ಖಾಸಗಿ ಜೆಟ್, ಐಷಾರಾಮಿ ಮನೆ, ಸ್ವಂತ ಥಿಯೇಟರ್; ಮಹೇಶ್ ಬಾಬು ಒಟ್ಟೂ ಆಸ್ತಿ ಎಷ್ಟು?

| Updated By: ರಾಜೇಶ್ ದುಗ್ಗುಮನೆ

Updated on: Jan 18, 2024 | 2:55 PM

ಮಹೇಶ್ ಬಾಬು ಟಾಲಿವುಡ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹೀರೋಗಳಲ್ಲಿ ಒಬ್ಬರು. ‘ಮಹೇಶ್ ಬಾಬು ಎಂಟರ್ಟೈನ್ಮೆಂಟ್ಸ್’ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹೊಂದಿರುವ ಅವರು ಹಲವು ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಖಾಸಗಿ ಜೆಟ್, ಐಷಾರಾಮಿ ಮನೆ, ಸ್ವಂತ ಥಿಯೇಟರ್; ಮಹೇಶ್ ಬಾಬು ಒಟ್ಟೂ ಆಸ್ತಿ ಎಷ್ಟು?
ಮಹೇಶ್ ಬಾಬ-ನಮ್ರತಾ
Follow us on

ಸಂಕ್ರಾಂತಿ ಪ್ರಯುಕ್ತ ಜನವರಿ 12ರಂದು ರಿಲೀಸ್ ಆದ ‘ಗುಂಟೂರು ಖಾರಂ’ ಚಿತ್ರದ ಮೂಲಕ ಮಹೇಶ್ ಬಾಬು ಮತ್ತೊಮ್ಮೆ ಗೆಲುವು ಕಂಡಿದ್ದಾರೆ. ಈ ಸಿನಿಮಾ ವಿಮರ್ಶಕರಿಂದ ಮಿಶ್ರಪ್ರತಿಕ್ರಿಯೆ ಪಡೆಯಿತು. ಆದಾಗ್ಯೂ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಮಹೇಶ್ ಬಾಬು (Mahesh Babu) ಈವರೆಗೆ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲನಟನಾಗಿ ಬಣ್ಣದ ಬದುಕು ಆರಂಭಿಸಿದ ಅವರು ಈಗ ಸ್ಟಾರ್ ಹೀರೋ ಆಗಿ ವಿಶೇಷ ಮನ್ನಣೆ ಗಳಿಸಿದ್ದಾರೆ. ಅವರ ಆಸ್ತಿ ನೂರಾರು ಕೋಟಿ ರೂಪಾಯಿ ಇದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ಮುರಾರಿ’, ‘ಪೋಕಿರಿ’, ‘ಶ್ರೀಮಂತುಡು’, ‘ಮಹರ್ಷಿ’, ‘ಸರಿಲೇರು ನೀಕೆವ್ವರು’, ‘ಸರ್ಕಾರ ವಾರಿ ಪಟ’ದಂಥ ಹಿಟ್ ಚಿತ್ರಗಳನ್ನು ಮಹೇಶ್ ಬಾಬು ನೀಡಿದ್ದಾರೆ. ಈ ಸಾಲಿಗೆ ‘ಗುಂಟೂರು ಖಾರಂ’ ಕೂಡ ಸೇರ್ಪಡೆ ಆಗಿದೆ. ಸಿನಿಮಾಗಳ ಮೂಲಕ ಯಶಸ್ಸು ಕಂಡಿರುವ ಮಹೇಶ್ ಬಾಬು ಉದ್ಯಮ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ. ಮಹೇಶ ಬಾಬು ಬೆಳ್ಳಿತೆರೆಯಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಹೀರೋ.

ಮಹೇಶ್ ಬಾಬು ಟಾಲಿವುಡ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹೀರೋಗಳಲ್ಲಿ ಒಬ್ಬರು. ‘ಮಹೇಶ್ ಬಾಬು ಎಂಟರ್ಟೈನ್ಮೆಂಟ್ಸ್’ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹೊಂದಿರುವ ಅವರು ಹಲವು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ಎಎಮ್‌ಬಿ ಚಿತ್ರಮಂದಿರವನ್ನು ಆರಂಭಿಸಿದ್ದಾರೆ. ಇದರ ಜೊತೆಗೆ ಅವರು ಸಾಮಾಜಿಕ ಕೆಲಸಗಳನ್ನೂ ಮಾಡುತ್ತಿದ್ದಾರೆ. ಮಹೇಶ್ ಬಾಬು ಹೃದಯ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ಹಲವು ಬಡ ಮಕ್ಕಳ ಜೀವ ಉಳಿಸುತ್ತಿದ್ದಾರೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ಎರಡು ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದಾರೆ.

ಮಹೇಶ್ ಬಾಬು ಅವರ ಆಸ್ತಿ ಮೌಲ್ಯ ರೂ. 273 ಕೋಟಿ ಎಂದು ಅಂದಾಜಿಸಲಾಗಿದೆ. ಅವರು ವರ್ಷಕ್ಕೆ 120 ಕೋಟಿ ರೂಪಾಯಿವರೆಗೆ ಗಳಿಸುತ್ತಾರೆ. ‘ಗುಂಟೂರು ಖಾರಂ’ ಚಿತ್ರಕ್ಕಾಗಿ ಮಹೇಶ್ 78 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ. ಎಸ್​ಎಸ್​ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸಲಿದ್ದು, ಇದಕ್ಕಾಗಿ ಅವರು 125 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರಂತೆ. ಸಿನಿಮಾ ಹೊರತಾಗಿ ಅವರು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕ ಹಣ ಗಳಿಸುತ್ತಿದ್ದಾರೆ. ಪ್ರತಿ ಬ್ರ್ಯಾಂಡ್ ಪ್ರಚಾರಕ್ಕೆ 10 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಮಹೇಶ್ ಬಾಬು ಅವರ ಆಸ್ತಿ 2015ರಲ್ಲಿ ಕೇವಲ 90 ಕೋಟಿ ರೂಪಾಯಿ ಇತ್ತು. ಅದು ಈಗ ಮೂರು ಪಟ್ಟು ಹೆಚ್ಚಾಗಿದೆ.

ಇದನ್ನೂ ಓದಿ: ‘ತಂಬಾಕಿನಿಂದ ಮಾಡಿದ್ದಲ್ಲ, ಅದು ಆಯುರ್ವೇದಿಕ್ ಬೀಡಿ’; ಅಭಿಮಾನಿಗಳಿಗೆ ತಿಳಿ ಹೇಳಿದ ಮಹೇಶ್ ಬಾಬು

ಮಹೇಶ್ ಬಾಬು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಈ ಮನೆಯ ಮನೆಯ ಬೆಲೆ 28 ಕೋಟಿ ರೂ. ಅಲ್ಲದೆ ಬೆಂಗಳೂರಿನಲ್ಲಿ ಐಷಾರಾಮಿ ಕಟ್ಟಡವಿದೆ. ಮಹೇಶ್ ಬಾಬುಗೆ ಕಾರುಗಳೆಂದರೆ ತುಂಬಾ ಇಷ್ಟ. ಆಡಿ ಇ-ಟ್ರಾನ್, ರೇಂಜ್ ರೋವರ್, ಬಿಎಂಡಬ್ಲ್ಯೂ ಎಕ್ಸ್ 6, ಮರ್ಸೀಡಿಸ್ ಬೆಂಜ್ ಎಸ್​ ಕ್ಲಾಸ್​ ನಂತಹ ಐಷಾರಾಮಿ ಕಾರುಗಳಿವೆ. ಮಹೇಶ್ ಬಾಬು ಇತ್ತೀಚೆಗೆ ಲೆಕ್ಸಸ್ LX 570 ಕಾರು ಖರೀದಿಸಿದ್ದಾರೆ. ಖಾಸಗಿ ಜೆಟ್​ ಮತ್ತು ಐಷಾರಾಮಿ ವ್ಯಾನಿಟಿ ವ್ಯಾನ್ ಕೂಡ ಇದೆ. ಇದರ ಜೊತೆ ರೆಸ್ಟೋರೆಂಟ್ ಕೂಡ ಅವರ ಹೆಸರಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ