ಹೀರೋಗಳಿಗೆ ಭಯ ಹುಟ್ಟಿಸುತ್ತಾಳೆ ಈ ಹುಡುಗಿ: ಶ್ರೀಲೀಲಾ ಬಗ್ಗೆ ಹೀಗೇಕೆಂದರು ಮಹೇಶ್ ಬಾಬು

Sreeleela: ನಟಿ ಶ್ರೀಲೀಲಾ ತೆಲುಗಿನಲ್ಲಿ ಟಾಪ್ ನಟಿಯಾಗಿದ್ದಾರೆ. ಹಲವು ದೊಡ್ಡ ನಟರೊಟ್ಟಿಗೆ ನಟಿಸುತ್ತಿದ್ದಾರೆ. ಇದೀಗ ನಟ ಮಹೇಶ್ ಬಾಬು, ಕನ್ನಡದ ನಟಿ ಶ್ರೀಲೀಲಾರನ್ನು ಕೊಂಡಾಡಿ ಮಾತನಾಡಿದ್ದಾರೆ.

ಹೀರೋಗಳಿಗೆ ಭಯ ಹುಟ್ಟಿಸುತ್ತಾಳೆ ಈ ಹುಡುಗಿ: ಶ್ರೀಲೀಲಾ ಬಗ್ಗೆ ಹೀಗೇಕೆಂದರು ಮಹೇಶ್ ಬಾಬು
Follow us
ಮಂಜುನಾಥ ಸಿ.
|

Updated on: Jan 10, 2024 | 7:26 PM

ಕನ್ನಡದ ನಟಿ ಶ್ರೀಲೀಲಾ (Sreeleela) ತೆಲುಗು ಚಿತ್ರರಂಗದಲ್ಲಿ ಬಹು ವೇಗವಾಗಿ ವೃತ್ತಿಯಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ತೆಲುಗು ಚಿತ್ರರಂಗದ ಹಾಲಿ ಟಾಪ್ ನಟಿಯಾಗಿ ಶ್ರೀಲೀಲಾ ಗುರುತು ಪಡೆದುಕೊಂಡಿದ್ದಾರೆ. ತೆಲುಗಿನ ದೊಡ್ಡ ದೊಡ್ಡ ಸ್ಟಾರ್ ನಟರು ಶ್ರೀಲೀಲಾ ತಮ್ಮ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕೆಂದು ಬಯಸುತ್ತಿದ್ದಾರೆ. ಸ್ಟಾರ್ ನಟರುಗಳು ಶ್ರೀಲೀಲಾರ ಪ್ರತಿಭೆ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಶ್ರೀಲೀಲಾ ನಟಿಸಿರುವ ‘ಗುಂಟೂರು ಖಾರಂ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗಷ್ಟೆ ಗುಂಟೂರಿನಲ್ಲಿ ನಡೆಯಿತು ಈ ವೇಳೆ ನಟ ಮಹೇಶ್ ಬಾಬು, ಶ್ರೀಲೀಲಾರನ್ನು ಹೊಗಳಿ ಕೊಂಡಾಡಿದರು.

‘ಬಹಳ ವರ್ಷಗಳ ನಂತರ ನಮ್ಮ ತೆಲುಗು ಯುವತಿ ದೊಡ್ಡ ನಾಯಕಿಯಾಗುತ್ತಿರುವುದು ಬಹಳ ಖುಷಿ ನೀಡುತ್ತಿದೆ. ನಾನು ಈ ವರೆಗೆ ಕೆಲಸ ಮಾಡಿರುವ ನಟಿಯರಲ್ಲಿಯೇ ಅತ್ಯಂತ ಶ್ರಮಪಟ್ಟು, ಸಮರ್ಪಣಾ ಭಾವದೊಟ್ಟಿಗೆ ಕೆಲಸ ಮಾಡುವ ನಟಿ ಶ್ರೀಲೀಲಾ. ಅವರ ಶಾಟ್ ಇರಲಿ ಇಲ್ಲದೇ ಇರಲಿ ಕ್ಯಾರಾವ್ಯಾನ್​ಗೆ ಹೋಗದೆ ಅಲ್ಲಿಯೇ ಮಾನಿಟರ್ ಮುಂದೆ ಕುಳಿತುಕೊಂಡಿರುತ್ತಾರೆ. ನನಗೂ ಹಾಗೂ ನಮ್ಮ ತಂಡಕ್ಕೂ ಶ್ರೀಲೀಲಾ ಎಂದರೆ ಅಚ್ಚು ಮೆಚ್ಚು’ ಎಂದಿದ್ದಾರೆ ಮಹೇಶ್ ಬಾಬು.

‘‘ಈ ಹುಡುಗಿ ಜೊತೆ ಡ್ಯಾನ್ಸ್ ಮಾಡುವುದು ಅಬ್ಬ ಅಸಾಧ್ಯ. ಅದೆಂಥಹಾ ಡ್ಯಾನ್ಸ್ ಮಾಡುತ್ತೆ ಈ ಹುಡುಗಿ. ಹೀರೋಗಳಿಗೆ ಸುಸ್ತಾಗಿ ಕಾಲು ಬಿದ್ದು ಹೋಗುತ್ತೆ. ಈ ಹುಡುಗಿಯೊಟ್ಟಿಗೆ ಡ್ಯಾನ್ಸ್ ಮಾಡುವುದೆಂದರೆ ಭಯವಾಗುತ್ತೆ. ತಮ್ಮ ಕೆಲಸವನ್ನು ತಾನು ಎಂಜಾಯ್ ಮಾಡುತ್ತಾಳೆ ಈ ಹುಡುಗಿ. ಹೀಗೆಯೇ ವೃತ್ತಿಯನ್ನು ಎಂಜಾಯ್ ಮಾಡುತ್ತಾ ಮುಂದೆ ಸಾಗಿ, ಭವಿಷ್ಯದಲ್ಲಿ ಬಹಳ ಒಳ್ಳೆಯ ವೃತ್ತಿ ಜೀವನ ನಿಮ್ಮದಾಗುತ್ತದೆ’ ಎಂದು ಹಾರೈಸಿದ್ದಾರೆ ನಟ ಮಹೇಶ್ ಬಾಬು.

ಇದನ್ನೂ ಓದಿ:ಖಾಸಗಿ ವಿಮಾನದಲ್ಲಿ ಎಂಟ್ರಿ ಕೊಟ್ಟ ‘ಗುಂಟೂರು ಖಾರಂ’ ತಂಡ; ಹೈಲೈಟ್ ಆದ ಶ್ರೀಲೀಲಾ

ಅದೇ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಬಗ್ಗೆ ನಟಿ ಶ್ರೀಲೀಲಾ ಸಹ ಬಹಳ ಕೊಂಡಾಡಿದ್ದಾರೆ. ‘ಮಹೇಶ್ ಬಾಬು ಚಿನ್ನದ ಬೊಂಬೆಗೆ ಜೀವ ಬಂದಂತೆ ಇದ್ದಾರೆ’ ಎಂದೆಲ್ಲ ಹೇಳಿದರು. ಶ್ರೀಲೀಲಾ ಮಹೇಶ್ ಬಾಬು ಅವರನ್ನು ಅತಿಯಾಗಿ ಕೊಂಡಾಡಿ ಮಾಡಿದ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹೇಶ್ ಬಾಬು ಹಾಗೂ ಶ್ರೀಲೀಲಾ ನಟಿಸಿರುವ ‘ಗುಂಟೂರು ಖಾರಂ’ ಸಿನಿಮಾ ಜನವರಿ 12ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ತ್ರಿವಿಕ್ರಮ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವು ಆಕ್ಷನ್ ಹಾಗೂ ಭಾವುಕ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಮಹೇಶ್ ಬಾಬು, ಶ್ರೀಲೀಲಾ ಜೊತೆಗೆ ರಮ್ಯಾ ಕೃಷ್ಣ, ಪ್ರಕಾಶ್ ರೈ, ಜಗಪತಿ ಬಾಬು, ಜಯರಾಂ, ರಾವ್ ರಮೇಶ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಎಸ್ ತಮನ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ