
ನಟಿ ಸಮಂತಾ (Samantha) ಅವರ ಜೊತೆ ಮಹೇಶ್ ಬಾಬುಗೆ ಒಳ್ಳೆಯ ಒಡನಾಟ ಇತ್ತು. ಈ ಒಡನಾಟದ ಬಗ್ಗೆ ಅನೇಕ ವೇದಿಕೆಗಳ ಮೇಲೆ ಅವರು ಹೇಳಿಕೊಂಡಿದ್ದನ್ನು ನೀವು ಕಾಣಬಹುದು. ಈಗ ಶೋಭಿತಾ ಹಾಗೂ ನಾಗ ಚೈತನ್ಯ ಅವರನ್ನು ಮಹೇಶ್ ಬಾಬು ಅವರು ನಿರ್ಲಕ್ಷ್ಯ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗಿದ್ದು ಒಂದು ವಿಡಿಯೋ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ವಿಡಿಯೋನ ಹಂಚಿಕೊಳ್ಳುತ್ತಿದ್ದಾರೆ ಮತ್ತು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಈ ವಿಡಿಯೋದಲ್ಲಿ ಮಹೇಶ್ ಬಾಬು ಅವರು ನಡೆದು ಬರುತ್ತಿದ್ದರು. ಆಗ ನಾಗ ಚೈತನ್ಯ ಹಾಗೂ ಶೋಭಿತಾ ಸೈಡ್ನಲ್ಲಿ ನಿಂತಿದ್ದನ್ನು ನೋಡಬಹುದು. ನಾಗ ಚೈನ್ಯ ಹಾಗೂ ಶೋಭಿತಾ ಅವರನ್ನು ನೋಡಿದರೂ ನೋಡದಂತೆ ಸಾಗಿದರು ಮಹೇಶ್ ಬಾಬು. ಮಹೇಶ್ ಬಾಬು ಅವರು ಹಾಕಿರೋ ಶರ್ಟ್ ಇಂದ ಇದು ಅಖಿಲ್ ಅಕ್ಕಿನೇನಿ ಮದುವೆಯಲ್ಲಿ ನಡೆದ ಘಟನೆ ಎಂಬುದು ಗೊತ್ತಾಗಿದೆ.
ಸಾಮಾನ್ಯವಾಗಿ ಸ್ಟಾರ್ ಹೀರೋ ಬಂದಾಗ ಯಾರಾದರೂ ಕುಟುಂಬದವರು ಎದುರಾದರೆ ಮಾತನಾಡುತ್ತಾರೆ. ಆದರೆ, ಅಖಿಲ್ ಅಕ್ಕಿನೇನಿ ಸಹೋದರ ನಾಗ ಚೈತನ್ಯ ಅವರನ್ನು ಹಾಗೂ ಶೋಭಿತಾನ ಮಹೇಶ್ ಬಾಬು ಮಾತನಾಡಿಸಿಲ್ಲ. ಇದಕ್ಕೆ ಸಾಕಷ್ಟು ಥಿಯರಿಗಳು ಹುಟ್ಟಿಕೊಂಡಿವೆ.
ಮಹೇಶ್ ಬಾಬು ಹಾಗೂ ಸಮಂತಾ ಮಧ್ಯೆ ಒಳ್ಳೆಯ ಗೆಳೆತನ ಇದೆ. ನಾಗ ಚೈತನ್ಯ ಅವರು ಶೋಭಿತಾನ ಮದುವೆ ಆಗಿದ್ದಕ್ಕೆ ಮಹೇಶ್ ಬಾಬುಗೆ ಬೇಸರ ಆಗಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಇದಕ್ಕಾಗಿಯೇ ನಾಗ ಚೈತನ್ಯ ಅವರನ್ನು ನಿರ್ಲಕ್ಷಿಸಲಾಯಿತು ಎಂದು ಹೇಳಲಾಗುತ್ತಿದೆ. ಮಹೇಶ್ ಬಾಬು ಅವರು ಈ ಮೊದಲು ನೀಡಿದ ಸಂದರ್ಶನಗಳನ್ನು ಸಮಂತಾ ಅವರನ್ನು ಹೊಗಳಿದ್ದನ್ನು ತೋರಿಸುವ ವಿಡಿಯೋಗಳನ್ನು ಪೋಸ್ಟ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಮಹೇಶ್ ಬಾಬು ಟಿ-ಶರ್ಟ್ ಮೇಲೆ ಎಲ್ಲರ ಕಣ್ಣು, ಬೆಲೆ ಎಷ್ಟು ಗೊತ್ತೆ?
ಮಹೇಶ್ ಬಾಬು ಅವರು ಅಖಿಲ್ ಅಕ್ಕಿನೇನಿ ಮದುವೆಗೆ ಲಕ್ಷ ರೂಪಾಯಿ ಮೌಲ್ಯದ ಬೆಲೆಯ ಶರ್ಟ್ನ ಧರಿಸಿ ಬಂದಿದ್ದರು. ಈ ಫೋಟೋಗಳು ವೈರಲ್ ಆಗಿ ಗಮನ ಸೆಳೆದವು. ಸದ್ಯ ಮಹೇಶ್ ಬಾಬು ಅವರು ರಾಜಮೌಳಿ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗುವ ನಿರೀಕ್ಷೆ ಇದೆ. ಈ ಸಿನಿಮಾದ ಶೂಟ್ ಭರದಿಂದ ಸಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:51 am, Tue, 17 June 25