‘ಸುದೀಪ್ ತೆಗೆದುಕೊಂಡ ನಿಲುವು ತಪ್ಪು’; ಕಿಚ್ಚನ ವಿರುದ್ಧ ಅಪಸ್ವರ ತೆಗೆದ ಚೈತ್ರಾ ಕುಂದಾಪುರ

ಕನ್ನಡ ಬಿಗ್ ಬಾಸ್ ಕಳೆದ ಸೀಸನ್​ಗಳಿಗಿಂತ ಹೆಚ್ಚು ಸುದ್ದಿಯಲ್ಲಿದೆ. ಆರಂಭದಿಂದಲೇ ಈ ರಿಯಾಲಿಟಿಶೋ ಇಷ್ಟು ಸುದ್ದಿಯಲ್ಲಿ ಇರುವುದು ಇದೇ ಮೊದಲು ಎಂದೇ ಹೇಳಬಹುದು. ಈಗ ಸುದೀಪ್ ಅವರು ಜಗದೀಶ್ ಪರ ನಿಂತಿದ್ದನ್ನು ಚೈತ್ರಾ ಕುಂದಾಪುರ ಅವರು ಖಂಡಿಸಿದ್ದಾರೆ.

‘ಸುದೀಪ್ ತೆಗೆದುಕೊಂಡ ನಿಲುವು ತಪ್ಪು’; ಕಿಚ್ಚನ ವಿರುದ್ಧ ಅಪಸ್ವರ ತೆಗೆದ ಚೈತ್ರಾ ಕುಂದಾಪುರ
ಚೈತ್ರಾ-ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Oct 21, 2024 | 7:36 AM

ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಸಾಕಷ್ಟು ಬೆಳವಣಿಗೆಗಳು ನಡೆದವು. ಇದಕ್ಕೆ ಕಾರಣ ಆಗಿದ್ದು ಆ ವಾರ ಪೂರ್ತಿ ನಡೆದ ಮಾತಿನ ಚಕಮಕಿ ಹಾಗೂ ಕೈ ಕೈ ಮಿಲಾಯಿಸಿಕೊಂಡು ಮಾಡಿದ ಜಗಳ. ಎಲ್ಲರೂ ಜಗದೀಶ್​ನ ವಿರುದ್ಧ ಮಾತನಾಡಿದ್ದರಿಂದಲೇ ಅವರು ಪ್ರವೋಕ್ ಆದರು ಎಂಬ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ. ಇದೇ ವಿಚಾರವನ್ನು ಸುದೀಪ್ ಅವರು ಮಾತನಾಡಿದ್ದಾರೆ. ಇದಕ್ಕೆ ಚೈತ್ರಾ ಕುಂದಾಪುರ ಖಂಡನೆ ವ್ಯಕ್ತಪಡಿಸಿದ್ದಾರೆ.

ಸುದೀಪ್ ಅವರು ವೀಕೆಂಡ್​ನಲ್ಲಿ ಜಗದೀಶ್ ಅವರ ಪರವಾಗಿ ಮಾತನಾಡಿದರು. ಜಗದೀಶ್ ಹೇಳಿದ್ದು ಸರಿ ಅಲ್ಲ ಎಂದು ಹೇಳಿದ ಸುದೀಪ್​, ಎಲ್ಲರೂ ಅವರನ್ನು ತಡೆಯಬಹುದಿತ್ತು ಎನ್ನುವ ಅಭಿಪ್ರಾಯ ಹೊರಹಾಕಿದ್ದರು. ಈ ಬಗ್ಗೆ ಎಲ್ಲರಿಗೂ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನು ಮನೆ ಮಂದಿ ಖಂಡಿಸಿದ್ದಾರೆ.

ಈ ಬಗ್ಗೆ ಚೈತ್ರಾ ಮಾತನಾಡಿದ್ದಾರೆ. ‘ನೀನು ನನಗೆ ಕೆಸರು ಎರಚಿದರೆ ನಾನು ಕೂಡ ಕೆಸರನ್ನೇ ಎರಚೋದು. ಆ ವ್ಯಕ್ತಿಗೆ ನಾನು ಗುಲಾಬಿ ಎಸೆಯೋಕಾಗಲ್ಲ. ಆ ವ್ಯಕ್ತಿ ಬಗ್ಗೆ ನನಗೇಕೆ ಅಷ್ಟು ಕ್ಲ್ಯಾರಿಟಿ ಕೊಡ್ತಾರೆ? ಸುದೀಪ್ ಸ್ಪರ್ಧಿಗಳಿಗೆ ಬೈದರು ಅನ್ನೋದನ್ನು ಮಾತ್ರ ಜನರು ನೆನಪಿಟ್ಟುಕೊಳ್ಳುತ್ತಾರೆ. ಮಧ್ಯ ಮಧ್ಯದಲ್ಲಿ ಸೇರಿಸಿದ ಲೈನ್​ನ ಜನರು ನೆನಪಿಟ್ಟುಕೊಳ್ಳಲ್ಲ’ ಎಂದಿದ್ದಾರೆ.

‘ಕೈ ಮುಗಿದು ಪೂಜೆ ಮಾಡುವ ಕಲ್ಲಿಗೂ, ಎಲ್ಲೋ ಬಿದ್ದ ಕಲ್ಲಿಗೂ ವ್ಯತ್ಯಾಸ ಇರುತ್ತದೆ. ರೋಡ್​ನಲ್ಲಿರೋ ಕಲ್ಲಿಗೆ ಉಗಿದೆ ಎಂದ ಮಾತ್ರಕ್ಕೆ ನಾನು ತಪ್ಪಿತಸ್ಥೆ ಆಗಲ್ಲ. ನನ್ನ ಮಾತನ್ನು ಕಂಪ್ಲೀಟ್ ಮಾಡೋಕೆ ಬಿಡಬೇಕು. ಇಡೀ ಮನೆಯನ್ನು ವಿಲನ್ ಮಾಡಿದ್ದಾರೆ. ಅವರು ವಿಚಾರದಲ್ಲಿ ನೀವು ಮಾಡಿದ್ದು ತಪ್ಪು ಅಂದಿದ್ದಾರೆ. ಅದು ಸರಿ ಅಲ್ಲ’ ಎಂದಿದ್ದಾರೆ ಚೈತ್ರಾ.

ಇದನ್ನೂ ಓದಿ: ‘ಜಗದೀಶ್ ಬಿಗ್ ಬಾಸ್ ಪಾಲಿಗೆ ಮುಗಿದು ಹೋದ ಅಧ್ಯಾಯ’; ಸುದೀಪ್ ಸ್ಪಷ್ಟನೆ

ಎಲ್ಲರೂ ಸೇರಿ ಜಗದೀಶ್ ಅವರನ್ನು ಕೆರಳಿಸಿದರು ಎಂಬುದು ನಿಜ. ಅವರು ಕೆಟ್ಟ ಶಬ್ದಗಳನ್ನು ಉದ್ದೇಶ ಪೂರ್ವಕವಾಗಿ ಪ್ರಯೋಗಿಸಿದರೂ ಅನ್ನೋದು ನಿಜವೇ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.