‘ಹೆಚ್ಚೆಚ್ಚು ಹೆಮ್ಮೆ ಪಡುವಂತೆ ಮಾಡುತ್ತಿದ್ದೀಯ’; ಮಗಳು ಸಿತಾರಾ ಬಗ್ಗೆ ಮಹೇಶ್​ ಬಾಬು ವಿಶೇಷ ಮಾತು

ಹೇಶ್ ಬಾಬು ಅವರು ‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಎರಡೂ ಹಾಡುಗಳು ಹಿಟ್​ ಆಗಿವೆ. ಒಂದು ಹಾಡಿನಲ್ಲಿ ಮಹೇಶ್ ಬಾಬು ಅವರ ಮಗಳು ಸಿತಾರಾ ಕೂಡ ಕಾಣಿಸಿಕೊಂಡಿದ್ದಾಳೆ.

‘ಹೆಚ್ಚೆಚ್ಚು ಹೆಮ್ಮೆ ಪಡುವಂತೆ ಮಾಡುತ್ತಿದ್ದೀಯ’; ಮಗಳು ಸಿತಾರಾ ಬಗ್ಗೆ ಮಹೇಶ್​ ಬಾಬು ವಿಶೇಷ ಮಾತು
ಮಹೇಶ್ ಬಾಬು-ಸಿತಾರಾ
Edited By:

Updated on: Apr 10, 2022 | 6:53 PM

ಮಹೇಶ್ ಬಾಬು (Mahesh Babu) ಅವರಿಗೆ ಕುಟುಂಬದ ಬಗ್ಗೆ ವಿಶೇಷ ಪ್ರೀತಿ ಇದೆ. ಮಗಳು ಸಿತಾರಾಳನ್ನು (Sitara) ಕಂಡರೆ ಎಲ್ಲಿಲ್ಲದ ಪ್ರೀತಿ. ಸಮಯ ಸಿಕ್ಕಾಗಲೆಲ್ಲ ಕುಟುಂಬದ ಜತೆ ಸಮಯ ಕಳೆಯೋಕೆ ಬಯಸುತ್ತಾರೆ ಮಹೇಶ್ ಬಾಬು. ಸಿತಾರಾ ಕೂಡ ತುಂಬಾನೇ ಚೂಟಿ. ಆಕೆಗೆ ಇನ್ನೂ 9 ವರ್ಷ. ಆಗಲೇ ಅವಳು ಚಿತ್ರರಂಗಕ್ಕೆ ಕಾಲಿಟ್ಟಾಗಿದೆ. ಈಗ ಮಗಳ ಬಗ್ಗೆ ಹೆಮ್ಮೆ ಆಗುತ್ತಿದೆ ಎಂದು ಮಹೇಶ್ ಬಾಬು ಬರೆದುಕೊಂಡಿದ್ದಾರೆ. ವಿಶೇಷ ವಿಡಿಯೋ ಹಂಚಿಕೊಂಡಿರುವ ಅವರು ಮಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಮಹೇಶ್ ಬಾಬು ಅವರು ‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೇ 12ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಈ ಸಿನಿಮಾದ ಎರಡೂ ಹಾಡುಗಳು ಹಿಟ್​ ಆಗಿವೆ. ಒಂದು ಹಾಡಿನಲ್ಲಿ ಮಹೇಶ್ ಬಾಬು ಅವರ ಮಗಳು ಸಿತಾರಾ ಕೂಡ ಕಾಣಿಸಿಕೊಂಡಿದ್ದಾಳೆ. ಅವಳು ಸ್ಟೆಪ್​ ಹಾಕಿದ ಪರಿಗೆ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದರು. ಈ ಹಾಡಿನಿಂದ ಅವಳ ಅಭಿಮಾನಿ ಬಳಗ ಹಿರಿದಾಗುತ್ತಿದೆ. ಈ ಹಾಡಿನ ಮೂಲಕ ಅವಳು ಚಿತ್ರರಂಗಕ್ಕೆ ಕಾಲಿಟ್ಟಂತೆ ಆಗಿದೆ.

ಸಿತಾರಾ ಚಿಕ್ಕ ವಯಸ್ಸಿಗೆ ಸಾಕಷ್ಟು ಸಾಧನೆ ಮಾಡಿದ್ದಾಳೆ. ತನ್ನದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಅವಳು ಸಾಕಷ್ಟು ಸಲೆಬ್ರಿಟಿಗಳನ್ನು ಸಂದರ್ಶನ ಮಾಡುತ್ತಾಳೆ. ಸಿನಿಮಾ ಇಂಡಸ್ಟ್ರಿಗೆ ಅವಳು ಕಾಲಿಟ್ಟಾಗಿದೆ. ಸಿತಾರಾ ಕೂಚಿಪುಡಿ ನೃತ್ಯವನ್ನು ಕೂಡ ಉತ್ತಮವಾಗಿ ಮಾಡುತ್ತಾಳೆ ಅನ್ನೋದು ಈಗ ಗೊತ್ತಾಗಿದೆ.

ಇಂದು (ಏಪ್ರಿಲ್​ 10) ರಾಮ ನವಮಿ. ರಾಮನ ಶ್ರೇಷ್ಠತೆಯನ್ನು ಸಾರುವ ಹಾಡಿಗೆ ಸಿತಾರಾ ಕೂಚಿಪುಡಿ ಡ್ಯಾನ್ಸ್ ಮಾಡಿದ್ದಾಳೆ. ಮಗಳ ಟ್ಯಾಲೆಂಟ್​ ಕಂಡು ಮಹೇಶ್ ಬಾಬುಗೆ ಖುಷಿ ಆಗಿದೆ. ‘ಹೆಚ್ಚೆಚ್ಚು ಹೆಮ್ಮೆ ಪಡುವಂತೆ ಮಾಡುತ್ತಿದ್ದೀಯ’ ಎಂದು ಬರೆದುಕೊಂಡಿದ್ದಾರೆ ಮಹೇಶ್ ಬಾಬು. ಅಭಿಮಾನಿಗಳು ಕೂಡ ಸಿತಾರಾ ನೃತ್ಯಕ್ಕೆ ತಲೆದೂಗಿದ್ದಾರೆ.

‘ಸರ್ಕಾರು ವಾರಿ ಪಾಟ’ ಚಿತ್ರದ ‘ಕಲಾವತಿ..’ ಹಾಡು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಹಾಡು ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ. ಮಹೇಶ್ ಬಾಬುಗೆ ಜತೆಯಾಗಿ ಕೀರ್ತಿ ಸುರೇಶ್ ನಟಿಸಿದ್ದಾರೆ.

ಇದನ್ನೂ ಓದಿ: ತಂದೆ ಮಹೇಶ್​ ಬಾಬು ಡ್ಯಾನ್ಸ್​ ಮಾಡಿದ ‘ಕಲಾವತಿ..’ ಹಾಡಿಗೆ ಸಖತ್​ ಆಗಿ ಸ್ಟೆಪ್​ ಹಾಕಿದ ಮಗಳು ಸಿತಾರಾ

ಫಸ್ಟ್​ಲುಕ್​ನಲ್ಲೇ ದಾಖಲೆ ಬರೆದ ಮಹೇಶ್​ ಬಾಬು; ಇದು ‘ಸರ್ಕಾರು ವಾರಿ ಪಾಟ’ ಹವಾ

Published On - 6:52 pm, Sun, 10 April 22