‘ನಾನು ಮಾತ್ರ ಅಲ್ಲಾರೀ..’; ಸ್ಟಾರ್ ಕಲಾವಿದರ ಡ್ರಗ್ಸ್ ಪುರಾಣ ಬಿಚ್ಚಿಟ್ಟ ನಟ ಶೈನ್

ಖ್ಯಾತ ಮಲಯಾಳಂ ನಟ ಶೈನ್ ಟಾಮ್ ಚಾಕೋ ಅವರನ್ನು ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಯಿತು. ಶೂಟಿಂಗ್ ಸೆಟ್‌ನಲ್ಲಿ ಡ್ರಗ್ಸ್ ಸೇವನೆ ಮತ್ತು ನಟಿಗೆ ಕಿರುಕುಳ ನೀಡಿದ ಆರೋಪ ಅವರ ಮೇಲಿತ್ತು. ವಿಚಾರಣೆ ವೇಳೆ ಅವರು ಚಲನಚಿತ್ರೋದ್ಯಮದಲ್ಲಿ ಡ್ರಗ್ಸ್ ಬಳಕೆಯ ಬಗ್ಗೆ ಆಘಾತಕಾರಿ ಬಹಿರಂಗಪಡಿಸಿದ್ದಾರೆ.

‘ನಾನು ಮಾತ್ರ ಅಲ್ಲಾರೀ..’; ಸ್ಟಾರ್ ಕಲಾವಿದರ ಡ್ರಗ್ಸ್ ಪುರಾಣ ಬಿಚ್ಚಿಟ್ಟ ನಟ ಶೈನ್
ಶೈನ್

Updated on: Apr 22, 2025 | 7:01 AM

ಮಲಯಾಳಂನ ಖ್ಯಾತ ನಟ ಶೈನ್ ಟಾಮ್ ಚಾಕೋ (Shine Tom Chacko) ಅವರು ಇತ್ತೀಚೆಗೆ ಡ್ರಗ್ಸ್ ಕೇಸ್​ನಲ್ಲಿ ಅರೆಸ್ಟ್ ಆಗಿದ್ದರು. ಶೂಟಿಂಗ್ ವೇಳೆ ಸೆಟ್​ನಲ್ಲಿ ಅವರು ಡ್ರಗ್ಸ್ ಸೇವನೆ ಮಾಡಿದ ಹಾಗೂ ನಟಿಗೆ ಕಿರುಕುಳ ಕೊಟ್ಟ ಆರೋಪ ಅವರ ಮೇಲೆ ಇತ್ತು. ಆ ಬಳಿಕ ಅವರನ್ನು ಬಂಧಿಸಲಾಯಿತು. ಬಂಧನದ ಬಳಿಕ ಅವರಿಗೆ ಜಾಮೀನು ಸಿಕ್ಕಿದೆ. ಬಂಧನದ ವೇಳೆ ಶೈನ್ ಟಾಮ್ ಚಾಕೋ ಅವರು ಒಂದಷ್ಟು ಶಾಕಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ ಎನ್ನಲಾಗಿದೆ.

ಶೈನ್ ಟಾಮ್ ಚಾಕೋ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಪೊಲೀಸರು ಶೈನ್​ ಅವರಿಗೆ ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಶೈನ್ ಅವರು ಡ್ರಗ್ಸ್ ಬಳಕೆ ಮಾಡಿರೋ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಮೆಥಾಂಫೆಟಮೈನ್ ಮತ್ತು ಕ್ಯಾನ್​ಬಿಸ್ ಡ್ರಗ್ಸ್​ನ ಇವರು ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ. ಇಂಡಸ್ಟ್ರಿಯ ಕೆಲವು ಪ್ರಮುಖ ಕಲಾವಿದರು ಡ್ರಗ್ಸ್ ಸೇವನೆ ಮಾಡುತ್ತಾರೆ ಎಂಬ ವಿಚಾರವನ್ನು ಅವರು ರಿವೀಲ್ ಮಾಡಿದ್ದಾರೆ.

ತಾವು ಫೋನ್ ಮೂಲಕ ಸಂಪರ್ಕದಲ್ಲಿದ್ದ ವಿದೇಶಿ ಮಲಯಾಳಿ ಮಹಿಳೆಯನ್ನು ಭೇಟಿ ಮಾಡಲು ಕೊಚ್ಚಿಯ ವೇದಾಂತ ಹೋಟೆಲ್‌ಗೆ ಹೋಗಿದ್ದಾಗಿ ಶೈನ್ ಒಪ್ಪಿಕೊಂಡಿದ್ದಾರೆ. ಮಾದಕ ದ್ರವ್ಯಗಳ ವಹಿವಾಟು ನಡೆಸಿದ್ದಾಗಿಯೂ ಅವರು ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಈ ಡ್ರಗ್ಸ್ ವ್ಯವಹಾರಗಳಲ್ಲಿ ಭಾಗಿಯಾಗಿರುವ ನಿಖರವಾದ ವ್ಯಕ್ತಿಗಳು ಯಾರೆಂದು ತಮಗೆ ನೆನಪಿಲ್ಲ ಎಂದಿದ್ದಾರೆ. ತಾವು ಯಾವಾಗ ತೆರಳಿದ್ದು, ಎಷ್ಟು ಗಂಟೆಗೆ ಅಲ್ಲಿ ವ್ಯವಹಾರ ನಡೆಸಿದೆ ಎಂಬಿತ್ಯಾದಿ ಮಾಹಿತಿಗಳು ಮರೆತಿದೆ ಎಂಬುದು ಶೈನ್ ಹೇಳಿಕೆ.

ಇದನ್ನೂ ಓದಿ
ಈಗ ಪತ್ನಿಯೇ ಸರ್ವಸ್ವ; ವಿಜಯಲಕ್ಷ್ಮೀ ಜೊತೆ ಭರನಾಟ್ಯ ನೋಡಲು ಬಂದ ದರ್ಶನ್
ಶಿವರಾಜ್​ಕುಮಾರ್-ಗೀತಾ ಪ್ರೇಮ ನೋಡಿ ಆ ವ್ಯಕ್ತಿಗೆ ನಿಜಕ್ಕೂ ಶಾಕ್ ಆಗಿತ್ತು..
ರಾವಣನಾಗಿ ‘ರಾಮಾಯಣ’ ಆರಂಭಿಸುವುದಕ್ಕೂ ಮೊದಲು ಮಹತ್ವದ ಕೆಲಸ ಮಾಡಿದ ಯಶ್  
ಫ್ಯಾನ್ಸಿ ಹೆಸರಲ್ಲ.. ಮಗನಿಗೆ ಪೌರಾಣಿಕ ಪಾತ್ರದ ಹೆಸರಿಟ್ಟ ಪ್ರಣಿತಾ ಸುಭಾಷ್

‘ನಾನು ಸೇರಿದಂತೆ ಕೆಲವೇ ಕೆಲವು ಕಲಾವಿದರನ್ನು ಇಲ್ಲಿ ದೂಷಿಸಲಾಗುತ್ತದೆ. ಆದರೆ, ಬಹುತೇಕ ಕಲಾವಿದರು ಇಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ’ ಎನ್ನುವ ಮೂಲಕ ದೊಡ್ಡ ಬಾಂಬ್ ಸಿಡಿಸಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಡ್ರಗ್ಸ್ ಕೇಸ್​ನಲ್ಲಿ ಅನೇಕರು ವಿಚಾರಣೆ ಎದುರಿಸಿದರು. ಈಗಲೂ ಹಾಗೆಯೇ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಡ್ರಗ್ಸ್ ಕೇಸ್​ನಲ್ಲಿ ನಟ ಶೈನ್ ಟಾಮ್ ಚಾಕೋ ಬಂಧನ; ಕೆಲವೇ ಗಂಟೆಗಳಲ್ಲಿ ಸಿಕ್ತು ಜಾಮೀನು

ಶೈನ್ ಅವರು 2000-5000 ರೂಪಾಯಿವರೆಗೆ ವಿವಿಧ ವ್ಯಕ್ತಿಗಳ ಜೊತೆ ಹಣಕಾಸಿನ ವ್ಯವಹಾರ ಮಾಡಿದ್ದರು. ಇದು ಶೈನ್ ಅವರು ವಿವಿಧ ಜನರಿಗೆ ನೀಡಿದ ಸಾಲ ಆಗಿದ್ದು, ಇದನ್ನು ಅವರು ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.