ಮಮ್ಮುಟ್ಟಿ ಹೊಸ ಪ್ಯಾನ್ ಇಂಡಿಯಾ ಸಿನಿಮಾ ‘ಬ್ರಹ್ಮಯುಗಂ’; ಕನ್ನಡದಲ್ಲೂ ಬರಲಿದೆ ಈ ಚಿತ್ರ
‘ಬ್ರಹ್ಮಯುಗಂ’ ಸಿನಿಮಾಗೆ ರಾಹುಲ್ ಸದಾಶಿವನ್ ಅವರು ನಿರ್ದೇಶನ ಮಾಡಲಿದ್ದಾರೆ. ಮಮ್ಮುಟ್ಟಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಅವರು ಖುಷಿಯಾಗಿದ್ದಾರೆ. ಈಗ ಪೋಸ್ಟರ್ ಬಿಡುಗಡೆ ಆಗಿದ್ದು, ಗಮನ ಸೆಳೆಯುತ್ತಿದೆ. 2024ರ ಪ್ರಾರಂಭದಲ್ಲಿ ಏಕಕಾಲಕ್ಕೆ ಮಲಯಾಳಂ, ಕನ್ನಡ, ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಈ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ.

ಇತ್ತೀಚಿನ ವರ್ಷಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು (Pan India Movie) ಹೆಚ್ಚಾಗಿ ಸದ್ದು ಮಾಡುತ್ತಿವೆ. ಎಲ್ಲ ಸ್ಟಾರ್ ನಟರು ಬಹುಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಮೂಲಕ ದೇಶವ್ಯಾಪಿ ಮಾರುಕಟ್ಟೆ ಮೇಲೆ ಕಣ್ಣು ಇಟ್ಟಿದ್ದಾರೆ. ಮಲಯಾಳಂ ಚಿತ್ರರಂಗದ ಸ್ಟಾರ್ ಹೀರೋ ಮಮ್ಮುಟ್ಟಿ (Mammootty) ಕೂಡ ಒಂದು ಪ್ಯಾನ್ ಇಂಡಿಯಾ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಇತ್ತೀಚೆಗಷ್ಟೇ ಘೋಷಣೆ ಆಗಿದೆ. ಟೈಟಲ್ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರತಂಡ ಬ್ರೇಕಿಂಗ್ ನ್ಯೂಸ್ ನೀಡಿದೆ. ಈ ಚಿತ್ರಕ್ಕೆ ‘ಬ್ರಹ್ಮಯುಗಂ’ (Bramayugam) ಎಂದು ಶೀರ್ಷಿಕೆ ಇಡಲಾಗಿದೆ. ಟೈಟಲ್ ಕೇಳಿ ಮಮ್ಮುಟ್ಟಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಸಿನಿಮಾ ಕನ್ನಡದಲ್ಲೂ ಬಿಡುಗಡೆ ಆಗಲಿದೆ ಎಂಬುದು ವಿಶೇಷ. ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಆಗಲಿರುವ ‘ಬ್ರಹ್ಮಯುಗಂ’ ಸಿನಿಮಾ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..
ಈಗಾಗಲೇ ಅನೇಕ ಯಶಸ್ವಿ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡಿರುವ ನಿರ್ಮಾಪಕರಾದ ಎಸ್. ಶಶಿಕಾಂತ್ ಹಾಗೂ ಚಕ್ರವರ್ತಿ ರಾಮಚಂದ್ರ ಅವರು ಜಂಟಿಯಾಗಿ ‘ನೈಟ್ ಶಿಫ್ಟ್’ ಮತ್ತು ‘ನೈ ನಾಟ್ ಸ್ಟುಡಿಯೋಸ್’ ಮೂಲಕ ‘ಬ್ರಹ್ಮಯುಗಂ’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಶೀರ್ಷಿಕೆಯ ಜೊತೆ ಇರುವ ‘ದಿ ಏಜ್ ಆಫ್ ಮ್ಯಾಡ್ನೆಸ್’ ಎಂಬ ಟ್ಯಾಗ್ ಲೈನ್ ಗಮನ ಸೆಳೆಯುತ್ತಿದೆ. ಟೈಟಲ್ ಅನಾವರಣ ಮಾಡುವ ಮೂಲಕ ಸಿನಿಪ್ರಿಯರಲ್ಲಿ ಆಸಕ್ತಿ ಮೂಡಿಸಲಾಗಿದೆ. ಈ ಪೋಸ್ಟರ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕಷ್ಟು ಕೌತುಕ ಮೂಡುತ್ತದೆ.
ಮಮ್ಮುಟ್ಟಿ ಟ್ವೀಟ್:
#Bramayugam Pooja pic.twitter.com/98k8kaIJ5G
— Mammootty (@mammukka) August 17, 2023
‘ಬ್ರಹ್ಮಯುಗಂ’ ಸಿನಿಮಾಗೆ ರಾಹುಲ್ ಸದಾಶಿವನ್ ಅವರು ನಿರ್ದೇಶನ ಮಾಡಲಿದ್ದಾರೆ. ಮಮ್ಮುಟ್ಟಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಅವರು ಖುಷಿಯಾಗಿದ್ದಾರೆ. ‘ಲೆಜೆಂಡರಿ ನಟನ ಸಿನಿಮಾಗೆ ನಿರ್ದೇಶನ ಮಾಡುವ ನನ್ನ ಕನಸು ಈಗ ನನಸಾಗುತ್ತಿದೆ. ಈ ಕೆಲಸಕ್ಕೆ ಬೆನ್ನೆಲುಬಾಗಿ ಇರುವ ನಿರ್ಮಾಪಕರಿಗೆ ಧನ್ಯವಾದಗಳು. ಕೇರಳದ ಕರಾಳ ಯುಗದಲ್ಲಿ ಬೇರೂರಿರುವ ಕಥೆ ಈ ಸಿನಿಮಾದಲ್ಲಿ ಇರಲಿದೆ. ಖಂಡಿತವಾಗಿಯೂ ಈ ಚಿತ್ರವು ಮಮ್ಮುಟ್ಟಿ ಅವರ ಅಭಿಮಾನಿಗಳಿಗೆ ಇಷ್ಟವಾಗಲಿದೆ’ ಎಂದು ನಿರ್ದೇಶಕ ಸದಾಶಿವನ್ ಹೇಳಿದ್ದಾರೆ.
ಅಶಿಸ್ತು: ಮಲಯಾಳಂ ಚಿತ್ರರಂಗದಿಂದ ಇಬ್ಬರು ಜನಪ್ರಿಯ ನಟರ ಬ್ಯಾನ್
ಮೊದಲು ಹೇಳಿದಂತೆ ಇದು ಪ್ಯಾನ್ ಇಂಡಿಯಾ ಸಿನಿಮಾ. 2024ರ ಪ್ರಾರಂಭದಲ್ಲಿ ಏಕಕಾಲಕ್ಕೆ ಮಲಯಾಳಂ, ಕನ್ನಡ, ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಮಮ್ಮುಟ್ಟಿ ಜೊತೆ ಸಿದ್ದಾರ್ಥ್ ಭರತನ್, ಅರ್ಜುನ್ ಅಶೋಕನ್ ಮುಂತಾದ ಕಲಾವಿದರು ನಟಿಸಲಿದ್ದಾರೆ. ಕ್ರಿಸ್ಟೋ ಕ್ಸೇವಿಯರ್ ಸಂಗೀತ ನಿರ್ದೇಶನ, ಶೆಹನಾದ್ ಜಲಾಲ್ ಅವರ ಛಾಯಾಗ್ರಹಣ, ಶಫಿಕ್ಯೂ ಮೊಹಮ್ಮದ್ ಅಲಿ ಅವರ ಸಂಕಲನದಲ್ಲಿ ಈ ಸಿನಿಮಾ ಮೂಡಿಬರಲಿದೆ. ಟಿ.ಡಿ. ರಾಮಕೃಷ್ಣ ಅವರು ಸಂಭಾಷಣೆ ಬರೆಯುತ್ತಿದ್ದಾರೆ.
ಮಲಯಾಳಂ ಚಿತ್ರರಂಗದ ಮೇಲೆ ನಿಗಾ: ಚಿತ್ರೀಕರಣ ಸೆಟ್ನಲ್ಲಿ ಮಾರುವೇಷದಲ್ಲಿ ಪೊಲೀಸರು
‘ನಮ್ಮ ಸಂಸ್ಥೆಯ ಚಿತ್ರದಲ್ಲಿ ಮಮ್ಮುಟ್ಟಿ ನಟಿಸುತ್ತಿರುವುದು ಹೆಮ್ಮೆಯ ಸಂಗತಿ. ಅವರ ಅಪಾರ ಅನುಭವಕ್ಕೆ ಇದು ಸೂಕ್ತವಾದ ಸಿನಿಮಾ ಆಗಲಿದೆ. ನಿರ್ದೇಶಕರು ತಾರಾಗಣ ಮತ್ತು ತಂತ್ರಜ್ಞರ ಆಯ್ಕೆ ಮಾಡಿದ್ದಾರೆ. ಕೊಚ್ಚಿ, ಒಟ್ಟಪಾಲಂ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗುವುದು’ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:17 pm, Fri, 18 August 23