ಇನ್ನೂ ಪೂರ್ಣಗೊಂಡಿಲ್ಲ ‘ಗುಂಟೂರು ಖಾರಂ’ ಸಿನಿಮಾ ಶೂಟಿಂಗ್; ಅಭಿಮಾನಿಗಳಿಗೆ ಆಗಿದೆ ಚಿಂತೆ
ವಿಕ್ಟರಿ ವೆಂಕಟೇಶ್ ಅವರ 75ನೇ ಸಿನಿಮಾ ಲಾಂಚ್ ಆಗಿದೆ. ಈ ಕಾರ್ಯಕ್ರಮಕ್ಕೆ ರಾಣಾ ದಗ್ಗುಬಾಟಿ ಸೇರಿ ಅನೇಕರು ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಮಹೇಶ್ ಬಾಬು ಕೂಡ ಆಗಮಿಸಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ.
ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ (Guntur Kaaram Movie) ರಿಲೀಸ್ಗೆ ಉಳಿದಿರೋದು ಇನ್ನು ಎರಡು ವಾರ ಮಾತ್ರ. ಜನವರಿ 12ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಚಿಂತೆ ಶುರುವಾಗಿದೆ. ಸಿನಿಮಾ ತಂಡ ಸರಿಯಾಗಿ ಪ್ರಚಾರ ಆರಂಭಿಸಿಲ್ಲ. ಮತ್ತೊಂದು ವಿಚಾರ ಎಂದರೆ ಇನ್ನೂ ಚಿತ್ರದ ಶೂಟಿಂಗ್ ಪೂರ್ಣಗೊಂಡಿಲ್ಲ. ಮಹೇಶ್ ಬಾಬು ಅವರು ಕಳೆದ ಕೆಲವು ದಿನಗಳಿಂದ ಹಗಲು ರಾತ್ರಿ ಶೂಟಿಂಗ್ನಲ್ಲಿ ಭಾಗಿ ಆಗುತ್ತಿದ್ದಾರೆ ಎನ್ನಲಾಗಿದೆ.
ವಿಕ್ಟರಿ ವೆಂಕಟೇಶ್ ಅವರ 75ನೇ ಸಿನಿಮಾ ಲಾಂಚ್ ಆಗಿದೆ. ಈ ಕಾರ್ಯಕ್ರಮಕ್ಕೆ ರಾಣಾ ದಗ್ಗುಬಾಟಿ ಸೇರಿ ಅನೇಕರು ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಮಹೇಶ್ ಬಾಬು ಕೂಡ ಆಗಮಿಸಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಆಗಿದ್ದು ‘ಗುಂಟೂರು ಖಾರಂ’ ಸಿನಿಮಾದ ಶೂಟಿಂಗ್ ಎನ್ನಲಾಗುತ್ತಿದೆ.
‘ಗುಂಟೂರು ಖಾರಂ’ ಸಿನಿಮಾದ ಸಾಂಗ್ ಶೂಟ್ ಬಾಕಿ ಇದೆ ಎನ್ನಲಾಗಿದೆ. ಹೀಗಾಗಿ, ಮಹೇಶ್ ಬಾಬು ಅವರು ಹಗಲು ರಾತ್ರಿ ಇದರಲ್ಲೇ ಬ್ಯುಸಿ ಇದ್ದಾರೆ. ಅವರು ಕಾರ್ಯಕ್ರಮಕ್ಕೆ ಬರಬೇಕು ಎಂದುಕೊಂಡಿದ್ದರು. ಆದರೂ ಅದು ಸಾಧ್ಯವಾಗಿಲ್ಲ. ಶೂಟಿಂಗ್ ಪೂರ್ಣಗೊಳ್ಳುವುದು ರಾತ್ರಿ 10.30 ಆಗಿದೆ. ಹೀಗಾಗಿ, ಅವರು ಕಾರ್ಯಕ್ರಮಕ್ಕೆ ಬಂದಿಲ್ಲ.
ಇದನ್ನೂ ಓದಿ: ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಚಿತ್ರದ ಶೂಟಿಂಗ್ ವಿಡಿಯೋ ಲೀಕ್
ಸದ್ಯ ‘ಗುಂಟೂರು ಖಾರಂ’ ತಂಡದಿಂದ ಎರಡು ಸಾಂಗ್ ರಿಲೀಸ್ ಆಗಿದೆ. ಜನವರಿ ಆರಂಭದಲ್ಲಿ ಮೊದಲ ಟ್ರೇಲರ್ ರಿಲೀಸ್ ಆಗುವ ನಿರೀಕ್ಷೆ ಇದೆ. ಚಿತ್ರತಂಡದವರು ಪ್ರೀ ರಿಲೀಸ್ ಇವೆಂಟ್ನ ದೊಡ್ಡ ಮಟ್ಟದಲ್ಲಿ ಮಾಡಲು ಪ್ಲಾನ್ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.
‘ಗುಂಟೂರು ಖಾರಂ’ ಸಿನಿಮಾಗೆ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಬಾಬು, ಶ್ರೀಲೀಲಾ ಮೊದಲಾದವರು ನಟಿಸಿದ್ದಾರೆ. ಸಂಕ್ರಾಂತಿ ಸಂದರ್ಭದಲ್ಲಿ ಸಾಕಷ್ಟು ಚಿತ್ರಗಳು ರಿಲೀಸ್ ಆಗಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ