ಇದೇ ನೋಡಿ ತಾಯಿಗೆ ಸುದೀಪ್ ಕೊಡಿಸಿದ್ದ ಮೊದಲ ಸೀರೆ..
ಅಮ್ಮನಿಗೆ ಸೀರೆ ಕೊಡಿಸೋ ಆಸೆ ಎಲ್ಲರಿಗೂ ಇರುತ್ತದೆ. ಕಿಚ್ಚ ಸುದೀಪ್ ಅವರು ಏಳನೇ ತರಗತಿಯಲ್ಲೇ ಅಮ್ಮನಿಗೆ ಸೀರೆ ಕೊಡಿಸಿದ್ದರು. ಬಿಳಿ ಬಣ್ಣದ ಸೀರೆ ಇದಾಗಿತ್ತು. ಈ ಬಗ್ಗೆ ಅವರು ಮಾತನಾಡಿದ್ದರು. ಈ ಬಗ್ಗೆ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.
ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡರು. ಅಕ್ಟೋಬರ್ 20ರ ಬೆಳಿಗ್ಗೆ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ನಿಧನ ಹೊಂದಿದರು. ಅವರಿಗೆ ಸಾಕಷ್ಟು ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಸುದೀಪ್ ಅವರು ‘ವೀಕೆಂಡ್ ವಿತ್ ರಮೇಶ್’ಗೆ ಬಂದಾಗ ಅವರು ತಾಯಿ ಬಗ್ಗೆ ವಿಶೇಷವಾಗಿ ಮಾತನಾಡಿದ್ದರು. ಅವರ ತೋರಿದ ಪ್ರೀತಿ ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲ, ಅಮ್ಮನಿಗೆ ಕೊಡಿಸಿದ ಸೀರೆಯನ್ನು ಕೊಡಿಸಲಾಗಿತ್ತು.
ಅಮ್ಮನಿಗೆ ಸೀರೆ ಕೊಡಿಸೋ ಆಸೆ ಎಲ್ಲರಿಗೂ ಇರುತ್ತದೆ. ಕಿಚ್ಚ ಸುದೀಪ್ ಅವರು ಏಳನೇ ತರಗತಿಯಲ್ಲೇ ಅಮ್ಮನಿಗೆ ಸೀರೆ ಕೊಡಿಸಿದ್ದರು. ಬಿಳಿ ಬಣ್ಣದ ಸೀರೆ ಇದಾಗಿತ್ತು. ಈ ಬಗ್ಗೆ ಅವರು ಮಾತನಾಡಿದ್ದರು. ‘ಕೇಂಬ್ರೀಡ್ಜ್ ಸ್ಕೂಲ್ನಲ್ಲಿ ಓದುತ್ತಿದ್ದೆ. ನಾನು ಆಗ ಏಳನೇ ತರಗತಿ ನನ್ನ ಅವರು ಆಗ್ರಾಗೆ ಕರೆದುಕೊಂಡು ಹೋಗಿದ್ದರು. ಆಗ ನಾನು ಈ ಸೀರೆ ಕೊಡಿಸಿದ್ದೆ’ ಎಂದರು ಅವರು.
ಹಾಗಂತ ಇದು ಅಪ್ಪ ಕೊಡಿಸಿದ ಹಣದಿಂದ ಈ ಸೀರೆಯನ್ನು ಅವರು ಕೊಡಿಸಿರಲಿಲ್ಲ. ಇದನ್ನು ಅವರು ಕೊಡಿಸಿದ್ದು ತಮ್ಮದೇ ಸೇವಿಂಗ್ಸ್ ಹಣದಿಂದ ಅನ್ನೋದು ವಿಶೇಷ. ಇದನ್ನು ಅವರು ಸೇಫ್ ಆಗಿ ಈಗಲೂ ಇಟ್ಟುಕೊಂಡಿದ್ದಾರೆ ಅನ್ನೋದು ವಿಶೇಷ. ‘ನನ್ನ ಅಮ್ಮಂದು ಅನ್ ಕಂಡೀಷನಲ್ ಲವ್’ ಎಂದಿದ್ದರು ಸುದೀಪ್.
View this post on Instagram
ಸುದೀಪ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ಸಿನಿಮಾ ರಂಗಕ್ಕೆ ಬರುತ್ತಾರೆ ಎಂದಾಗ ಅವರಿಗೆ ಬೆಂಬಲ ನೀಡಿದ್ದು ಅಪ್ಪ ಹಾಗೂ ಅಮ್ಮ. ಅವರು ಸಿನಿಮಾ ಶೂಟಿಂಗ್ಗೆ ಹೊರ ರಾಜ್ಯಗಳಿಗೆ ಹೋದಾಗ ಅವರು ಬಿಗ್ ಬಾಸ್ ಶೂಟ್ಗಾಗಿ ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ಅವರು ಬೆಂಗಳೂರಿಗೆ ಬಂದು, ನಂತರ ಮನೆಗೆ ತೆರಳಿ ತಂದೆ-ತಾಯಿ ಆಶೀರ್ವಾದ ಪಡೆದು ಸಾಗುತ್ತಿದ್ದರು.
ಇದನ್ನೂ ಓದಿ: ‘ಸುದೀಪ್ ತೆಗೆದುಕೊಂಡ ನಿಲುವು ತಪ್ಪು’; ಕಿಚ್ಚನ ವಿರುದ್ಧ ಅಪಸ್ವರ ತೆಗೆದ ಚೈತ್ರಾ ಕುಂದಾಪುರ
ಸುದೀಪ್ ಅವರು ಬಿಗ್ ಬಾಸ್ನ ನಡೆಸಿಕೊಡುತ್ತಿದ್ದಾರೆ. ಶನಿವಾರ ಅವರು ಕೇವಲ ಒಂದು ಎಪಿಸೋಡ್ನ ಶೂಟ್ ಕೂಡ ಮಾಡಿದ್ದರು. ಇದು ಪ್ರಸಾರ ಕಂಡಿದೆ. ಸದ್ಯ ಅವರು ಹಲವು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ನಟನೆಯ ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.