ಮಲಯಾಳಂ ಚಿತ್ರರಂಗದ (Mollywood) ಬೇರೆಯದೇ ರೀತಿಯಲ್ಲಿ ಗುರುತಿಸಿಕೊಂಡಿದೆ. ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಹಾರರ್ ಸಿನಿಮಾಗಳನ್ನು ಮಾಡಲು ಇವರು ಎತ್ತಿದ ಕೈ. ಈ ಕಾರಣದಿಂದಲೇ ಮಲಯಾಳಂ ಸಿನಿಮಾಗಳು ಹೆಚ್ಚು ಇಷ್ಟವಾಗುತ್ತವೆ. ಯಾವುದೇ ಆಡಂಬರ ಇಲ್ಲದೆ, ಸಿಂಪಲ್ ಆಗಿ ಸಿನಿಮಾಗಳನ್ನು ಕಟ್ಟಿ ಕೊಡಲಾಗುತ್ತದೆ. ಇದು ಹೆಚ್ಚು ಜನರಿಗೆ ಇಷ್ಟವಾಗುತ್ತದೆ. ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಹಾರರ್ ಸಿನಿಮಾಗಳು ಬಂದಿವೆ. ನೀವು ಹಾರರ್ ಪ್ರಿಯರಾಗಿದ್ದರೆ ಈ ಸಿನಿಮಾಗಳು ನಿಮಗೆ ಇಷ್ಟವಾಗಬಹುದು.
ಮಮ್ಮೂಟಿ ನಟನೆಯ ‘ಬ್ರಹ್ಮಯುಗಂ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾಗೆ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿದೆ. ಹಾರರ್ ಶೈಲಿಯಲ್ಲಿ ಮೂಡಿ ಬಂದ ಈ ಸಿನಿಮಾ ಎಲ್ಲರ ಗಮನ ಸೆಳೆದಿದೆ. ಬ್ಲ್ಯಾಕ್ ಮ್ಯಾಜಿಕ್ ಕಥೆಯನ್ನು ಚಿತ್ರ ಹೊಂದಿದೆ. ಮಮ್ಮೂಟಿ ನಟನೆ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಈ ಸಿನಿಮಾ ಐಎಂಡಿಬಿಯಲ್ಲಿ 8+ ರೇಟಿಂಗ್ ಪಡೆದಿದೆ.
ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಇಜ್ರಾ’ ಸಿನಿಮಾ 2017ರಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ಎಲ್ಲ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಇದು ಸೂಪರ್ ನ್ಯಾಚುರಲ್ ಹಾರರ್ ಥ್ರಿಲ್ಲರ್ ಫಿಲ್ಮ್. ಈ ಸಿನಿಮಾ 50 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಸಿನಿಮಾ ಹಾರರ್ ಮಂದಿ ಇಷ್ಟಪಟ್ಟಿದ್ದಾರೆ. ಆ್ಯಂಟಿಕ್ ಬಾಕ್ಸ್ ಒಂದನ್ನು ಕಥಾ ನಾಯಕ ಖರೀದಿಸುತ್ತಾನೆ. ಅಲ್ಲಿಂದ ಕಥೆ ಆರಂಭ ಆಗುತ್ತದೆ.
2022ರಲ್ಲಿ ‘ಕುಮಾರಿ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಮದುವೆ ಬಳಿಕ ಮಹಿಳೆ ಶಾಪಕ್ಕೆ ಒಳಗಾದ ಜಾಗಕ್ಕೆ ತೆರಳುತ್ತಾಳೆ. ಈ ಸಿನಿಮಾದಲ್ಲಿ ಗಿಜು ಜಾನ್, ನಿರ್ಮಲಾ ಸಹದೇವ್, ಜೇಕ್ಸ್ ಬಿಜೋಯ್ ಮೊದಲಾದವರು ನಟಿಸಿದ್ದಾರೆ.
2022ರಲ್ಲಿ ರಿಲೀಸ್ ಆದ ‘ಭೂತಕಾಲಂ’ ಸಿನಿಮಾ ಸೋನಿಲಿವ್ ಆ್ಯಪ್ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದಲ್ಲಿ ಶೇನ್ ನಿಗಮ್, ರೇವತಿ ಮೊದಲಾದವರು ನಟಿಸಿದ್ದಾರೆ. ಎರಡು ಗಂಟೆಗೂ ಕಡಿಮೆ ಅವಧಿ ಹೊಂದಿರುವ ಈ ಸಿನಿಮಾನ ಹಾರರ್ ಮಂದಿ ಇಷ್ಟಪಟ್ಟಿದ್ದಾರೆ.
ಟೊವಿನೋ ಥಾಮಸ್ ನಟನೆಯ ‘ನೀಲವೇಲಿಚಂ’ ಸಿನಿಮಾ ಭಿನ್ನವಾಗಿ ಗುರುತಿಸಿಕೊಂಡಿದೆ. ದೆವ್ವ ಇರುವ ಮನೆಯೊಂದರಲ್ಲಿ ಕಥಾ ನಾಯಕ ಬಂದು ಉಳಿದುಕೊಂಡಿರುತ್ತಾನೆ. ಆತನಿಗೆ ಬರೆಯೋ ಹುಚ್ಚು. ಅವನು ಇರುವ ಮನೆಯಲ್ಲೇ ದೆವ್ವ ಇರುತ್ತದೆ. ಆ ಮನೆಯಲ್ಲಿ ಒಂದು ಆತ್ಮಹತ್ಯೆ ನಡೆದಿರುತ್ತದೆ. ಆರಂಭದಲ್ಲಿ ಕುತೂಹಲ ಹುಟ್ಟುಹಾಕುವ ಈ ಸಿನಿಮಾ ನಂತರ ಸಪ್ಪೆ ಎನಿಸುತ್ತದೆ. ಈ ಸಿನಿಮಾ ಧಾರಾವಾಹಿಯ ಫೀಲ್ ಕೊಟ್ಟರೂ ಅಚ್ಚರಿ ಏನಿಲ್ಲ.
2021ರಲ್ಲಿ ಬಂದ ‘ಕೋಲ್ಡ್ ಕೇಸ್’ ಗಮನ ಸೆಳೆದಿದೆ. ಇದು ಒಟಿಟಿಯಲ್ಲಿ ಲಭ್ಯವಿದೆ. ಪೃಥ್ವಿರಾಜ್ ಸುಕುಮಾರನ್ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಅವರ ನಟನೆ ಎಲ್ಲರಿಗೂ ಇಷ್ಟವಾಗಿದೆ. ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ.
ಇದನ್ನೂ ಓದಿ: ಮಮ್ಮೂಟಿ ನಟನೆಯ ‘ಬ್ರಹ್ಮಯುಗಂ’ ಚಿತ್ರಕ್ಕೆ ಕೊನೆಯ ಕ್ಷಣದಲ್ಲಿ ಎದುರಾಯ್ತು ಸಂಕಷ್ಟ
2018ರಲ್ಲಿ ರಿಲೀಸ್ ಆದ ‘9’ ಸಿನಿಮಾ ಕೂಡ ಹಾರರ್ ಶೈಲಿಯಲ್ಲಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರು ನಟಿಸಿದ್ದಾರೆ. ಇದು ಸೈನ್ಸ್ ಫಿಕ್ಷನ್ ಹಾರರ್ ಚಿತ್ರ.
1964ರಲ್ಲಿ ಬಂದ ‘ಭಾರ್ಗವಿ’ ಸಿನಿಮಾ ಕೂಡ ಹಾರರ್ ಶೈಲಿಯಲ್ಲಿ ಮೂಡಿ ಬಂದಿದೆ. ಇದಲ್ಲದೆ ‘ರೋಮಾಂಚನಮ್’ ಸಿನಿಮಾ ಕೂಡ ಗಮನ ಸೆಳೆದಿದೆ. ನೀವು ಹಾರರ್ ಪ್ರಿಯರಾಗಿದ್ದರೆ ಸಮಯ ಸಿಕ್ಕಾಗ ಈ ಚಿತ್ರಗಳನ್ನು ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ