ಮಹೇಶ್ ಬಾಬು ಟಿ-ಶರ್ಟ್ ಮೇಲೆ ಎಲ್ಲರ ಕಣ್ಣು, ಬೆಲೆ ಎಷ್ಟು ಗೊತ್ತೆ?
Mahesh Babu: ಒಂದು ಸಿನಿಮಾಕ್ಕೆ ಅತಿ ಹೆಚ್ಚು ಸಂಭಾವನೆ ಪಡೆದ ನಟರ ಸಾಲಿನಲ್ಲಿ ಮಹೇಶ್ ಬಾಬು ಸಹ ಒಬ್ಬರಾಗಿದ್ದಾರೆ. ರಾಜಮೌಳಿ ಜೊತೆಗಿನ ಸಿನಿಮಾಕ್ಕೆ 200 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ. ಇಷ್ಟು ದೊಡ್ಡ ಸಂಭಾವನೆ ಪಡೆದರೂ ಮಹೇಶ್ ಹೊರಗಡೆ ಸರಳವಾಗಿಯೇ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಅಖಿಲ್ ಮದುವೆಗೆ ಬಂದಿದ್ದ ಮಹೇಶ್ ಸಾಧಾರಣವಾಗಿ ಕಾಣುವ ಟಿ-ಶರ್ಟ್ ಧರಿಸಿದ್ದರು. ಆದರೆ ಅದರ ಬೆಲೆ ಮಾತ್ರ ಸಾಧಾರಣ ಅಲ್ಲ.

ಮಹೇಶ್ ಬಾಬು (Mahesh Babu) ಈಗ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ. ರಾಜಮೌಳಿ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿರುವ ಮಹೇಶ್ ಬಾಬು ಈ ಸಿನಿಮಾಕ್ಕಾಗಿ ಸುಮಾರು 250 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಭಾರಿ ಸಂಭಾವನೆ ಪಡೆವ, ಸಾಕಷ್ಟು ಉದ್ಯಮಗಳಲ್ಲಿ ಹೂಡಿಕೆ ಮಾಡಿರುವ ಶ್ರೀಮಂತ ನಟ ಮಹೇಶ್ ಬಾಬು, ಹೊರಗಡೆ ಕಾಣಿಸಿಕೊಂಡಾಗ ಮಾತ್ರ ಬಲು ಸರಳವಾಗಿಯೇ ಕಾಣಿಸಿಕೊಳ್ಳುತ್ತಾರೆ. ಮಹೇಶ್ ತೊಡುವ ಉಡುಪುಗಳ ಸಹ ನೋಡಲು ಬಲು ಸರಳವಾಗಿ ಕಾಣುತ್ತವೆ, ಆದರೆ ಅವು ಕಾಣಿಸಿದಷ್ಟು ಸರಳವಾದ ಉಡುಗೆಗಳಲ್ಲ. ಬೆಲೆ ಲಕ್ಷಗಳಲ್ಲೇ ಇರುತ್ತದೆ.
ಕೆಲ ದಿನಗಳ ಹಿಂದಷ್ಟೆ ನಟ ಮಹೇಶ್ ಬಾಬು, ತೆಲುಗಿನ ಖ್ಯಾತ ನಟ ನಾಗಾರ್ಜುನ ಹಾಗೂ ಅಮಲಾ ಅವರ ಕಿರಿಯ ಪುತ್ರ ಅಖಿಲ್ ಅಕ್ಕಿನೇನಿ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಬಹಳ ಸರಳವಾದ ಉಡುಗೆಗಳನ್ನು ಅಂದು ಮಹೇಶ್ ಬಾಬು ಧರಿಸಿದ್ದರು. ಇತರೆ ಅತಿಥಿಗಳು ಬಲು ದುಬಾರಿ ಸೂಟುಗಳನ್ನು ಧರಿಸಿ ಬಂದಿದ್ದರೆ ಮಹೇಶ್ ಬಾಬು ಮಾತ್ರ ಒಂದು ಟಿ-ಶರ್ಟ್ ಒಂದು ಸಾಮಾನ್ಯದಂತೆ ಕಾಣುವ ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ಕುಟುಂಬದವರ ಜೊತೆಗೆ ಬಂದಿದ್ದರು.
ಆದರೆ ಮಹೇಶ್ ಬಾಬು ಧರಿಸಿದ್ದ ಟಿ-ಶರ್ಟ್ ನೋಡಲು ಸರಳವಾಗಿ ಸುಮಾರು 2000-5000 ರೂಪಾಯಿಗಳ ಟಿ-ಶರ್ಟ್ ರೀತಿ ಕಾಣುತ್ತಿದ್ದಾದರೂ ಅದರ ಅಸಲಿ ಬೆಲೆ ಕೇಳಿದರೆ ದಂಗಾಗುವುದು ಗ್ಯಾರೆಂಟಿ. ಮಹೇಶ್ ಬಾಬು, ಅಖಿಲ್-ಝೈನಬ್ ಅವರ ಆರತಕ್ಷತೆಯಲ್ಲಿ ಧರಿಸಿದ್ದ ಟಿ-ಶರ್ಟ್ ಬೆಲೆ ಬರೋಬ್ಬರಿ 1.55 ಲಕ್ಷ ರೂಪಾಯಿಗಳು.
ಇದನ್ನೂ ಓದಿ:ಮಹೇಶ್ ಬಾಬು ಸಿನಿಮಾದಲ್ಲಿ ಆರ್. ಮಾಧವನ್? ಹಿರಿದಾಗುತ್ತಿದೆ ಪಾತ್ರವರ್ಗ
ಹೌದು, ಮಹೇಶ್ ಬಾಬು ಧರಿಸಿದ್ದ ಟಿ-ಶರ್ಟ್ ಬೆಲೆ 1.55 ಲಕ್ಷ ರೂಪಾಯಿಗಳು. ಜಗತ್ತಿನ ದುಬಾರಿ ಮತ್ತು ಜನಪ್ರಿಯ ಉಡುಪು ಮತ್ತು ಬ್ಯಾಗುಗಳ ಬ್ರ್ಯಾಂಡ್ ಆಗಿರುವ ಹರ್ಮನ್ಸ್ನ ಟಿ-ಶರ್ಟ್ ಅನ್ನು ಮಹೇಶ್ ಬಾಬು ಧರಿಸಿದ್ದರು. ಮಹೇಶ್ ಬಾಬು ಕುಟುಂಬದ ಜೊತೆಗೆ ವಿದೇಶ ಯಾತ್ರೆಗಳನ್ನು ಮಾಡುತ್ತಲೇ ಇರುತ್ತಾರೆ. ಹೀಗೆ ವಿದೇಶಗಳಿಗೆ ಹೋದಾಗೆಲ್ಲ ತಮಗಾಗಿ ಹಾಗೂ ತಮ್ಮ ಕುಟುಂಬಕ್ಕಾಗಿ ಶಾಪಿಂಗ್ ಮಾಡುತ್ತಾರೆ. ಮಹೇಶ್ ಬಾಬು ನೋಡಲು ಸರಳವಾಗಿ ಕಾಣುವ ಉಡುಪುಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ ಅದಕ್ಕಾಗಿ ಭಾರಿ ದುಬಾರಿ ಬೆಲೆಯನ್ನೇ ತೆತ್ತು ಖರೀದಿ ಮಾಡುತ್ತಾರೆ ಮಹೇಶ್.
ಮಹೇಶ್ ಬಾಬು ಪ್ರಸ್ತುತ ರಾಜಮೌಳಿ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಬಾಬು ಈ ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಂಡು ಈಗಾಗಲೇ ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಇನ್ನೂ ಸುಮಾರು ಎರಡು ವರ್ಷಗಳ ಕಾಲ ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುವುದಿಲ್ಲ ಮಹೇಶ್ ಬಾಬು. ಇನ್ನು ರಾಜಮೌಳಿಯ ಸಿನಿಮಾಕ್ಕಾಗಿ ಸುಮಾರು 250 ಕೋಟಿ ರೂಪಾಯಿ ಸಂಭಾವನೆಯನ್ನು ಮಹೇಶ್ ಬಾಬು ಪಡೆಯುತ್ತಿದ್ದಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ