ಇನ್​ಸ್ಟಾಗ್ರಾಮ್​ನಲ್ಲಿ ದೊಡ್ಡ ಮಟ್ಟದ ಫಾಲೋವರ್ಸ್ ಹೊಂದಿರೋ ದಕ್ಷಿಣದ ನಟಿಯರಿವರು..

ಲವು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಕೋಟ್ಯಂತರ ಹಿಂಬಾಲಕರನ್ನು ಹೊಂದಿರುತ್ತಾರೆ. ಈ ಸಾಲಿನಲ್ಲಿ ನಟಿ ರಶ್ಮಿಕಾ ಮಂದಣ್ಣ ಕೂಡ ಇದ್ದಾರೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ದೊಡ್ಡ ಹಿಂಬಾಲಕರಿದ್ದಾರೆ. ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 4.15 ಕೋಟಿ ಮಂದಿ ಹಿಂಬಾಲಿಸುತ್ತಿದ್ದಾರೆ. ಅವರು ಇನ್​ಸ್ಟಾಗ್ರಾಮ್​ಗೆ ಕಾಲಿಟ್ಟಿದ್ದು 2014ರಲ್ಲಿ. ಅವರ ಜನಪ್ರಿಯತೆ ಹೆಚ್ಚುತ್ತಲೇ ಇದೆ.

ಇನ್​ಸ್ಟಾಗ್ರಾಮ್​ನಲ್ಲಿ ದೊಡ್ಡ ಮಟ್ಟದ ಫಾಲೋವರ್ಸ್ ಹೊಂದಿರೋ ದಕ್ಷಿಣದ ನಟಿಯರಿವರು..
ಇನ್​ಸ್ಟಾಗ್ರಾಮ್​ನಲ್ಲಿ ದೊಡ್ಡ ಮಟ್ಟದ ಫಾಲೋವರ್ಸ್ ಹೊಂದಿರೋ ದಕ್ಷಿಣದ ನಟಿಯರಿವರು..
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Feb 02, 2024 | 10:21 AM

ಓರ್ವ ಕಲಾವಿದನಿಗೆ ಎಷ್ಟು ಜನಪ್ರಿಯತೆ ಇದೆ ಎಂಬುದನ್ನು ತಿಳಿಯೋಕೆ ಒಂದು ಮಾರ್ಗ ಎಂದರೆ ಅದು ಸೋಶಿಯಲ್ ಮೀಡಿಯಾ. ಹಲವು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಕೋಟ್ಯಂತರ ಹಿಂಬಾಲಕರನ್ನು ಹೊಂದಿರುತ್ತಾರೆ. ಕೆಲವು ನಟ/ನಟಿಯರ ಹಿಂಬಾಲಕರ ಸಂಖ್ಯೆ ಮಿತಿಮೀರಿ ಏರಿಕೆ ಆಗುತ್ತಲೇ ಇರುತ್ತದೆ. ಈ ಸಾಲಿನಲ್ಲಿ ರಶ್ಮಿಕಾ ಮಂದಣ್ಣ, ಸಮಂತಾ ರುತ್ ಪ್ರಭು (Samantha Ruth Prabhu) ಸೇರಿ ದಕ್ಷಿಣದ ಅನೇಕ ಸ್ಟಾರ್​ಗಳಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ದಕ್ಷಿಣ ಭಾರತದ ನಟಿಯರ ಪಟ್ಟಿ ಇಲ್ಲಿದೆ.

ರಶ್ಮಿಕಾ ಮಂದಣ್ಣ

‘ಪುಷ್ಪ 2’ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಭರ್ಜರಿ ಹಿಂಬಾಲಕರಿದ್ದಾರೆ. ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 41.5 ಮಿಲಿಯನ್ ಅಂದರೆ 4.15 ಕೋಟಿ ಮಂದಿ ಹಿಂಬಾಲಿಸುತ್ತಿದ್ದಾರೆ. ಅವರು ಇನ್​ಸ್ಟಾಗ್ರಾಮ್​ಗೆ ಕಾಲಿಟ್ಟಿದ್ದು 2014ರಲ್ಲಿ. ಆಗಿನ್ನೂ ಅವರು ಶಿಕ್ಷಣ ಪಡೆಯುತ್ತಿದ್ದರು. 2016ರಲ್ಲಿ ರಿಲೀಸ್ಆದ ‘ಕಿರಿಕ್ ಪಾರ್ಟಿ’ ಚಿತ್ರದಿಂದ ಬಣ್ಣದ ಬದುಕು ಆರಂಭಿಸಿದರು. ಅಲ್ಲಿಂದ ರಶ್ಮಿಕಾ ಜನಪ್ರಿಯತೆ ಹೆಚ್ಚುತ್ತಾ ಹೋಯಿತು. ಹಲವು ಸಿನಿಮಾಗಳು ಅವರ ಕೈಯಲ್ಲಿವೆ.

ರಕುಲ್ ಪ್ರೀತ್ ಸಿಂಗ್

ಕನ್ನಡದ ‘ಗಿಲ್ಲಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು ರಕುಲ್ ಪ್ರೀತ್ ಸಿಂಗ್. ಅವರು ಇನ್​ಸ್ಟಾಗ್ರಾಮ್​ಗೆ ಕಾಲಿಟ್ಟಿದ್ದು 2013ರಲ್ಲಿ. ಅವರಿಗೆ ಸದ್ಯ 23.5 ಮಿಲಿಯನ್ ಹಿಂಬಾಲಕರಿದ್ದಾರೆ. ಅಂದರೆ 2.35 ಕೋಟಿ ಹಿಂಬಾಲಕರು ಅವರಿಗಿದ್ದಾರೆ. ಅವರು ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ. ಶೀಘ್ರವೇ ಅವರು ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ.

ಪೂಜಾ ಹೆಗ್ಡೆ

ಇನ್​ಸ್ಟಾಗ್ರಾಮ್​ನಲ್ಲಿ ಪೂಜಾ ಹೆಗ್ಡೆ ಬಿಕಿನಿ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳ ಮೇಲಾಗಿದೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 2.62 ಕೋಟಿ ಹಿಂಬಾಲಕರು ಇದ್ದಾರೆ. ಹಾಟ್ ಫೋಟೋಗಳ ಮೂಲಕ ಅವರು ಗಮನ ಸೆಳೆಯುತ್ತಾರೆ.

ಶ್ರುತಿ ಹಾಸನ್

‘ಸಲಾರ್’ ಸಿನಿಮಾ ಮೂಲಕ ನಟಿ ಶ್ರುತಿ ಹಾಸನ್ ಗೆಲುವು ಕಂಡಿದ್ದಾರೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 2.31 ಕೋಟಿ ಹಿಂಬಾಲಕರು ಇದ್ದಾರೆ. ಅವರು ಇನ್​ಸ್ಟಾಗ್ರಾಮ್​ಗೆ 2013ರಲ್ಲಿ ಎಂಟ್ರಿ ಪಡೆದಿದ್ದರು.

ತಾಪ್ಸಿ ಪನ್ನು

‘ಡಂಕಿ’ ಸಿನಿಮಾ ಮೂಲಕ ಗೆದ್ದು ಬೀಗಿದ್ದಾರೆ ನಟಿ ತಾಪ್ಸಿ. ಅವರಿಗೆ 2 ಕೋಟಿ ಹಿಂಬಾಲಕರು ಇದ್ದಾರೆ. ಅವರು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ.

ತಮನ್ನಾ

ನಟಿ ತಮನ್ನಾ ಅವರು 2014ರಲ್ಲಿ ಇನ್​ಸ್ಟಾಗ್ರಾಮ್​ಗೆ ಕಾಲಿಟ್ಟರು. ಅವರು ಬಣ್ಣದ ಬದುಕು ಆರಂಭಿಸಿದ್ದು 2006ರಲ್ಲಿ. ಅವರಿಗೆ 2.48 ಕೋಟಿ ಹಿಂಬಾಲಕರು ಇದ್ದಾರೆ. ಸದ್ಯ ಅವರು ಡೇಟಿಂಗ್ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಹಿಂದಿ ನಟ ವಿಜಯ್ ವರ್ಮಾ ಜೊತೆ ತಮನ್ನಾ ಡೇಟಿಂಗ್ ಮಾಡುತ್ತಿದ್ದಾರೆ. ಇವರ ಮದುವೆ ಶೀಘ್ರವೇ ನಡೆಯೋ ಸಾಧ್ಯತೆ ಇದೆ.

ಕಾಜಲ್ ಅಗರ್​ವಾಲ್

ನಟಿ ಕಾಜಲ್ ಅಗರ್​ವಾಲ್ ಅವರು ಸದ್ಯ ಸಿನಿಮಾ ಜೊತೆ ಕುಟುಂಬದ ಆರೈಕೆಯಲ್ಲೂ ಬ್ಯುಸಿ ಇದ್ದಾರೆ. 2007ರಲ್ಲಿ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. 2012ರಲ್ಲಿ ಇನ್​ಸ್ಟಾ ಖಾತೆ ತೆಗೆದರು. ಅವರನ್ನು 2.7 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ.

ಇದನ್ನೂ ಓದಿ: ಶೀಘ್ರವೇ ರಿಲೀಸ್ ಆಗಲಿದೆ ‘ಸಿಟಾಡೆಲ್’; ಸೂಚನೆ ಕೊಟ್ಟ ನಟಿ ಸಮಂತಾ

ಸಮಂತಾ

ನಟಿ ಸಮಂತಾ ಅವರು ಬಹುಮುಖ ಪ್ರತಿಭೆ ಹೊಂದಿರೋ ನಟಿ. ಅವರು 2016ರಲ್ಲಿ ಇನ್​ಸ್ಟಾಗ್ರಾಮ್​ಗೆ ಕಾಲಿಟ್ಟರು. ಅವರು ವೆಬ್ ಸೀರಿಸ್​ಗಳ ಮೂಲಕವೂ ಫೇಮಸ್ ಆಗಿದ್ದಾರೆ. ಅವರನ್ನು 3 ಕೋಟಿ ಜನರು ಇನ್​ಸ್ಟಾಗ್ರಾಮ್​ನಲ್ಲಿ ಫಾಲೋ ಮಾಡುತ್ತಿದ್ದಾರೆ.

ಕೀರ್ತಿ ಸುರೇಶ್

ಕೀರ್ತಿ ಸುರೇಶ್ ಅವರು ‘ಮಹಾನಟಿ’ ಅಂತ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರನ್ನು 1.72 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:53 am, Fri, 2 February 24

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್