ಪವನ್ ಕಲ್ಯಾಣ್, ಮಹೇಶ್ ಬಾಬು, ಪ್ರಭಾಸ್ ಬಗ್ಗೆ ಅಲ್ಲು ಅರ್ಜುನ್ ಹೇಳಿದ್ದೇನು?

Allu Arjun: ಅಲ್ಲು ಅರ್ಜುನ್ ಮತ್ತು ಪವನ್ ಕಲ್ಯಾಣ್ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ. ಆದರೆ ‘ಪುಷ್ಪ 2’ ಸಿನಿಮಾ ಬಿಡುಗಡೆ ಹತ್ತಿರ ಬಂದಿರುವ ಕಾರಣ ಇದೀಗ ತಮ್ಮ ಜಗಳಕ್ಕೆ ತೇಪೆ ಹಾಕಲು ಮುಂದಾಗಿದಂತಿದೆ ಅಲ್ಲು ಅರ್ಜುನ್.

ಪವನ್ ಕಲ್ಯಾಣ್, ಮಹೇಶ್ ಬಾಬು, ಪ್ರಭಾಸ್ ಬಗ್ಗೆ ಅಲ್ಲು ಅರ್ಜುನ್ ಹೇಳಿದ್ದೇನು?
Follow us
ಮಂಜುನಾಥ ಸಿ.
|

Updated on: Nov 15, 2024 | 4:00 PM

ಪವನ್ ಕಲ್ಯಾಣ್ ಹಾಗೂ ಅಲ್ಲು ಅರ್ಜುನ್ ನಡುವೆ ಕೋಲ್ಡ್ ವಾರ್ ಜಾರಿಯಲ್ಲಿದೆ. ಪವನ್ ಕಲ್ಯಾಣ್ ಚುನಾವಣೆಗೆ ನಿಂತಿದ್ದಾಗ, ಎದುರಾಳಿ ಪಕ್ಷದ ಅಭ್ಯರ್ಥಿಯ ಪರವಾಗಿ ಅಲ್ಲು ಅರ್ಜುನ್ ಪ್ರಚಾರ ಮಾಡಿದ್ದರು. ಇದು ಇಬ್ಬರ ನಡುವೆ ಮುನಿಸಿಗೆ ಕಾರಣವಾಗಿತ್ತು. ಅದಾದ ಬಳಿಕವೂ ಸಹ ಪವನ್ ಕಲ್ಯಾಣ್, ‘ಪುಷ್ಪ’ ಸಿನಿಮಾ ಬಗ್ಗೆ ಋಣಾತ್ಮಕವಾಗಿ ಮಾತನಾಡಿದರು. ಅದಾದ ಬಳಿಕ ಅಲ್ಲು ಅರ್ಜುನ್ ಸಹ ಅದಕ್ಕೆ ಮತ್ತೊಂದು ಕಾರ್ಯಕ್ರಮದಲ್ಲಿ ಕೌಂಟರ್ ಕೊಟ್ಟಿದ್ದರು. ಆದರೆ ಇದೀಗ ‘ಪುಷ್ಪ 2’ ಸಿನಿಮಾ ಬಿಡುಗಡೆ ಹತ್ತಿರ ಬರುತ್ತಿದ್ದಂತೆ ಅಲ್ಲು ಅರ್ಜುನ್, ಮುನಿಸಿಗೆ ತೇಪೆ ಹಾಕುವ ಪ್ರಯತ್ನ ಮಾಡಿದ್ದಾರೆ. ಪವನ್ ಕಲ್ಯಾಣ್ ಬಗ್ಗೆ ಸಿಹಿಯಾದ ಮಾತುಗಳನ್ನಾಡಿದ್ದಾರೆ.

ಅಲ್ಲು ಅರ್ಜುನ್ ಇತ್ತೀಚೆಗೆ ತಮ್ಮದೇ ಆದ ಆಹಾ ಒಟಿಟಿಯಲ್ಲಿ ಬಾಲಕೃಷ್ಣ ನಡೆಸಿಕೊಡುವ ಟಾಕ್ ಶೋಗೆ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬಾಲಕೃಷ್ಣ, ಕೆಲವು ತೆಲುಗು ಸಿನಿಮಾ ನಾಯಕರ ಚಿತ್ರಗಳನ್ನು ತೋರಿಸಿ ಇವರ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಬೇಕು ಎಂದರು. ಪವನ್ ಕಲ್ಯಾಣ್ ಸೇರಿದಂತೆ ಇನ್ನೂ ಕೆಲವು ನಟರ ಚಿತ್ರಗಳನ್ನು ಅಲ್ಲು ಅರ್ಜುನ್​ಗೆ ತೋರಿಸಲಾಯ್ತು. ಈ ವೇಳೆ ಪವನ್ ಅನ್ನು ಕೊಂಡಾಡಿದರು ಅಲ್ಲು ಅರ್ಜುನ್.

ಇದನ್ನೂ ಓದಿ:ಸುದೀಪ್ ತಾಯಿ ನಿಧನಕ್ಕೆ ಕನ್ನಡದಲ್ಲೇ ಸಂತಾಪ ಸೂಚಿಸಿದ ಪವನ್ ಕಲ್ಯಾಣ್

ಪವನ್ ಕಲ್ಯಾಣ್ ಚಿತ್ರ ನೋಡುತ್ತಲೇ, ತುಸು ಗಂಭೀರವಾದ ಅಲ್ಲು ಅರ್ಜುನ್, ‘ನಾನು ಹಲವು ರಾಜಕೀಯ ನಾಯಕರನ್ನು, ಸಿನಿಮಾ ಇನ್ನಿತರೆ ಕ್ಷೇತ್ರಗಳ ನಾಯಕರನ್ನು ಫಾಲೋ ಮಾಡುತ್ತೇನೆ ಹಲವು ಧೈರ್ಯವಂತ ನಾಯಕರು ನನಗೆ ಗೊತ್ತಿದ್ದಾರೆ. ಆದರೆ ನಾನು ಹತ್ತಿರದಿಂದ ನೋಡಿದ ಅತ್ಯಂತ ಧೈರ್ಯವಂತ ನಾಯಕ ಯಾರಾದರೂ ಇದ್ದರೆ ಅದು ಪವನ್ ಕಲ್ಯಾಣ್. ಅವರಿಗೆ ಭಯವೆಂದರೆ ಗೊತ್ತಿಲ್ಲ. ದಾರಿ ಯಾವುದೇ ಆದರೂ ಸಹ ಧೈರ್ಯವಾಗಿ ನಡೆದುಕೊಂಡು ಹೋಗಿಬಿಡುತ್ತಾರೆ’ ಎಂದರು.

ಆ ಬಳಿಕ ಮಹೇಶ್ ಬಾಬು ಚಿತ್ರ ತೋರಿಸಿದಾಗ, ‘ಮಹೇಶ್ ಬಾಬು ಅಂದದ ಬಗ್ಗೆ ಹಲವರು ಮಾತನಾಡುತ್ತಾರೆ. ಹೌದು ಅದು ನಿಜ, ಆದರೆ ಅದು ದೈವದತ್ತವಾಗಿ ಬಂದಿದೆ. ನನಗೆ ಅವರ ಕಮ್​ಬ್ಯಾಕ್​ಗಳು ಬಹಳ ಇಷ್ಟ. ಅವರು ಯಾವಾಗಲಾದರೂ ಫೇಲ್ಯೂರ್ ಆದರೆ ಆ ನಂತರ ಅವರು ಕಮ್ ಬ್ಯಾಕ್ ಮಾಡುವ ರೀತಿ ಅತ್ಯದ್ಭುತ. ಅದು ನನಗೆ ಬಹಳ ಇಷ್ಟ’ ಎಂದಿದ್ದಾರೆ ಅಲ್ಲು ಅರ್ಜುನ್.

ಬಳಿಕ ಪ್ರಭಾಸ್ ಫೋಟೊ ತೋರಿಸಿದಾಗ, ‘ಪ್ರಭಾಸ್ ನನಗೆ ವರ್ಷಗಳಿಂದಲೂ ಗೊತ್ತು, ನಾವಿಬ್ಬರೂ ಬಹಳ ಆತ್ಮೀಯ ಗೆಳೆಯರು, ಪ್ರಭಾಸ್ ಬಗ್ಗೆ ಒಂದೇ ಮಾತು ಹೇಳುತ್ತೀನಿ, ಆತ ಆರು ಅಡಿ ಬಂಗಾರ’ ಎಂದರು. ‘ನಾನು ಪ್ರತಿ ಡಿಸೆಂಬರ್​ಗೆ ಮನೆಯಲ್ಲಿ ಕ್ರಿಸ್​ಮಸ್ ಟ್ರೀಡೆಕೋರೇಟ್ ಮಾಡುತ್ತೀನಿ, ಈ ವಿಷಯ ಅವನಿಗೆ ತಿಳಿದು, ಯೂರೋಪ್​ನಿಂದ ಒಂದು ವಿಶೇಷ ಕಿಟ್ ಒಂದನ್ನು ತಂದು ಕೊಟ್ಟ. ನನ್ನಂತೆ ಆತನಿಗೂ ಮರ-ಗಿಡಗಳೆಂದರೆ ಇಷ್ಟ, ನಾನು ಕೊಟ್ಟ ಗಿಡವನ್ನು ಅವನ ಫಾರ್ಮ್​ಹೌಸ್​ನಲ್ಲಿ ಹಾಕಿದ್ದಾನೆ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ