ಬಿಗ್ ಬಾಸ್ ವೇದಿಕೆ ಮೇಲೆ ಮಹೇಶ್ ಬಾಬು ಸರಳತೆಯನ್ನು ಕೊಂಡಾಡಿದ ಸಲ್ಮಾನ್ ಖಾನ್

ಮಹೇಶ್ ಬಾಬು ಪತ್ನಿ ನಮ್ರತಾ ಸಹೋದರಿ ಅಂದರೆ ಮಹೇಶ್ ಬಾಬು ಅತ್ತಿಗೆ ಶಿಲ್ಪಾ ದೊಡ್ಮನೆಯಲ್ಲಿ ಇದ್ದಾರೆ. ಶಿಲ್ಪಾ ಮನೆಯ ಸದಸ್ಯರೊಬ್ಬರಿಂದ ಅಗೌರವದ ವರ್ತನೆಯನ್ನು ಎದುರಿಸಿದರು. ಇದಾದ ಬಳಿಕ ಸಲ್ಮಾನ್ ಖಾನ್ ಅವರು ಈ ವಿಚಾರವಾಗಿ ಮಾತನಾಡಿದ್ದಾರೆ.

ಬಿಗ್ ಬಾಸ್ ವೇದಿಕೆ ಮೇಲೆ ಮಹೇಶ್ ಬಾಬು ಸರಳತೆಯನ್ನು ಕೊಂಡಾಡಿದ ಸಲ್ಮಾನ್ ಖಾನ್
ಸಲ್ಮಾನ್-ಮಹೇಶ್ ಬಾಬು
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 26, 2024 | 10:01 AM

ಮಹೇಶ್ ಬಾಬು ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಅನೇಕ ಸೆಲೆಬ್ರಿಟಿಗಳು ಮಹೇಶ್ ಬಾಬು ಅವರ ಅಭಿಮಾನಿ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಅವರು ಸಖತ್ ಸಿಂಪಲ್ ಆಗಿ ಇರುತ್ತಾರೆ. ಈಗ ಮಹೇಶ್ ಬಾಬು ಅವರ ಬಗ್ಗೆ ಸಲ್ಮಾನ್ ಖಾನ್ ಅವರು ಸ್ಟೇಟ್​ಮೆಂಟ್ ಒಂದನ್ನು ನೀಡಿದ್ದಾರೆ. ಈ ಸ್ಟೇಟ್​ಮೆಂಟ್ ಸಖತ್ ವೈರಲ್ ಆಗಿದೆ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಅನೇಕರು ಸಲ್ಮಾನ್ ಖಾನ್ ಅವರನ್ನು ಹೊಗಳಿದ್ದಾರೆ.

ಮಹೇಶ್ ಬಾಬು ಪತ್ನಿ ನಮ್ರತಾ ಸಹೋದರಿ ಅಂದರೆ ಮಹೇಶ್ ಬಾಬು ಅತ್ತಿಗೆ ಶಿಲ್ಪಾ ದೊಡ್ಮನೆಯಲ್ಲಿ ಇದ್ದಾರೆ. ಶಿಲ್ಪಾ ಮನೆಯ ಸದಸ್ಯರೊಬ್ಬರಿಂದ ಅಗೌರವದ ವರ್ತನೆಯನ್ನು ಎದುರಿಸಿದರು. ಇದಾದ ಬಳಿಕ ಸಲ್ಮಾನ್ ಖಾನ್ ಅವರು ಈ ವಿಚಾರವಾಗಿ ಮಾತನಾಡಿದ್ದಾರೆ. ಈ ವೇಳೆ ಅವರು ಮಹೇಶ್ ಬಾಬು ಅವರ ಉದಾಹರಣೆಯನ್ನು ನೀಡಿದ್ದಾರೆ.

‘ಶಿಲ್ಪಾ ಅವರ ಭಾವ ತೆರೆಮೇಲೆ ಬೇರೆಯದೇ ರೀತಿ ಕಾಣಿಸಿಕೊಳ್ಳುತ್ತಾರೆ. ಅವರಿಗೆ ಯಾವ ರೀತಿಯ ಪಾತ್ರ ಸಿಕ್ಕಿತೋ ಅದನ್ನು ಮಾಡುತ್ತಾರೆ. ಅವರು ತೆರೆಮೇಲೆ ಆ್ಯಟಿಟ್ಯೂಡ್ ತೋರಿಸಬಹುದು. ಆದರೆ, ನಿಜ ಜೀವನದಲ್ಲಿ ಅವರು ಸರಳ ವ್ಯಕ್ತಿ. ಫ್ಯಾಮಿಲಿ ಮ್ಯಾನ್’ ಎಂದರು ಸಲ್ಮಾನ್ ಖಾನ್. ಇದಕ್ಕೆ ಶಿಲ್ಪಾ ಖುಷಿಯಾದರು.

ಶಿಲ್ಪಾ ಅವರು ನಮ್ರತಾ ಶಿರೋಡ್ಕರ್ ಜೊತೆ ಒಳ್ಳೆಯ ಬಾಂಡಿಂಗ್ ಹೊಂದಿದ್ದಾರೆ. ಇವರ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಮಾತು ಎದುರಾಗಿತ್ತು. ಆದರೆ, ಇದನ್ನು ಶಿಲ್ಪಾ ಅವರು ಅಲ್ಲಗಳೆದಿದ್ದಾರೆ. ಇವರ ಮಧ್ಯೆ ಒಳ್ಳೆಯ ಬಾಂಡಿಂಗ್ ಇದ್ದು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅದೇ ರೀತಿ ಮಹೇಶ್ ಬಾಬು ಜೊತೆಯೂ ಶಿಲ್ಪಾ ಅವರು ಒಳ್ಳೆಯ ನಂಟು ಹೊಂದಿದ್ದಾರೆ.  ಶಿಲ್ಪಾ ಅವರು ದೊಡ್ಮನೆಯಲ್ಲಿ ಉತ್ತಮ ಆಟ ಪ್ರದರ್ಶನ ನೀಡುತ್ತಿದ್ದಾರೆ. ಅವರಿಗೆ ಮಹೇಶ್ ಬಾಬು ಅಭಿಮಾನಿಗಳಿಂದಲೂ ಮತಗಳು ಸಿಗುತ್ತಿವೆ. ಇದು ಅವರ ಉಳಿದುಕೊಳ್ಳುವಿಕೆಗೆ ಸಾಕಷ್ಟು ಸಹಕಾರಿ ಆಗಿದೆ.

ಇದನ್ನೂ ಓದಿ: ಪವನ್ ಕಲ್ಯಾಣ್, ಮಹೇಶ್ ಬಾಬು, ಪ್ರಭಾಸ್ ಬಗ್ಗೆ ಅಲ್ಲು ಅರ್ಜುನ್ ಹೇಳಿದ್ದೇನು?

ಸಿನಿಮಾ ವಿಚಾರಕ್ಕೆ ಬರೋದಾದರೆ ಮಹೇಶ್ ಬಾಬು ‘SSMB29’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ರಾಜಮೌಳಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮಹೇಶ್ ಬಾಬು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಗುಂಟೂರು ಖಾರಂ’ ಚಿತ್ರದಲ್ಲಿ. ಈ ಸಿನಿಮಾ ವೀಕ್ಷಕರಿಂದ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಭೂತದ ಬಾಯಲ್ಲಿ ಭಗವದ್ಗೀತೆ ಕೇಳಲಾಗದು: ಪ್ರಲ್ಹಾದ್ ಜೋಶಿ
ಭೂತದ ಬಾಯಲ್ಲಿ ಭಗವದ್ಗೀತೆ ಕೇಳಲಾಗದು: ಪ್ರಲ್ಹಾದ್ ಜೋಶಿ
ಬಣ ಬಡಿದಾಟ ಕಾಂಗ್ರೆಸ್ ಪಕ್ಷಕ್ಕೆ ಹೊಸದೇನೂ ಅಲ್ಲ: ಅನ್ನದಾನಿ, ಶಾಸಕ
ಬಣ ಬಡಿದಾಟ ಕಾಂಗ್ರೆಸ್ ಪಕ್ಷಕ್ಕೆ ಹೊಸದೇನೂ ಅಲ್ಲ: ಅನ್ನದಾನಿ, ಶಾಸಕ
ನಿತ್ಯ ಗಂಡ ಹೆಂಡತಿ ನಡುವಿನ ಕಲಹಕ್ಕೆ ಉಪಾಯವೇನು? ವಿಡಿಯೋ ನೋಡಿ
ನಿತ್ಯ ಗಂಡ ಹೆಂಡತಿ ನಡುವಿನ ಕಲಹಕ್ಕೆ ಉಪಾಯವೇನು? ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಇಂದು ಧನಲಾಭ ನಿಶ್ಚಿತ!
Daily Horoscope: ಈ ರಾಶಿಯವರಿಗೆ ಇಂದು ಧನಲಾಭ ನಿಶ್ಚಿತ!
ತಮ್ಮ- ಶಿವಕುಮಾರ್ ನಡುವಿನ ಒಳಒಪ್ಪಂದದ ಬಗ್ಗೆ ಸಿಎಂ ತಿಳಿಸಬೇಕು: ವಿಜಯೇಂದ್ರ
ತಮ್ಮ- ಶಿವಕುಮಾರ್ ನಡುವಿನ ಒಳಒಪ್ಪಂದದ ಬಗ್ಗೆ ಸಿಎಂ ತಿಳಿಸಬೇಕು: ವಿಜಯೇಂದ್ರ
ಚಿರತೆಯ ಕುತ್ತಿಗೆ ಹಿಡಿದು ಪೋಸ್ ಕೊಟ್ಟ ಗ್ರಾಮಸ್ಥರು; ವಿಡಿಯೋ ವೈರಲ್
ಚಿರತೆಯ ಕುತ್ತಿಗೆ ಹಿಡಿದು ಪೋಸ್ ಕೊಟ್ಟ ಗ್ರಾಮಸ್ಥರು; ವಿಡಿಯೋ ವೈರಲ್
ಉಡುಪಿ ಬಳಿ ಕಾರು ಪಲ್ಟಿ; ರಸ್ತೆ ಬದಿ ನಿಂತಿದ್ದ ವೃದ್ಧರಿಗೆ ಗಾಯ
ಉಡುಪಿ ಬಳಿ ಕಾರು ಪಲ್ಟಿ; ರಸ್ತೆ ಬದಿ ನಿಂತಿದ್ದ ವೃದ್ಧರಿಗೆ ಗಾಯ
ಉಜ್ಜಯಿನಿ ದೇವಸ್ಥಾನದಲ್ಲಿ ದೇವರ ಮುಂದಿಟ್ಟಿದ್ದ ಹಾಲು ಕುಡಿದ ನಾಯಿ
ಉಜ್ಜಯಿನಿ ದೇವಸ್ಥಾನದಲ್ಲಿ ದೇವರ ಮುಂದಿಟ್ಟಿದ್ದ ಹಾಲು ಕುಡಿದ ನಾಯಿ
ಅವರು ಮಾಡೋದು ಹೋರಾಟ ಅದರೆ ನಮ್ಮದು ಶಕ್ತಿ ಪ್ರದರ್ಶನವಾ? ಕುಮಾರ ಬಂಗಾರಪ್ಪ
ಅವರು ಮಾಡೋದು ಹೋರಾಟ ಅದರೆ ನಮ್ಮದು ಶಕ್ತಿ ಪ್ರದರ್ಶನವಾ? ಕುಮಾರ ಬಂಗಾರಪ್ಪ
ವಕ್ಫ್ ವಿರುದ್ಧ ಹೋರಾಟ ದೇಶಕ್ಕೆ ಮಾದರಿ ಅಂತ ಜೆಪಿಸಿ ಹೇಳಿದೆ: ಜಾರಕಿಹೊಳಿ
ವಕ್ಫ್ ವಿರುದ್ಧ ಹೋರಾಟ ದೇಶಕ್ಕೆ ಮಾದರಿ ಅಂತ ಜೆಪಿಸಿ ಹೇಳಿದೆ: ಜಾರಕಿಹೊಳಿ