ಮಹೇಶ್ ಬಾಬುಗೆ ತೆಲುಗು ಬರೆಯೋಕೆ, ಓದೋಕೆ ಬರಲ್ಲ ಅನ್ನೋದು ಗೊತ್ತಾ?
ಮಹೇಶ್ ಬಾಬು ಅವರೇ ಹೇಳಿಕೊಂಡಿರುವ ಪ್ರಕಾರ ಅವರು ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ಅಲ್ಲಿಯೇ ಅವರು ವಿದ್ಯಾಭ್ಯಾಸ ಮಾಡಿದರು. ಹೀಗಾಗಿ, ತೆಲುಗು ಸ್ಕ್ರಿಪ್ಟ್ ಓದಲು ಅವರಿಗೆ ಸಾಧ್ಯವಾಗುವುದಿಲ್ಲ. ಈ ಭಾಷೆಯನ್ನು ಚೆನ್ನೈನಲ್ಲಿ ಕಲಿಯಲು ಅವರಿಗೆ ಅವಕಾಶ ಸಿಗಲೇ ಇಲ್ಲ.
ಮಹೇಶ್ ಬಾಬು ಟಾಲಿವುಡ್ನ ಸ್ಟಾರ್ ಹೀರೋ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಆರಾಧಿಸುವ ಅನೇಕರು ಇದ್ದಾರೆ. ಅವರು ತೆಲುಗಿನಲ್ಲಿ ಡೈಲಾಗ್ ಹೇಳೋಕೆ ಆರಂಭಿಸಿದರೆ ಫ್ಯಾನ್ಸ್ ಸಿಳ್ಳೆ ಹಾಕುತ್ತಾರೆ. ಥಿಯೇಟರ್ ರೂಫ್ ಕಿತ್ತು ಹೋಗುವ ತರಹ ಕೂಗುತ್ತಾರೆ. ಅಚ್ಚರಿಯ ವಿಚಾರ ಎಂದರೆ ಟಾಲಿವುಡ್ನಲ್ಲಿ ಮಹೇಶ್ ಬಾಬು ಸ್ಟಾರ್ ಹೀರೋ ಆದರೂ ಅವರಿಗೆ ತೆಲುಗು ಓದಲು ಹಾಗೂ ಬರೆಯಲು ಬರೋದಿಲ್ಲ ಎಂದು ಹೇಳಲಾಗುತ್ತಿದೆ. 2015ರ ಸಂದರ್ಶನದಲ್ಲಿ ಅವರು ಇದನ್ನು ಹೇಳಿಕೊಂಡಿದ್ದರು.
ಮಹೇಶ್ ಬಾಬು ಅವರೇ ಹೇಳಿಕೊಂಡಿರುವ ಪ್ರಕಾರ ಅವರು ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ಅಲ್ಲಿಯೇ ಅವರು ವಿದ್ಯಾಭ್ಯಾಸ ಮಾಡಿದರು. ಹೀಗಾಗಿ, ತೆಲುಗು ಸ್ಕ್ರಿಪ್ಟ್ ಓದಲು ಅವರಿಗೆ ಸಾಧ್ಯವಾಗುವುದಿಲ್ಲ. ಈ ಭಾಷೆಯನ್ನು ಚೆನ್ನೈನಲ್ಲಿ ಕಲಿಯಲು ಅವರಿಗೆ ಅವಕಾಶ ಸಿಗಲೇ ಇಲ್ಲ. ಅವರು ತೆಲುಗು ಭಾಷೆಯನ್ನು ಆರಾಮಾಗಿ ಮಾತನಾಡುತ್ತಾರೆ. ಆದರೆ, ಓದಲು ಬರೋದಿಲ್ಲ.
ಹಾಗಾದರೆ ಮಹೇಶ್ ಬಾಬು ಡೈಲಾಗ್ ಹೇಳೋದು ಹೇಗೆ? ಅದಕ್ಕೂ ಉತ್ತರ ಇದೆ. ಮಹೇಶ್ ಬಾಬು ಅವರಿಗೆ ಮೆಮೋರಿ ಚೆನ್ನಾಗಿ ಇದೆ. ನಿರ್ದೇಶಕರು ಡೈಲಾಗ್ ಏನು ಎಂಬುದನ್ನು ಹೇಳುತ್ತಾರೆ. ಅದನ್ನು ಮನನ ಮಾಡಿಕೊಂಡು ಮಹೇಶ್ ಬಾಬು ಡೈಲಾಗ್ ಹೇಳುತ್ತಾರೆ. ಇದು ಅವರ ಟ್ಯಾಲೆಂಟ್. ಈಗ ಅವರು ತೆಲುಗು ಓದಲು ಹಾಗೂ ಬರೆಯಲು ಕಲಿತಿದ್ದಾರೋ ಎಂಬುದು ತಿಳಿದಿಲ್ಲ.
ಮಹೇಶ್ ಬಾಬು ‘ಶ್ರೀಮಂತುಡು’, ‘ಪೋಕಿತಿ’, ‘ದೂಕುಡು’ ರೀತಿಯ ಸಿನಿಮಾಗಳನ್ನು ನೀಡಿದ್ದಾರೆ. ಆದರೆ, ಅವರಿಗೆ ತೆಲುಗು ಓದಲು ಹಾಗೂ ಬರೆಯಲು ಬರೋದಿಲ್ಲ ಎಂಬ ವಿಚಾರ ಅನೇಕರಿಗೆ ಅಚ್ಚರಿ ತಂದಿದೆ. ಆದರೆ, ಅವರ ಅಭಿಮಾನಿಗಳಿಗೆ ಈ ಬಗ್ಗೆ ಬೇಸರ ಇಲ್ಲ.
ಮಹೇಶ್ ಬಾಬು ಅವರಿಗೆ ತೆಲುಗು ಸಿನಿಮಾಗಳ ಮೇಲೆ ವಿಶೇಷ ಪ್ರೀತಿ ಇದೆ. ತೆಲುಗಿನ ಸಿನಿಮಾಗಳು ರಿಲೀಸ್ ಆದಾಗ ಅದನ್ನು ವೀಕ್ಷಣೆ ಮಾಡಿ ಚಿತ್ರತಂಡದ ಬೆನ್ನು ತಟ್ಟುವ ಕೆಲಸವನ್ನು ಮಹೇಶ್ ಬಾಬು ಮಾಡುತ್ತಾರೆ. ಈ ಕಾರಣಕ್ಕೆ ಅವರು ಇಷ್ಟ ಆಗುತ್ತಾರೆ.
ಇದನ್ನೂ ಓದಿ: ಬಿಗ್ ಬಾಸ್ ವೇದಿಕೆ ಮೇಲೆ ಮಹೇಶ್ ಬಾಬು ಸರಳತೆಯನ್ನು ಕೊಂಡಾಡಿದ ಸಲ್ಮಾನ್ ಖಾನ್
ಮಹೇಶ್ ಬಾಬು ಸದ್ಯ ‘SSMB29’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಎಸ್ಎಸ್ ರಾಜಮೌಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷದ ಅಂತ್ಯಕ್ಕೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆಫ್ರಿಕಾದಲ್ಲಿ ಸಿನಿಮಾದ ಶೂಟ್ ನಡೆಯೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.