Updated on:Jan 16, 2024 | 7:12 PM
ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿದ್ದು, ಸಿನಿಮಾ ಯಶಸ್ವಿಯಾಗಿದೆ.
ವಿಮರ್ಶಕರಿಂದ ಅಷ್ಟೇನೂ ಉತ್ತಮ ವಿಮರ್ಶೆಯನ್ನು ಸಿನಿಮಾ ಪಡೆದುಕೊಂಡಿಲ್ಲವಾದರೂ, ಸಿನಿಮಾ ಉತ್ತಮ ಗಳಿಕೆಯನ್ನೇ ಮಾಡಿದೆ.
ಸಿನಿಮಾ ಗೆದ್ದಿರುವ ಖುಷಿಯಲ್ಲಿ ಮಹೇಶ್ ಬಾಬು ಚಿತ್ರತಂಡದ ಪ್ರಮುಖರಿಗೆ ತಮ್ಮ ಮನೆಯಲ್ಲಿ ಪಾರ್ಟಿ ಆಯೋಜನೆ ಮಾಡಿದ್ದರು.
ನಟಿ ಶ್ರೀಲೀಲಾ, ಮೀನಾಕ್ಷಿ ಚೌಧರಿ, ಸಹ ನಿರ್ಮಾಪಕ ವಂಸಿ ಹಾಗೂ ಚಿತ್ರತಂಡದ ಇನ್ನೂ ಕೆಲವರು ಪಾರ್ಟಿಯಲ್ಲಿ ಭಾಗವಹಿಸಿದ್ದರು.
ಕನ್ನಡ ನಟಿ ಶ್ರೀಲೀಲಾ ಅಂತೂ ಪಾರ್ಟಿಯನ್ನು ಸಖತ್ ಎಂಜಾಯ್ ಮಾಡಿದ್ದಾರೆ. ಮಹೇಶ್ ಬಾಬು ಮಗಳೊಟ್ಟಿಗೆ ಡ್ಯಾನ್ಸ್ ಸಹ ಮಾಡಿದ್ದಾರೆ.
ಶ್ರೀಲೀಲಾ. ಮೀನಾಕ್ಷಿ ಸೇರಿದಂತೆ ಚಿತ್ರತಂಡದ ಜೊತೆಗೆ ಮಹೇಶ್ ಬಾಬು ಚಿತ್ರಗಳನ್ನು ತೆಗೆಸಿಕೊಂಡು ಹಂಚಿಕೊಂಡಿದ್ದಾರೆ.
‘ಗುಂಟೂರು ಖಾರಂ’ ಸಿನಿಮಾದ ನಿರ್ದೇಶಕ ತ್ರಿವಿಕ್ರಮ್ ಪಾರ್ಟಿಯಲ್ಲಿ ಭಾಗವಹಿಸಿಲ್ಲ. ನಟಿ ರಮ್ಯಾಕೃಷ್ಣ ಸಹ ಪಾರ್ಟಿಯಲ್ಲಿ ಹಾಜರಿರಲಿಲ್ಲ.
‘ಗುಂಟೂರು ಖಾರಂ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದ್ದು ಮೊದಲೆರಡು ಉತ್ತಮ ಕಲೆಕ್ಷನ್ ಮಾಡಿ, ಹೂಡಿದ್ದ ಬಂಡವಾಳ ಮರಳಿ ಗಳಿಸಿಕೊಟ್ಟಿದೆ.
Published On - 6:22 pm, Tue, 16 January 24