ಮಹೇಶ್ ಬಾಬು ಅವರು ಟಾಲಿವುಡ್ನ ಸೂಪರ್ ಸ್ಟಾರ್ಗಳಲ್ಲಿ ಒಬ್ಬರು. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಇದರ ಜೊತೆಗೆ ಅವರು ಸಾಮಾಜಿಕ ಕೆಲಸಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. ಇದಕ್ಕೆ ಇಡೀ ಕುಟುಂಬ ಬೆಂಬಲವಾಗಿ ನಿಂತಿದೆ. ನೂರಾರು ಕೋಟಿ ರೂಪಾಯಿ ಒಡೆಯ ಎನಿಸಿಕೊಂಡಿರೋ ಮಹೇಶ್ ಬಾಬು ಅವರು ವರ್ಷಕ್ಕೆ 30 ಕೋಟಿ ರೂಪಾಯಿ ದಾನ ಮಾಡುತ್ತಾರಂತೆ. ಹಲವು ಎನ್ಜಿಒಗಳಿಗೆ ಮಹೇಶ್ ಬಾಬು ಬೆಂಬಲವಾಗಿ ನಿಂತಿದ್ದಾರೆ. ಈ ಮೂಲಕ ಅವರು ಸಹಾಯ ಹಸ್ತ ಚಾಚಿದ್ದಾರೆ.
ಮಹೇಶ್ ಬಾಬು ಅವರಿಗೆ ಈಗ 48 ವರ್ಷ ವಯಸ್ಸು. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಪ್ರತಿ ವರ್ಷ ಸಿನಿಮಾ ಹಾಗೂ ಜಾಹೀರಾತುಗಳಿಂದ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಅವರದ್ದೇ ಆದ ಥಿಯೇಟರ್ ಕೂಡ ಇದೆ. ಅವರು ದುಡಿದ ಹಣವನ್ನೆಲ್ಲ ಕೇವಲ ಸ್ವಂತಕ್ಕೆ ಬಳಕೆ ಮಾಡಿಕೊಳ್ಳುವುದಿಲ್ಲ. ಬದಲಿಗೆ ದಾನ-ಧರ್ಮಕ್ಕೂ ಬಳಸುತ್ತಾರೆ.
ರೇನ್ಬೋ ಚಿಲ್ಡ್ರನ್ ಹಾಸ್ಪಿಟಲ್ ಜೊತೆ ಮಹೇಶ್ ಬಾಬು ಕೈ ಜೋಡಿಸಿದ್ದಾರೆ. ಈ ಮೂಲಕ ಬಡ ಮಕ್ಕಳ ಟ್ರೀಟ್ಮೆಂಟ್ಗೆ ಸಹಾಯ ಮಾಡುತ್ತಿದ್ದಾರೆ. ಸಾವಿರಾರು ಮಕ್ಕಳಿಗೆ ಉಚಿತವಾಗಿ ಹಾರ್ಟ್ ಸರ್ಜರಿ ಮಾಡಿಸಿದ್ದಾರೆ. ಮಹೇಶ್ ಬಾಬು ಅವರು ಎರಡು ಗ್ರಾಮವನ್ನು ದತ್ತು ಪಡೆದಿದ್ದಾರೆ. ಅಲ್ಲಿ ಅವರು ಮೂಲಸೌಕರ್ಯ ವ್ಯವಸ್ಥೆ ಮಾಡಿಸಿದ್ದಾರೆ. ರಸ್ತೆ, ವಿದ್ಯುತ್, ಶಾಲೆ ಹಾಗೂ ಆರೋಗ್ಯ ಕೇಂದ್ರಗಳನ್ನು ತೆಗೆದಿದ್ದಾರೆ. ‘ಹೀಲ್ ಎ ಚೈಲ್ಡ್’ ಹೆಸರಿನ ಎನ್ಜಿಒ ಒಂದರ ಭಾಗವಾಗಿ ಅವರಿದ್ದಾರೆ. ಇದೆಲ್ಲ ಕಾರ್ಯಕ್ಕೆ ಅವರು ವರ್ಷಕ್ಕೆ ಖರ್ಚು ಮಾಡೋದು 30 ಕೋಟಿ ರೂಪಾಯಿ.
ಇದನ್ನೂ ಓದಿ: ಅನಂತ್ ಅಂಬಾನಿ ಮದುವೆಯಿಂದಾಗಿ ರಾಜಮೌಳಿಗೆ ಕೊಟ್ಟ ಮಾತನ್ನು ಮುರಿದ ಮಹೇಶ್ ಬಾಬು
ಮಹೇಶ್ ಬಾಬು ಅವರ ನಟನೆಯ ‘ಗುಂಟೂರು ಖಾರಂ’ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿತು. ಈಗ ಅವರು ರಾಜಮೌಳಿ ನಿರ್ದೇಶನದ ಸಿನಿಮಾಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಕೆಲಸ ವರ್ಷಾಂತ್ಯಕ್ಕೆ ಆರಂಭ ಆಗೋ ಸಾಧ್ಯತೆ ಇದೆ. ಅಲ್ಲಿಯವರೆಗೆ ಮಹೇಶ್ ಬಾಬು ಅವರು ವಿವಿಧ ರೀತಿಯ ಟ್ರೇನಿಂಗ್ ಪಡೆಯಲಿದ್ದಾರೆ. ಈ ಸಿನಿಮಾದ ಕೆಲಸ ಪೂರ್ಣಗೊಳ್ಳಲು ಸಾಕಷ್ಟು ಸಮಯ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕಾಗಿ ಮಹೇಶ್ ಬಾಬು ಉದ್ದ ಕೂದಲು ಕೂಡ ಬಿಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.