ಬಿಡುಗಡೆಗೆ ಮುನ್ನವೇ ಗೆದ್ದ ಮಹೇಶ್ ಬಾಬು ಸಿನಿಮಾ, ಗಳಿಸಿರುವುದೆಷ್ಟು?

|

Updated on: Jan 11, 2024 | 8:51 PM

Mahesh Babu: ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾ ಬಿಡುಗಡೆಗೆ ಮುನ್ನವೇ ನೂರಾರು ಕೋಟಿ ಹಣ ಗಳಿಸಿದೆ.

ಬಿಡುಗಡೆಗೆ ಮುನ್ನವೇ ಗೆದ್ದ ಮಹೇಶ್ ಬಾಬು ಸಿನಿಮಾ, ಗಳಿಸಿರುವುದೆಷ್ಟು?
Follow us on

ತೆಲುಗು ಚಿತ್ರರಂಗದ ಸ್ಟಾರ್ ನಟ ಮಹೇಶ್ ಬಾಬು (Mahesh Babu) ನಟನೆಯ ‘ಗುಂಟೂರು ಖಾರಂ’ ಸಿನಿಮಾ ಜನವರಿ 12ಕ್ಕೆ ತೆರೆಗೆ ಬರುತ್ತಿದೆ. ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ವೆಂಕಟೇಶ್, ನಾಗಾರ್ಜುನ ಅವರ ಸಿನಿಮಾಗಳು ಸಹ ಅದೇ ದಿನ ಬಿಡುಗಡೆ ಆಗುತ್ತಿವೆ. ಭರ್ಜರಿ ಸ್ಪರ್ಧೆ ಇದ್ದರೂ ಸಹ ಈ ಸಂಕ್ರಾಂತಿಗೆ ಮಹೇಶ್ ಬಾಬು ನಟನೆಯ ಸಿನಿಮಾ ಗೆಲ್ಲಲಿದೆ ಎಂಬ ಭವಿಷ್ಯವನ್ನು ಕೆಲವು ಸಿನಿಮಾ ವಿಶ್ಲೇಷಕರು ನುಡಿದಿದ್ದಾರೆ. ಅದಕ್ಕೆ ಪೂರಕವಾಗಿ ‘ಗುಂಟೂರು ಖಾರಂ’ ಸಿನಿಮಾ ಬಿಡುಗಡೆಗೆ ಮುನ್ನವೇ ನೂರಾರು ಕೋಟಿ ಬ್ಯುಸಿನೆಸ್ ಮಾಡಿದ್ದು ಗೆಲುವಿನ ಹಾದಿಯನ್ನು ಸ್ಪಷ್ಟ ಮಾಡಿಕೊಂಡಿದೆ.

ಸ್ಟಾರ್ ನಟರ ಸಿನಿಮಾ ಬಿಡುಗಡೆ ಆದ ಮೇಲೆ ನೂರಾರು ಕೋಟಿ ಗಳಿಸುವುದು ಇತ್ತೀಚೆಗೆ ಸಾಮಾನ್ಯ. ಆದರೆ ಕೆಲವು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ಮುನ್ನವೇ ನೂರಾರು ಕೋಟಿ ಗಳಿಸುತ್ತವೆ. ಅಂತೆಯೇ ಇದೀಗ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ಸಹ ಬಿಡುಗಡೆಗೆ ಮುನ್ನವೇ ಅದ್ಭುತವಾದ ಪ್ರೀ ರಿಲೀಸ್ ಬ್ಯುಸಿನೆಸ್ ಕಂಡಿದೆ. ಆ ಮೂಲಕ ನಿರ್ಮಾಪಕರಿಗೆ ಲಾಭದ ರುಚಿ ತೋರಿಸಿದೆ.

ಇದನ್ನೂ ಓದಿ:ಖಾಸಗಿ ವಿಮಾನದಲ್ಲಿ ಎಂಟ್ರಿ ಕೊಟ್ಟ ‘ಗುಂಟೂರು ಖಾರಂ’ ತಂಡ; ಹೈಲೈಟ್ ಆದ ಶ್ರೀಲೀಲಾ

‘ಗುಂಟೂರು ಖಾರಂ’ ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್​ನಿಂದ ಈಗಾಗಲೇ 135 ಕೋಟಿ ರೂಪಾಯಿಗಳನ್ನು ಗಳಸಿದೆ ಎನ್ನಲಾಗುತ್ತಿದೆ. ಆಂಧ್ರ ತೆಲಂಗಾಣ ಎರಡು ರಾಜ್ಯಗಳ ವಿತರಕರಿಂದ ಈಗಾಗಲೇ 105 ಕೋಟಿ ಅಡ್ವಾನ್ಸ್ ಮೊತ್ತ ‘ಗುಂಟೂರು ಖಾರಂ’ ಸಿನಿಮಾದ ನಿರ್ಮಾಪಕರಿಗೆ ಬಂದು ಸೇರಿದೆ. ಕರ್ನಾಟಕ ಹಾಗೂ ಭಾರತದ ಇತರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಲು 10 ಕೋಟಿ ಹಣ ಹಾಗೂ ವಿದೇಶದ ಬಿಡುಗಡೆ ಹಕ್ಕಿಗೆ 20 ಕೋಟಿ ಹಣ ಬಂದಿದೆ. ಅಲ್ಲಿಗೆ 135 ಕೋಟಿ ಹಣ ಈಗಾಗಲೇ ನಿರ್ಮಾಪಕರ ಖಾತೆ ಸೇರಿದೆ.

‘ಗುಂಟೂರು ಖಾರಂ’ ಸಿನಿಮಾದ ಆಡಿಯೋ ಹಕ್ಕು, ಒಟಿಟಿ ಹಕ್ಕುಗಳು ಸೇರಿದರೆ ಈ ಮೊತ್ತ ಸುಲಭವಾಗಿ 200 ಕೋಟಿ ಆಗಲಿದೆ. ಅಲ್ಲಿಗೆ ಸಿನಿಮಾಕ್ಕೆ ನಿರ್ಮಾಪಕರು ಹೂಡಿರುವ ಬಂಡವಾಳ ಮರಳಿ ಬಂದಂತಾಗುತ್ತದೆ. ಸಿನಿಮಾದ ಬಿಡುಗಡೆ ಬಳಿಕ ಬರುವ ಮೊತ್ತವೆಲ್ಲವೂ ಲಾಭವೇ ಆಗಲಿದೆ. ‘ಗುಂಟೂರು ಖಾರಂ’ ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್​ನಲ್ಲಿ 50 ಕೋಟಿಗೂ ಹೆಚ್ಚು ಮೊತ್ತ ಗಳಿಸುವ ನಿರೀಕ್ಷೆ ಇದ್ದು, ಸಿನಿಮಾದ ಒಟ್ಟು ಗಳಿಕೆ ಸುಮಾರು 400 ಕೋಟಿ ಆಗಲಿದೆ ಎನ್ನಲಾಗುತ್ತಿದೆ. ಅಲ್ಲಿಗೆ ಭಾರಿ ದೊಡ್ಡ ಲಾಭವನ್ನೇ ಸಿನಿಮಾ ಮಾಡುವ ಭರವಸೆ ಮೂಡಿಸಿದೆ.

‘ಗುಂಟೂರು ಖಾರಂ’ ಸಿನಿಮಾದಲ್ಲಿ ಮಹೇಶ್ ಬಾಬು ಎದುರಿಗೆ ಕನ್ನಡತಿ ಶ್ರೀಲೀಲಾ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ತ್ರಿವಿಕ್ರಮ್ ಶ್ರೀನಿವಾಸ್. ಮಹೇಶ್ ಬಾಬು ಜೊತೆಗೆ ಇದು ಅವರ ಮೂರನೇ ಸಿನಿಮಾ. ಸಿನಿಮಾದಲ್ಲಿ ರಮ್ಯಾ ಕೃಷ್ಣ, ಪ್ರಕಾಶ್ ರೈ, ರಾವ್ ರಮೇಶ್ ಇನ್ನೂ ಹಲವು ನಟರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ