ಅನಂತ್ ಅಂಬಾನಿ ಮದುವೆಯಿಂದಾಗಿ ರಾಜಮೌಳಿಗೆ ಕೊಟ್ಟ ಮಾತನ್ನು ಮುರಿದ ಮಹೇಶ್ ಬಾಬು

ಮಹೇಶ್ ಬಾಬು ಹಾಗೂ ರಾಜಮೌಳಿ ಅವರು ಹೊಸ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಲುಕ್ ಹೇಗಿರಲಿದೆ ಎನ್ನುವ ವಿಚಾರ ಸಾಕಷ್ಟು ಗುಟ್ಟಾಗಿತ್ತು. ಈಗ ಈ ಲುಕ್ ರಿವೀಲ್ ಆಗಿದೆ. ಅಂಬಾನಿ ಮನೆ ಮದುವೆಯಲ್ಲಿ ಭಾಗಿಯಾದಾಗ ಮಹೇಶ್ ಬಾಬು ಅವರ ಉದ್ದ ಕೂದಲು ಗಮನ ಸೆಳೆದಿದೆ.

ಅನಂತ್ ಅಂಬಾನಿ ಮದುವೆಯಿಂದಾಗಿ ರಾಜಮೌಳಿಗೆ ಕೊಟ್ಟ ಮಾತನ್ನು ಮುರಿದ ಮಹೇಶ್ ಬಾಬು
Follow us
 ಶ್ರೀಲಕ್ಷ್ಮೀ ಎಚ್
| Updated By: Digi Tech Desk

Updated on:Jul 16, 2024 | 12:44 PM

ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಅದ್ಧೂರಿ ಮದುವೆಯಲ್ಲಿ ಅನೇಕ ದೊಡ್ಡ ಸೂಪರ್‌ಸ್ಟಾರ್‌ಗಳು ಕಾಣಿಸಿಕೊಂಡರು. ಹಾಲಿವುಡ್, ಬಾಲಿವುಡ್ ಹಾಗೂ ದಕ್ಷಿಣದ ಅನೇಕ ನಟರು ತಮ್ಮ ಮೆಗಾ ಪ್ರಾಜೆಕ್ಟ್‌ಗಳ ಚಿತ್ರೀಕರಣವನ್ನು ತೊರೆದು ಈ ಮದುವೆಯಲ್ಲಿ ಭಾಗಿ ಆದರು. ರಾಮ್ ಚರಣ್, ಮಹೇಶ್ ಬಾಬು, ಶಾರುಖ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ಯಶ್ ಮತ್ತು ಮಾಧುರಿ ದೀಕ್ಷಿತ್ ಅವರ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ಅದೇ ರೀತಿ ಮಹೇಶ್ ಬಾಬು ಅವರು ಕೂಡ ಈ ಮದುವೆಯಲ್ಲಿ ಗಮನ ಸೆಳೆದಿದ್ದಾರೆ.

ಎಸ್‌ಎಸ್ ರಾಜಮೌಳಿ ಅವರ ಜೊತೆ ಮಹೇಶ್ ಬಾಬು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್​ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಬಗ್ಗೆ ಹೊಸ ಹೊಸ ಅಪ್​ಡೇಟ್​ಗಳು ಕೇಳಿ ಬರುತ್ತಲೇ ಇರುತ್ತವೆ. ಈಗ ಈ ಚಿತ್ರಕ್ಕಾಗಿ ಮಹೇಶ್ ಬಾಬು ಉದ್ದ ಕೂದಲು ಬಿಟ್ಟಿದ್ದಾರೆ ಅನ್ನೋದು ರಿವೀಲ್ ಆಗಿದೆ.  ಮಹೇಶ್ ಬಾಬು ಈ ಚಿತ್ರಕ್ಕಾಗಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಿದ್ದಾರೆ. ಸದ್ಯ ಚಿತ್ರದ ಕಾಸ್ಟಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಕೆಲಸ ಶುರುವಾಗಲಿದೆ. ಚಿತ್ರದ ಕೆಲಸ ಶುರುವಾಗುವ ಮುನ್ನವೇ ರಾಜಮೌಳಿ ಮಹೇಶ್ ಬಾಬು ಮುಂದೆ ವಿಚಿತ್ರ ಕಂಡೀಷನ್ ಹಾಕಿದ್ದರು. ಈ ಷರತ್ತನ್ನು ಮಹೇಶ್ ಬಾಬು ಬ್ರೇಕ್ ಮಾಡಿದ್ದಾರೆ.

ರಾಜಮೌಳಿಗೆ ಕೊಟ್ಟ ಮಾತನ್ನು ಮುರಿದ ಮಹೇಶ್ ಬಾಬು?

‘ಆರ್​ಆರ್​ಆರ್​’ ಯಶಸ್ಸಿನ ನಂತರ, ರಾಜಮೌಳಿ SSMB29 ಕೆಲಸ ಮಾಡುತ್ತಿದ್ದಾರೆ. ಸಿನಿಮಾದ ಅದ್ಧೂರಿ ಬಜೆಟ್ ಬಗ್ಗೆ ಕೇಳಿದ ದಿನದಿಂದಲೂ ಜನರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಇದು ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಮಹೇಶ್ ಬಾಬು ಅವರ ಲುಕ್ ಅನ್ನು ರಿವೀಲ್ ಮಾಡದೇ ಇರಲು ರಾಜಮೌಳಿ ನಿರ್ಧರಿಸಿದ್ದರು. ಹೀಗಾಗಿ, ಮಾಧ್ಯಮಗಳಿಂದ ದೂರ ಇರಲು ಮಹೇಶ್ ಬಾಬುಗೆ ಸೂಚಿಸಿದ್ದರು. ಆದರೆ, ಈಗ ಮದುವೆ ಕಾರಣದಿಂದ ಈ ಲುಕ್ ಮಹೇಶ್ ಬಾಬು ರಿವೀಲ್ ಮಾಡಿದಂತೆ ಆಗಿದೆ.

ಇದನ್ನೂ ಓದಿ: ಅನಂತ್ ಅಂಬಾನಿ ಮದುವೆಗೆ ಬರಲಿಲ್ಲ ಈ ಸೆಲೆಬ್ರಿಟಿಗಳು; ಕಾರಣ ಏನು?

ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ಮದುವೆಗೆ ಮಹೇಶ್ ಬಾಬು ತಮ್ಮ ಕುಟುಂಬದೊಂದಿಗೆ ಆಗಮಿಸಿದ್ದರು. ಪತ್ನಿ ಹಾಗೂ ಮಗಳ ಜೊತೆ ಮಹೇಶ್ ಬಾಬು ಕಾಣಿಸಿಕೊಂಡರು.. ಕ್ರಿಕೆಟಿಗ ಎಂಎಸ್ ಧೋನಿ ಜೊತೆಗಿನ ಚಿತ್ರವನ್ನು ಮಹೇಶ್ ಬಾಬು ಅವರೇ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:27 pm, Tue, 16 July 24

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ