ವಿಫಲವಾಯ್ತಾ ರಾಜಮೌಳಿ ಪ್ರಯತ್ನ? ಮಹೇಶ್​ ಬಾಬು ಲುಕ್​ ಬಹಿರಂಗ

ನಟ ಮಹೇಶ್​ ಬಾಬು ಹಾಗೂ ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರು ತಮ್ಮ ತಂಡದ ಜತೆ ದುಬೈಗೆ ಹೋಗಿದ್ದರು. ಅಲ್ಲಿ ‘SSMB 29’ ಚಿತ್ರದ ಪ್ರೀ-ಪ್ರೊಡಕ್ಷನ್​ ಕೆಲಸ ಪೂರ್ಣಗೊಳಿಸಲಾಗಿದೆ. ಪಾತ್ರಕ್ಕಾಗಿ ಮಹೇಶ್​ ಬಾಬು ವಿಶೇಷ ತರಬೇತಿ ಪಡೆದುಕೊಂಡಿದ್ದಾರೆ. ಅಲ್ಲಿಂದ ಅವರು ಹಿಂದಿರುಗಿ ಹೈದರಾಬಾದ್​ಗೆ ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಅವರ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಮಹೇಶ್​ ಬಾಬು ಗೆಟಪ್​ ಗಮನ ಸೆಳೆಯುತ್ತಿದೆ.

ವಿಫಲವಾಯ್ತಾ ರಾಜಮೌಳಿ ಪ್ರಯತ್ನ? ಮಹೇಶ್​ ಬಾಬು ಲುಕ್​ ಬಹಿರಂಗ
ಮಹೇಶ್​ ಬಾಬು

Updated on: Apr 19, 2024 | 10:33 PM

ಎಸ್​ಎಸ್​ ರಾಜಮೌಳಿ (Rajamouli) ಮತ್ತು ಮಹೇಶ್​ ಬಾಬು ಅವರು ಜೊತೆಯಾಗಿ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಬಗ್ಗೆ ಹೊಸ ಅಪ್​ಡೇಟ್​ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ಇದು ಮಹೇಶ್​ ಬಾಬು ನಟನೆಯ 29ನೇ ಸಿನಿಮಾ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ನಿಗದಿ ಆಗಿಲ್ಲ. ಸದ್ಯಕ್ಕೆ ‘SSMB 29’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾದಲ್ಲಿ ಮಹೇಶ್​ ಬಾಬು (Mahesh Babu) ಅವರಿಗೆ ಡಿಫರೆಂಟ್​ ಲುಕ್​ ಇರಲಿದೆ. ಆ ಲುಕ್​ ಬಹಿರಂಗ ಆಗಬಾರದು ಎಂಬುದು ರಾಜಮೌಳಿ ಅವರ ಉದ್ದೇಶ ಆಗಿತ್ತು. ಅದಕ್ಕಾಗಿ ಅವರು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಈಗಾಗಲೇ ಮಹೇಶ್​ ಬಾಬು ಅವರು ಹೊಸ ಗೆಟಪ್​ ಬಹಿರಂಗ ಆಗಿದೆ. ಹೊಸ ವಿಡಿಯೋ ವೈರಲ್​ ಆಗಿದೆ.

ಮಹೇಶ್​ ಬಾಬು ಮತ್ತು ರಾಜಮೌಳಿ ಅವರು ತಮ್ಮ ತಂಡದ ಜೊತೆ ದುಬೈಗೆ ತೆರಳಿದ್ದರು. ಅಲ್ಲಿ ‘SSMB29’ ಸಿನಿಮಾದ ಪ್ರೀ-ಪ್ರೊಡಕ್ಷನ್​ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ. ಮಹೇಶ್​ ಬಾಬು ಅವರು ವಿಶೇಷ ತರಬೇತಿ ಕೂಡ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲಿಂದ ಅವರೀಗ ವಾಪಸ್​ ಹೈದರಾಬಾದ್​ಗೆ ಬಂದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಮಹೇಶ್​ ಬಾಬು ಅವರ ವಿಡಿಯೋ ಸಖತ್​ ವೈರಲ್​ ಆಗಿದ್ದು, ಅದರಲ್ಲಿನ ಅವರ ಗೆಟಪ್​ ಗಮನ ಸೆಳೆಯುತ್ತಿದೆ.

‘SSMB29’ ಸಿನಿಮಾದದಲ್ಲಿ ಮಹೇಶ್​ ಅವರಿಗೆ ಉದ್ದ ಕೂದಲಿನ ಗೆಟಪ್​ ಇರಲಿದೆ ಎಂಬುದು ಮೇಲ್ನೋಟಕ್ಕೆ ಖಚಿತವಾಗಿದೆ. ಯಾಕೆಂದರೆ, ವಿದೇಶದಿಂದ ಬಂದ ಮಹೇಶ್​ ಬಾಬು ಅವರು ಇದೇ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಪಾತ್ರಕ್ಕಾಗಿ ಅವರು ಕೂದಲು ಬೆಳೆಸಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ಡಬಲ್​ ಆಗಿದೆ.

ಇದನ್ನೂ ಓದಿ: ರಾಜಮೌಳಿ ಸೂಪರ್​ ಡ್ಯಾನ್ಸರ್​ ಎಂಬುದು ನಿಮಗೆ ಗೊತ್ತಾ? ಪತ್ನಿ ಜೊತೆಗಿನ ಡ್ಯಾನ್ಸ್ ವಿಡಿಯೋ ವೈರಲ್​

ರಾಜಮೌಳಿ ಅವರ ಸಿನಿಮಾಗಳಲ್ಲಿ ಹೀರೋಗಳಿಗೆ ಡಿಫರೆಂಟ್​ ಗೆಟಪ್​ ಇರುತ್ತದೆ. ‘ಮಗಧೀರ’, ‘ಬಾಹುಬಲಿ’, ‘ಆರ್​ಆರ್​ಆರ್​’ ಮುಂತಾದ ಸಿನಿಮಾಗಳೇ ಅದಕ್ಕೆ ಸಾಕ್ಷಿ. ಈಗ ಮಹೇಶ್​ ಬಾಬು ಕೂಡ ಹೊಸ ಗೆಟಪ್​ನಲ್ಲಿ ಅಭಿಮಾನಿಗಳ ಎದುರು ಬರಲಿದ್ದಾರೆ. ಈ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ನಿರ್ಮಾಣ ಮಾಡಲು ಪ್ಲ್ಯಾನ್​ ನಡೆದಿದೆ. ‘ಆರ್​ಆರ್​ಆರ್​’ ಬಳಿಕ ರಾಜಮೌಳಿ ಅವರಿಗೆ ವಿಶ್ವಾದ್ಯಂತ ಜನಪ್ರಿಯತೆ ಸಿಕ್ಕಿದೆ. ಹಾಗಾಗಿ ಅವರು ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾ ಮೇಲೆ ಹೈಪ್​ ಜಾಸ್ತಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us