ಮಮ್ಮೂಟಿ ನಟನೆಯ ‘ಭ್ರಮಯುಗಂ’ ಚಿತ್ರಕ್ಕೆ ಕೊನೆಯ ಕ್ಷಣದಲ್ಲಿ ಎದುರಾಯ್ತು ಸಂಕಷ್ಟ

ಈ ಮೊದಲು ಮಮ್ಮೂಟಿ ನಿರ್ವಹಿಸಿದ್ದ ಪಾತ್ರದ ಹೆಸರು ಕುಂಜಮೋನ್ ಎಂದಿತ್ತು. ಈಗ ಪುಂಜಮೋನ್ ಅವರು ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಹೇಳಿದ್ದಾರೆ. ಮಾಟ ಮಂತ್ರದ ವಿಚಾರದಲ್ಲಿ ನಮ್ಮ ಕುಟುಂಬವನ್ನು ಎಳೆದು ತರಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈಗ ಪಾತ್ರದ ಹೆಸರು ಬದಲಾಗಿದೆ.

ಮಮ್ಮೂಟಿ ನಟನೆಯ ‘ಭ್ರಮಯುಗಂ’ ಚಿತ್ರಕ್ಕೆ ಕೊನೆಯ ಕ್ಷಣದಲ್ಲಿ ಎದುರಾಯ್ತು ಸಂಕಷ್ಟ
ಬ್ರಹ್ಮಯುಗ
Follow us
ರಾಜೇಶ್ ದುಗ್ಗುಮನೆ
|

Updated on:Mar 16, 2024 | 12:37 PM

ನಟ ಮಮ್ಮೂಟಿ (Mammootty) ಅವರು ಹಲವು ರೀತಿಯ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಅವರ ನಟನೆಯ ‘ಭ್ರಮಯುಗಂ’ ಸಿನಿಮಾ ಇಂದು (ಫೆಬ್ರವರಿ 15) ಥಿಯೇಟರ್ ಮೂಲಕ ರಿಲೀಸ್ ಆಗಿದೆ. ಈ ಚಿತ್ರ ರಿಲೀಸ್​ಗೂ ಮೊದಲೇ ವಿವಾದ ಸೃಷ್ಟಿ ಮಾಡಿದೆ. ಈ ಚಿತ್ರದ ಪಾತ್ರದ ವಿರುದ್ಧ ಪುಂಜಮೋನ್ ಇಲ್ಲಂ ಎಂಬುವವರು ಕೇರಳದ ಹೈಕೋರ್ಟ್​ನಲ್ಲಿ ಕೇಸ್ ದಾಖಲು ಮಾಡಿದ್ದರು. ಈ ಕಾರಣಕ್ಕೆ ಕೊನೆಯ ಕ್ಷಣದಲ್ಲಿ ಮಮ್ಮೂಟಿ ನಿರ್ವಹಿಸಿದ್ದ ಪಾತ್ರದ ಹೆಸರನ್ನು ಬದಲಾಯಿಸಲಾಗಿದೆ.

ಈ ಮೊದಲು ಮಮ್ಮೂಟಿ ನಿರ್ವಹಿಸಿದ್ದ ಪಾತ್ರದ ಹೆಸರು ಕುಂಜಮೋನ್ ಎಂದಿತ್ತು. ಈಗ ಪುಂಜಮೋನ್ ಅವರು ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಹೇಳಿದ್ದಾರೆ. ಮಾಟ ಮಂತ್ರದ ವಿಚಾರದಲ್ಲಿ ನಮ್ಮ ಕುಟುಂಬವನ್ನು ಎಳೆದು ತರಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕಾರಣಕ್ಕೆ ಕುಂಜಮೋನ್ ಎಂದಿದ್ದ ಪಾತ್ರದ ಹೆಸರನ್ನು ಕೊಡುಮೋನ್ ಎಂದು ಬದಲಾಯಿಸಲಾಗಿದೆ.

‘ಮುಖ್ಯ ಪಾತ್ರದ ಹೆಸರು ಮತ್ತು ಅವರ ಸಾಂಪ್ರದಾಯಿಕ ಮನೆ ಹೆಸರನ್ನು ಬದಲಾಯಿಸದಿದ್ದರೆ ಅದು ಅರ್ಜಿದಾರರಿಗೆ, ಅವರ ಕುಟುಂಬ ಸದಸ್ಯರು, ಪೂರ್ವಜರು ಮತ್ತು ಮುಂದಿನ ಜನರೇಷನ್ ಮೇಲೆ ಗಂಭೀರವಾದ ಪೂರ್ವಗ್ರಹವನ್ನು ಉಂಟುಮಾಡುತ್ತದೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಿನಿಮಾ ವಿಷಯಗಳ ಬಗ್ಗೆ ಸಿನಿಮಾ ತಂಡದ ಯಾರೊಬ್ಬರೂ ಮಾತನಾಡಿಲ್ಲ’ ಎಂದು ಅರ್ಜಿದಾರರು ದೂರಿದ್ದಾರೆ.

ಈ ವಿಚಾರಕ್ಕೆ ಸಿನಿಮಾ ತಂಡದವರು ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಮಮ್ಮೂಟಿ ಪಾತ್ರದ ಹೆಸರನ್ನು ಬದಲಾಯಿಸಲಾಗಿದೆ ಎಂದು ಕೋರ್ಟ್​ಗೆ ತಂಡ ತಿಳಿಸಿದೆ. ಈ ವಿಚಾರವನ್ನು ಅವರು ಸೆನ್ಸಾರ್ ಮಂಡಳಿಯ ಗಮನಕ್ಕೂ ತಂದಿದ್ದಾರೆ. ಹೀಗಾಗಿ, ಕೇರಳ ಹೈಕೋರ್ಟ್ ಅರ್ಜಿಯನ್ನು ಕ್ಲೋಸ್ ಮಾಡಿದೆ.

ಇದನ್ನೂ ಓದಿ: ಮಮ್ಮುಟ್ಟಿ ಹೊಸ ಪ್ಯಾನ್​ ಇಂಡಿಯಾ ಸಿನಿಮಾ ‘ಭ್ರಮಯುಗಂ’; ಕನ್ನಡದಲ್ಲೂ ಬರಲಿದೆ ಈ ಚಿತ್ರ

‘ಭ್ರಮಯುಗಂ’ ಸಿನಿಮಾನ ರಾಹುಲ್ ಸದಾಶಿವನ್ ಅವರು ನಿರ್ದೇಶನ ಮಾಡಿದ್ದಾರೆ. ಹಾರರ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಮಮ್ಮೂಟಿ ಜೊತೆ ಸಿದ್ಧಾರ್ಥ್ ಭರತನ್, ಅಮಲ್ದಾ ಲಿಜ್, ಅರ್ಜುನ್ ಅಶೋಕನ್ ಮೊದಲಾದವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೊದಲ ಲುಕ್ ಮಮ್ಮೂಟಿ ಅವರ ಬರ್ತ್​ಡೇ ಪ್ರಯುಕ್ತ ರಿಲೀಸ್ ಮಾಡಲಾಗಿತ್ತು. ಈ ಚಿತ್ರದ ಟ್ರೇಲರ್ ಹಾಗೂ ಟೀಸರ್ ಕೂಡ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:19 pm, Thu, 15 February 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ