಾಂಬಿನೇಷನ್. ಈ ಕಾರಣದಿಂದಲೇ ‘ಗುಂಟೂರು ಖಾರಂ’ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿತ್ತು. ಈ ನಿರೀಕ್ಷೆ ಸುಳ್ಳಾಗಿದೆ. ಸಿನಿಮಾ ಅಂದುಕೊಂಡ ರೀತಿಯಲ್ಲಿ ಕಲೆಕ್ಷನ್ ಮಾಡಿಲ್ಲ. ಇದು ತಂಡದವರಿಗೆ ಹಾಗೂ ಮಹೇಶ್ ಬಾಬು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಆದರೆ, ಮಹೇಶ್ ಬಾಬು ಮಗಳು ಸಿತಾರಾ ಮಾತ್ರ ಮತ್ತೆ ಮತ್ತೆ ಹೋಗಿ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ.

ಥಿಯೇಟರ್​ನಲ್ಲಿ ಸಿತಾರಾ ಕಾಣಿಸಿಕೊಂಡಿದ್ದು ಹೀಗೆ..


ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್​ಗೆ ಸಿತಾರಾ ಬಂದಿದ್ದಾರೆ. ಅವರ ಜೊತೆ ನಿರ್ದೇಶಕ ವಂಶಿ ಪೈಡಿಪಲ್ಲಿ ಹಾಗೂ ಮೆಹೆರ್ ರಮೇಶ್ ಮಗಳು ಇದ್ದಾರೆ. ‘ಗುಂಟೂರು ಖಾರಂ’ ಸಿನಿಮಾದಲ್ಲಿ ಮಹೇಶ್ ಬಾಬು ಒಂದು ಶರ್ಟ್ ಧರಿಸಿದ್ದರು. ಇದೇ ರೀತಿಯ ಶರ್ಟ್​ನಲ್ಲಿ ಆಗಮಿಸಿದ್ದಾರೆ ಸಿತಾರಾ. ಕ್ಯಾಮೆರಾ ಕಂಡ ತಕ್ಷಣ ಅವರು ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ. ಕೆಲವರು ಸಿತಾರಾಳ ಟ್ರೋಲ್ ಮಾಡಿದ್ದಾರೆ. ‘ಇದೊಂದು ಕೆಟ್ಟ ಸಿನಿಮಾ. ಆದರೂ ಅಪ್ಪ ಸಿನಿಮಾ ಎಂದು ಪಾಪ ಮಗಳು ಎಷ್ಟು ಬಾರಿ ನೋಡುತ್ತಾಳೆ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:  ಬ್ರ್ಯಾಂಡ್ ಪ್ರಚಾರದಿಂದ ಎಷ್ಟು ಸಂಭಾವನೆ ಪಡೆಯುತ್ತಾರೆ ಮಹೇಶ್ ಬಾಬು ಮಗಳು ಸಿತಾರಾ

ಸಿತಾರಾ ವಯಸ್ಸು 12 ದಾಟಿಲ್ಲ. ಈಗಲೇ ಅವರು ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ‘ಸರ್ಕಾರು ವಾರಿ ಪಾಟ’ ಪ್ರಮೋಷನಲ್ ಸಾಂಗ್​ನಲ್ಲಿ ಸಿತಾರಾ ಕಾಣಿಸಿಕೊಂಡಿದ್ದರು. ಅವರು ಮುಂದಿನ ದಿನಗಳಲ್ಲಿ ಸಿನಿಮಾದಲ್ಲಿ ನಟಿಸೋ ಆಲೋಚನೆಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ‘ಗುಂಟೂರು ಖಾರಂ’ ಸಿನಿಮಾದಲ್ಲಿ ಮಹೇಶ್ ಬಾಬುಗೆ ಜೊತೆಯಾಗಿ ಕನ್ನಡದ ನಟಿ ಶ್ರೀಲೀಲಾ ನಟಿಸಿದ್ದಾರೆ. ಈ ಸಿನಿಮಾ ಚೆನ್ನಾಗಿ ಮೂಡಿ ಬಂದಿಲ್ಲ ಎಂದು ಅನೇಕರು ಟೀಕೆ ಮಾಡಿದ್ದರು. ಎಸ್​. ಥಮನ್ ನೀಡಿದ ಸಂಗೀತ ಕೂಡ ಮೋಡಿ ಮಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ