Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್ ತಾಯಿ ನಿಧನಕ್ಕೆ ಕನ್ನಡದಲ್ಲೇ ಸಂತಾಪ ಸೂಚಿಸಿದ ಪವನ್ ಕಲ್ಯಾಣ್

ನಟ ಕಿಚ್ಚ ಸುದೀಪ್ ಅವರ ಕುಟುಂಬದಲ್ಲಿ ಶೋಕ ಆವರಿಸಿದೆ. ಸುದೀಪ್ ತಾಯಿ ಸರೋಜಾ ಸಂಜೀವ್ ಅವರು ನಿಧನರಾಗಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಟಾಲಿವುಡ್​ ನಟ, ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ಸಂತಾಪ ಸೂಚಿಸಿದ್ದಾರೆ. ಕನ್ನಡದಲ್ಲಿ ಅವರು ಪೋಸ್ಟ್ ಮಾಡಿರುವುದು ವಿಶೇಷ.

ಸುದೀಪ್ ತಾಯಿ ನಿಧನಕ್ಕೆ ಕನ್ನಡದಲ್ಲೇ ಸಂತಾಪ ಸೂಚಿಸಿದ ಪವನ್ ಕಲ್ಯಾಣ್
ಕಿಚ್ಚ ಸುದೀಪ್, ಸರೋಜಾ ಸಂಜೀವ್, ಪವನ್ ಕಲ್ಯಾಣ್
Follow us
ಮದನ್​ ಕುಮಾರ್​
|

Updated on: Oct 20, 2024 | 8:47 PM

ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ಇಂದು (ಅಕ್ಟೋಬರ್​ 20) ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಅದಕ್ಕೂ ಮುನ್ನ ಜೆ.ಪಿ. ನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು, ಕಿರುತೆರೆ ಕಲಾವಿದರು, ಬಿಗ್ ಬಾಸ್​ ಮಾಜಿ ಸ್ಪರ್ಧಿಗಳು ಬಂದು ಸರೋಜಾ ಸಂಜೀವ್ ಅವರ ಅಂತಿಮ ದರ್ಶನ ಪಡೆದರು. ಅನೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ಸುದೀಪ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ನಟ ಪವನ್ ಕಲ್ಯಾಣ್ ಅವರು ಕನ್ನಡದಲ್ಲಿ ಸಂತಾಪದ ನುಡಿಗಳನ್ನು ಹಂಚಿಕೊಂಡಿದ್ದಾರೆ.

‘ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಕಚೇರಿ’ ಎಕ್ಸ್​ (ಟ್ವಿಟರ್) ಖಾತೆ ಮೂಲಕ ಪವನ್ ಕಲ್ಯಾಣ್ ಅವರು ಪೋಸ್ ಮಾಡಿದ್ದಾರೆ. ‘ಶ್ರೀ ಸುದೀಪ್ ಅವರ ಕುಟುಂಬಕ್ಕೆ ಸಂತಾಪಗಳು. ಖ್ಯಾತ ನಟ ಸುದೀಪ್ ಅವರ ತಾಯಿ ಶ್ರೀಮತಿ ಸರೋಜಾ ಸಂಜೀವ್ ಅವರು ವಿಧಿವಶರಾಗಿದ್ದಾರೆ ಎಂದು ತಿಳಿದು ದುಃಖವಾಗಿದೆ. ಶ್ರೀಮತಿ ಸರೋಜಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಪವನ್ ಕಲ್ಯಾಣ್ ಬರೆದಿದ್ದಾರೆ.

ಇದನ್ನೂ ಓದಿ: ‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬಸವರಾಜ ಬೊಮ್ಮಾಯಿ

‘ತಮ್ಮ ನಟನೆಯ ಮೇಲೆ ತಾಯಿಯ ಪ್ರಭಾವ ಮತ್ತು ಪ್ರೋತ್ಸಾಹ ಇದೆ ಎಂದು ಸುದೀಪ್ ಅವರು ಹೇಳಿದ್ದರು. ತಾಯಿಯ ನಷ್ಟದಿಂದ ಬೇಗ ಚೇತರಿಸಿಕೊಳ್ಳಬೇಕು. ಸುದೀಪ್ ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು’ ಎಂದು ಪವನ್ ಕಲ್ಯಾಣ್ ಅವರು ಬರಹ ಪೂರ್ಣಗೊಳಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಕೂಡ ಸುದೀಪ್​ಗೆ ಸಂತಾಪದ ನುಡಿಗಳನ್ನು ತಿಳಿಸಿದ್ದಾರೆ. ಬಸವರಾಜ ಬೊಮ್ಮಾಯಿ, ಶಿವರಾಜ್​ಕುಮಾರ್​ ಮುಂತಾದವರು ಸರೋಜಾ ಸಂಜೀವ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಪವನ್ ಕಲ್ಯಾಣ್ ಅವರು ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ಬಂದಾಗಲೂ ಕೂಡ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದರು. ತಾವು ಕನ್ನಡ ಕಲಿಯಬೇಕು ಎಂಬ ಹಂಬಲ ವ್ಯಕ್ತಪಡಿಸಿದ್ದರು. ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಆದ ಬಳಿಕ ಅವರು ರಾಜಕೀಯದ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಸಿನಿಮಾ ಕೆಲಸಗಳಿಗೆ ಅವರು ಕಡಿಮೆ ಸಮಯ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದು ವಾಂತಿ ಮಾಡಿದ ಹುಲಿ
ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದು ವಾಂತಿ ಮಾಡಿದ ಹುಲಿ
ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಕೊಡಿಸುವ ಸವಾಲು ಸ್ವೀಕಾರ: ಬಿವೈವಿ
ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಕೊಡಿಸುವ ಸವಾಲು ಸ್ವೀಕಾರ: ಬಿವೈವಿ